ಸ್ಕೋಡಾ ಹೊಸ ಯೆಟಿ ರಸ್ತೆಗೆ, ದರವೆಷ್ಟು?

ನೂತನ ಯುಟಿ 4X2 ಕಾರಿನಲ್ಲಿ ಹಳೆಯ 2 ಲೀಟರ್ ಟಿಡಿಐ ಟರ್ಬೊ ಡೀಸೆಲ್ ಎಂಜಿನ್ ಇದೆ. ಇದು 110 ಅಶ್ವಶಕ್ತಿ, 250 ಎನ್ ಎಂ ಟಾರ್ಕ್ ಪವರ್ ನೀಡುತ್ತದೆ. ಸ್ಕೋಡಾ ಫೋರ್ ವೀಲ್ಹ್ ಡ್ರೈವ್ ಯೆಟಿಗೆ ಹೋಲಿಸಿದರೆ ಇದರಲ್ಲಿ ಕೊಂಚ ಹೆಚ್ಚು ಇಂಧನ ದಕ್ಷತೆ ನಿರೀಕ್ಷಿಸಬಹುದಾಗಿದೆ.
ಹಳೆಯ ಯೆಟಿ 4X4 ಹೆಚ್ಚು ಶಕ್ತಿಶಾಲಿಯಾದ 2 ಲೀಟರಿನ ಟಿಡಿಐ ಟರ್ಬೊ ಡೀಸೆಲ್ ಎಂಜಿನ್ ಹೊಂದಿದೆ. ಇದು 140 ಹಾರ್ಸ್ ಪವರ್ ಮತ್ತು 220 ಎನ್ ಎಂ ಪವರ್ ನೀಡುತ್ತದೆ. ಹಳೆಯ ಆವೃತ್ತಿ 6 ಸ್ಪೀಡ್ ಮ್ಯಾನುಯಲ್ ಟ್ರಾನ್ಸ್ ಮಿಷನ್ ಹೊಂದಿದೆ.
ನೂತನ ಸ್ಕೋಡಾ ಯೆಟಿ 4X2 ಕಾರಿನಲ್ಲಿ ಸಾಕಷ್ಟು ಸುರಕ್ಷತೆಯ ಫೀಚರುಗಳಿವೆ. ಆಂಟಿ ಲಾಕಿಂಗ್ ಬ್ರೇಕ್ ಸಿಸ್ಟಮ್, ಏರ್ ಬ್ಯಾಗ್, ಟ್ರಾಕ್ಷನ್ ಕಂಟ್ರೊಲ್ ಇತ್ಯಾದಿ ಸೇಫ್ಟಿ ಫೀಚರುಗಳಿವೆ. ಉಳಿದಂತೆ ಹಿಲ್ ಹೋಲ್ಡ್, ಎಲೆಕ್ಟ್ರಾನಿಕ್ ಲಾಕ್ಸ್ ಮುಂತಾದ ಫೀಚರುಗಳಿವೆ. ಈ ಫೀಚರುಗಳು ಹಳೆಯ ಯೆಟಿ ಕಾರಿನಲ್ಲೂ ಇತ್ತು.
ನೂತನ ಯೆಟಿ ಆಕ್ಟಿವ್ ಆವೃತ್ತಿ ದರ ಎಲಿಜೆನ್ಸ್ ಗಿಂತ 2 ಲಕ್ಷ ರು. ಕಡಿಮೆಯಿದೆ. ಆಂಬಿಷನ್ ಆವೃತ್ತಿ ದರ ಎಲಿಗೆನ್ಸ್ ಆವೃತ್ತಿಗಿಂತ ಒಂದು ಲಕ್ಷ ರು. ಕಡಿಮೆಯಿದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ನೂತನ ಯೆಟಿ 4X2 ದರ ಸುಮಾರು 13.35 ಲಕ್ಷ ರುಪಾಯಿ ಆಸುಪಾಸಿನಲ್ಲಿದೆ.


Click it and Unblock the Notifications








