ಇದು ಟಾಯ್ಲೆಟ್ ತ್ಯಾಜದಿಂದ ಚಲಿಸೋ ನಿಯೊ ಬೈಕ್

ಜಪಾನಿನ ಟೊಟೊ ಕಂಪನಿ ಟಾಯ್ಲೇಟ್ ತ್ಯಾಜದಿಂದ ತಯಾರಿಸಿದ ಜೈವಿಕ ಅನಿಲ ಚಾಲೀತ ಬೈಕನ್ನು ಹೊರತಂದಿದೆ. ಇದು ಇತ್ತೀಚೆಗೆ ಜಪಾನಿನಲ್ಲಿ ಒಂದು ಸವಾರಿ ಕಿ.ಮೀ. ಸವಾರಿ ಮಾಡಿದೆ. ಮನೆಯಲ್ಲಿನ ದಿನನಿತ್ಯದ ತ್ಯಾಜ್ಯ, ಕೊಳಚೆ ನೀರು, ಟಾಯ್ಲೆಟ್ ತ್ಯಾಜ ಇತ್ಯಾದಿಗಳೇ ಈ ಬೈಕಿಗೆ ಇಂಧನ ಎಂದು ಕಂಪನಿಯ ವಕ್ತಾರ ಕೆಂಜಿ ಫುಜಿತಾ ಹೇಳಿದ್ದಾರೆ.
ಈ ಬೈಕನ್ನು ಮಾರಾಟ ಮಾಡುವ ಉದ್ದೇಶ ಕಂಪನಿಗಿಲ್ಲ. ಸುಮ್ಮನೆ ಪ್ರದರ್ಶನಕ್ಕಂತೆ. ಸದ್ಯದ ಪೆಟ್ರೋಲ್ ದರ ದುಬಾರಿಯಾಗುವ ಸಂದರ್ಭದಲ್ಲಿ ಇಂತಹ ಬೈಕ್ ಅಗತ್ಯವಿತ್ತು ಎನ್ನುವಿರಾ. ಇದರ ಸೀಟು ಟಾಯ್ಲೆಟ್ ಸೀಟನ್ನು ಹೊಂದಿದೆ. ಆದರೆ ಇದರಲ್ಲಿ ಒಂದು ಎರಡು ಮಾಡಲು ಸಾಧ್ಯವಿಲ್ಲ. ಈ ಬೈಕಿಗೆ ಜೈವಿಕ ಅನಿಲ ತುಂಬಿಸಲು ಇಂಧನ ಟ್ಯಾಂಕ್ ಪ್ರತ್ಯೇಕವಾಗಿ ಇದೆ. (ಕನ್ನಡ ಡ್ರೈವ್ ಸ್ಪಾರ್ಕ್)


Click it and Unblock the Notifications








