ಹೊಸ ಮಿಟ್ಸುಬಿಸಿ ಪಜೆರೊ ರಸ್ತೆಗೆ, ದರ 23.65 ಲಕ್ಷ ರು.

ಸುಮಾರು ಎರಡು ವರ್ಷದ ನಂತರ ಪ್ರಪ್ರಥಮ ಬಾರಿಗೆ ಮಿಟ್ಸುಬಿಸಿ ಕಂಪನಿಯು ಹೊಸ ಕಾರೊಂದನ್ನು ಪರಿಚಯಿಸಿದೆ. ನೂತನ ಪಜೆರೊ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ಕೇವಲ ಕಾಮನ್ ರೈಲ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ದೊರಕುತ್ತದೆ. ಈ ಎಂಜಿನ್ 175 ಹಾರ್ಸ್ ಪವರ್ ಮತ್ತು 400ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ಕಂಪನಿಯು ನೂತನ ಪಜೆರೊ ಕಾರನ್ನು ಸಿಬಿಯು ಹಾದಿ ಮೂಲಕ ಜಪಾನಿನಿಂದ ಆಮದು ಮಾಡಿಕೊಳ್ಳಲಿದೆ.

ಹೊಸ ಪಜೆರೊ ದೆಹಲಿ ಎಕ್ಸ್ ಶೋರೂಂ ದರ 23.65 ಲಕ್ಷ ರುಪಾಯಿ. ಸಾಕಷ್ಟು ಹೊಸ ಫೀಚರ್ಸ್ ಇರುವುದರಿಂದ ದರ ಹೆಚ್ಚಿದ್ದರೂ ಗ್ರಾಹಕರನ್ನು ಸೆಳೆಯುವ ನಿರೀಕ್ಷೆ ಕಂಪನಿಯದ್ದು. ಮ್ಯಾನುಯಲ್ ಆಯ್ಕೆಯಲ್ಲಿ ದೊರಕುವ 20 ಲಕ್ಷ ರು.ಗಿಂತ ಹೆಚ್ಚು ದರದ ಒಂದೇ ಒಂದು ಕಾರೆಂದರೆ ಪಜೆರೊ ಎನ್ನುವುದು ಇದರ ಮೇಲಿರುವ ದೂರು.

ಚರ್ಮದ ಸೀಟು, ಚರ್ಮದ ಹಾಸಿರುವ ಸ್ಟಿಯರಿಂಗ್ ವೀಲ್, ಸ್ಟಿಯರಿಂಗ್ ವೀಲ್ ನಲ್ಲೇ ಆಡಿಯೋ ಕಂಟ್ರೋಲ್, ಚಾಲಕ ಮತ್ತು ಪ್ರಯಾಣಿಕ ಸೀಟುಗಳಿಗೆ ಏರ್ ಬ್ಯಾಗ್, ಚರ್ಮದ ಹಾಸಿರುವ ಗೇರ್ ನಾಬ್, ಯುಎಸ್ ಬಿ ಸ್ಲಾಟ್ ಜೊತೆಗೆ ಎಂಪಿ3 ಪ್ಲೇಯರ್, ಮಲ್ಟಿ ಪಂಕ್ಷನ್ ಡಿಸ್ ಪ್ಲೇ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಮತ್ತು ರಿಯರ್ ಸ್ಪ್ಲಿಟ್ ಸೀಟುಗಳು ಇದರಲ್ಲಿ ಪ್ರಮುಖ ನೂತನ ಫೀಚರುಗಳಾಗಿವೆ.

ಸ್ವಯಂಚಾಲಿತ ಲೆವೆಲ್ ಕಂಟ್ರೋಲ್ ಇರುವ ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ಆಕರ್ಷಕ ಡೋರ್ ಹ್ಯಾಂಡಲ್, ಹಿಂಭಾಗದಲ್ಲಿ ಪಾರ್ಕಿಂಗ್ ಸೆನ್ಸಾರ್, ಎಬಿಎಸ್ ಮತ್ತು ಇಬಿಡಿ, ಹಿಂಭಾಗಕ್ಕೂ ವೈಪರ್ ಮತ್ತು ಡಿಫಾಗರ್ ಇತ್ಯಾದಿ ಹತ್ತು ಹಲವು ಹೊಸ ಫೀಚರುಗಳು ಪಜೆರೊ ಸ್ಪೋರ್ಟ್ ಕಾರಿನಲ್ಲಿದೆ. (ಕನ್ನಡ ಡ್ರೈವ್ ಸ್ಪಾರ್ಕ್)

More from DriveSpark

Article Published On: Monday, March 12, 2012, 15:09 [IST]
English summary
Mitsubishi has launched its first new car in nearly two years by launching the new Pajero Sport SUV. The new Pajero Sport has been priced at Rs.23.65 lakhs (ex-showroom Delhi) making it quite an expensive car to buy. But Mitsubishi has ensured buyers can warrant such a price tag by improving on the car's interior features.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+