ಕುಡಿದು ವಾಹನ ಚಲಾಯಿಸ್ತಿರಾ? ಇನ್ನು ಜೈಲೇ ಗತಿ

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ನೇಮಿಸಿದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಂಡಳಿಯ ವರದಿಯನ್ನು ಕೇಂದ್ರ ಸರಕಾರ ಪರಿಶೀಲಿಸಿದೆ. ಇದರಲ್ಲಿ ಹಲವು ನಿಯಮಗಳನ್ನು ಅನುಷ್ಠಾನಗೊಳಿಸುವಂತೆ ಶಿಫಾರಸು ಮಾಡಲಾಗಿದೆ. ರಸ್ತೆ ಸಾರಿಗೆ ಸಚಿವ ಸಿಪಿ ಜೋಶಿ ಈ ಮಂಡಳಿಯ ನೇತೃತ್ವ ವಹಿಸಿದ್ದರು.
1982ರ ಮೋಟರ್ ವಾಹನ ಕಾಯ್ದೆಯ 185ನೇ ಸೆಕ್ಷನ್ ಅನ್ವಯ ಕುಡಿದು ವಾಹನ ಚಲಾಯಿಸುವರಿಗೆ 2 ಸಾವಿರ ರು.ವರೆಗೆ ದಂಡ ಅಥವಾ 6 ತಿಂಗಳವರೆಗೆ ಜೈಲು, ಅಥವಾ ಇವೆರಡು ಶಿಕ್ಷೆ ವಿಧಿಸಬಹುದಾಗಿದೆ.
ಅಷ್ಟೇ ಅಲ್ಲ, ಹೀಗೆ ಶಿಕ್ಷೆ ಅಥವಾ ದಂಡ ಕ್ಕೆ ಒಳಗಾದವರು ಮತ್ತೆ ಮೂರು ವರ್ಷದೊಳಗೆ ಇದೇ ತಪ್ಪು ಮಾಡಿ ಸಿಕ್ಕಿಬಿದ್ದರೆ 3 ಸಾವಿರ ರು. ದಂಡ ಮತ್ತು 2 ವರ್ಷ ಜೈಲು ಶಿಕ್ಷೆ ವಿಧಿಸಲು ಮೋಟರ್ ವಾಹನ ಕಾಯ್ದೆಯಲ್ಲಿ ಅವಕಾಶವಿದೆ.
ಈ ಕುರಿತು ಚಳಿಗಾಲದ ಅಧಿವೇಶನದಲ್ಲಿ ತಿದ್ದುಪಡಿ ಮಸೂದೆ ಮಂಡಿಸಲಾಗುವುದು ಎಂದು ರಸ್ತೆ ಸಾರಿಗೆ ಸಚಿವಾಲಯದ ಕಾರ್ಯದರ್ಶಿ ಎ.ಕೆ. ಉಪಾಧ್ಯಾಯ ಹೇಳಿದ್ದಾರೆ. 2010ರಲ್ಲಿ ದೇಶದಲ್ಲಿ ಸುಮಾರು 4.5 ಲಕ್ಷ ಅಪಘಾತ ಸಂಭವಿಸಿವೆ. ಇದರಲ್ಲಿ ಸುಮಾರು 1.3 ಲಕ್ಷ ಜನರು ಪ್ರಾಣಕಳೆದುಕೊಂಡಿದ್ದರು. (ಕನ್ನಡ ಡ್ರೈವ್ ಸ್ಪಾರ್ಕ್ )
ಓದಿ: ಟ್ರಾಫಿಕ್ ಪೊಲೀಸರಿಗೆ ಎಷ್ಟು ದಂಡ ಪಾವತಿಸಬೇಕು


Click it and Unblock the Notifications








