ನವೆಂಬರ್ 16ರಂದು ಸ್ಕೋಡಾ ರಾಪಿಡ್ ರಸ್ತೆಗೆ

ರಾಪಿಡ್ ಕಾರು ಹಳೆಯ ಅಕ್ಟಾವಿಯಾ ಕಾರಿನ ಬದಲಿಗೆ ಬಂದಿದೆ. ದೇಶದ ರಸ್ತೆಗೆ ಫಾಬಿಯಾದ ಸೆಡಾನ್ ಆವೃತ್ತಿ ಬರಲಿದೆ ಎಂಬ ಗುಲ್ಲು ಈ ಹಿಂದೆ ಕೇಳಿ ಬಂದಿತ್ತು. ಆದರೆ ಕಂಪನಿಯು ಹೊಸ ರಾಪಿಡ್ ಕಾರನ್ನು ಅಭಿವೃದ್ಧಿಪಡಿಸಿ ಎಲ್ಲರನ್ನೂ ಅಚ್ಚರಿಗೊಳಿಸಿದೆ.
ಕಂಪನಿಯು ನೂತನ ಕಾರಿನ ಎಂಜಿನ್ ಮಾಹಿತಿ ಬಹಿರಂಗಪಡಿಸಿದೆ. ಈ ಕಾರು 1.6 ಲೀಟರಿನ ಪೆಟ್ರೋಲ್ ಎಂಜಿನ್ ಮತ್ತು 1.6 ಲೀಟರಿನ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ದೊರಕಲಿದೆಯಂತೆ. ಈ ಕಾರು ಆಟೋಮ್ಯಾಟಿಕ್ ಗೇರ್ ಆಯ್ಕೆಯಲ್ಲಿ ಮಾತ್ರ ದೊರಕಲಿದೆ. ಆದರೆ ಮ್ಯಾನುಯಲ್ ಗೇರು ಲಭ್ಯವಿರುವುದಿಲ್ಲವಂತೆ.


Click it and Unblock the Notifications








