ಹೊಸ ಹಾಡು: ನೆಲವ ಬಿಟ್ಟು ನೀರ ಮೇಲೆ ಬಂಡಿ ಸಾಗುತ್ತೆ

"ನೆಲವ ಬಿಟ್ಟು ನೀರ ಮೇಲೆ ಬಂಡಿ ಯಾಕೆ ಹೋಗೊಲ್ಲ?" ಈ ಪ್ರಶ್ನೆಯ ಬೆನ್ನೆತ್ತಿದ್ದವಳು 20 ವಯಸ್ಸಿನ ಯುವತಿ. ಚೀನಾದಯುವಾನ್ ಝಾಂಗ್ "ಫೋಕ್ಸ್ ವ್ಯಾಗನ್ ಅಕ್ವಾ" ಎಂಬ ಹೊಸ ಕಾರೊಂದನ್ನು ಅನ್ವೇಷಣೆ ಮಾಡಿದ್ದಾಳೆ. ಇದರ ವಿಶೇಷವೇನು ಗೊತ್ತ? ಈ ಕಾರು ಗರಿಷ್ಠ 62 ಕಿ.ಮೀ. ವೇಗದಲ್ಲಿ ರಸ್ತೆ, ಮರಳು, ಮಂಜುಗಡ್ಡೆ ಮಾತ್ರವಲ್ಲದೇ ನೀರಲ್ಲೂ ಸಂಚರಿಸುತ್ತದೆ. ಇದಕ್ಕೆ ಚಲಿಸಲು ನೆಲ, ಜಲ ಹೀಗೆ ಯಾವುದೇ ಅಡೆತಡೆಯಿಲ್ಲ.
ಜರ್ಮನಿಯ ಫೋಕ್ಸ್ ವ್ಯಾಗನ್ ವಾಹನ ಅಭಿವೃದ್ಧಿಪಡಿಸುವ ಸ್ಪರ್ಧೆಯೊಂದನ್ನು ಆಯೋಜಿಸಿತ್ತು. ಅದರಲ್ಲಿ ಇಲ್ಲಿವರೆಗೆ ಚೀನಾದ ರಸ್ತೆಯಲ್ಲಿಲ್ಲದ ವಾಹನ ಅಭಿವೃದ್ಧಿಪಡಿಸುವಂತೆ ಸೂಚಿಸಲಾಗಿತ್ತು. ಆಗ ಈ ಯುವತಿ ಅಭಿವೃದ್ಧಿಪಡಿಸಿದ್ದು ನೀರಲ್ಲಿ ಮತ್ತು ರಸ್ತೆಯಲ್ಲೆರಡರಲ್ಲೂ ಸಾಗುವ ಕಾರು. ಇದೀಗ ವಿಶ್ವದ ಗಮನವನ್ನು ಸೆಳೆದಿದೆ.
ನೀರಿನಲ್ಲಿ ಕಾರು ತೇಲುತ್ತ ಸಾಗಲು ಅನುಕೂಲವಾಗುವಂತೆ ನಾಲ್ಕು ಅತ್ಯಧಿಕ ಶಕ್ತಿಯ ಫ್ಯಾನ್, ಏರ್ ಬ್ಯಾಗ್ ಇದೆ. ಈ ಕಾರಿನ ಎರಡು ಮೋಟರ್ ಗಳು ಹೈಡ್ರೊಜನ್ ಫ್ಯೂಯಲ್ ಸೆಲ್ ಬಳಸುತ್ತದೆ. ನೀರು, ಮರಳು, ಮಂಜುಗಡ್ಡೆ, ರಸ್ತೆಯಲ್ಲಿ ಸಾಗಲು ಬೇಕಾದ ಮಾರ್ಪಾಡುಗಳೂ ಇದರಲ್ಲಿವೆ. ಇದು ಶೀಘ್ರದಲ್ಲಿ ರಸ್ತೆಗೆ ಅಲ್ಲಲ್ಲ, ನೀರಿಗೆ ಕೂಡ ಇಳಿಯುವ ನಿರೀಕ್ಷೆಯನ್ನು ವಾಹನ ವಿಶ್ಲೇಷಕರು ವ್ಯಕ್ತಪಡಿಸುತ್ತಾರೆ.


Click it and Unblock the Notifications








