ಬಿಎಂಡಬ್ಲ್ಯು, ಆಡಿ, ಬೆಂಝ್; ಭಾರಿ ಡಿಸ್ಕೌಂಟ್

Written By:

ಜರ್ಮನಿಯ ಪ್ರೀಮಿಯಂ ಕಾರು ತಯಾರಕ ಕಂಪನಿಗಳಾದ ಬಿಎಂಡಬ್ಲ್ಯು, ಆಡಿ ಹಾಗೂ ಮರ್ಸಿಡಿಸ್ ಬೆಂಝ್ ಬ್ರಾಂಡ್ ಹೆಸರಿಗೆ ವಿಶ್ವದೆಲ್ಲಡೆ ಜನಪ್ರಿಯವಾಗಿದೆ. ಒಂದರ ಬಳಿಕ ಒಂದರಂತೆ ಐಷಾರಾಮಿ ಕಾರುಗಳನ್ನು ಬಿಡುಗಡೆಗೊಳಿಸುತ್ತಿರುವ ಇಂತಹ ಕಂಪನಿಗಳು ಇದೀಗ 2012ರ ಮಾದರಿಯ ಕಾರುಗಳಿಗೆ ರಿಯಾಯಿತಿ ದರ ನೀಡುತ್ತಿದೆ.

ಕಳೆದ ಕೆಲವು ವರ್ಷಗಳಲ್ಲಿ ಮಾರಾಟದಲ್ಲಿ ಶೇ. 30ರಷ್ಟು ಹೆಚ್ಚಳ ದಾಖಲಿಸಿದ್ದ ಈ ಪ್ರತಿಷ್ಠಿತ ಕಂಪನಿಗಳ ಮಾರಾಟವು 2013ನೇ ಸಾಲಿನಲ್ಲಿ ಕುಂಠಿತವಾಗಿತ್ತು. ಈ ಕೊರತೆ ನೀಗಿಸಲು ಹಳೆ ಮಾದರಿಗಳಿಗೆ ಡಿಸ್ಕೌಂಟ್ ಘೋಷಿಸಲು ಡೀಲರ್‌ಶಿಪ್‌ಗಳಿಗೆ ಸಲಹೆ ನೀಡಿವೆ.

ಡಿಸೆಂಬರ್ ಅಂತ್ಯದ ವರೆಗೂ ಶೇಕಡಾ 15ರಷ್ಟು ಅಂದರೆ 10 ಲಕ್ಷ ರೂಪಾಯಿಗಳ ವರೆಗಿನ ರಿಯಾಯಿತಿ ದರವನ್ನು ಗ್ರಾಹಕರು ನಿರೀಕ್ಷಿಸಬಹುದಾಗಿದೆ. 2013ನೇ ವರ್ಷಕ್ಕೆ ಇದು ಬಾಧಕವಾಗುವುದಿಲ್ಲ. ಅಂದರೆ ಮುಂದಿನ ವರ್ಷ ಹೊಸದಾಗಿ ಬಿಡುಗಡೆಗೊಳ್ಳಲಿರುವ ಮಾಡೆಲ್‌ಗಳಿಗೆ ರಿಯಾಯಿತಿ ದರವಿರುವುದಿಲ್ಲ.

ಪ್ರಮುಖವಾಗಿಯೂ ಮಾರುಕಟ್ಟೆಯಿಂದ ಹೊರ ಹೋಗುತ್ತಿರುವ ಆವೃತ್ತಿಗಳಿಗೆ ಡಿಸ್ಕೌಂಟ್ ದರ ನೀಡಲಾಗುತ್ತಿದೆ ಎಕ್ಸ್1 ಆವೃತ್ತಿಗೆ ಬಿಎಂಡಬ್ಲ್ಯು ಶೇಕಡಾ 10ರಷ್ಟು ಡಿಸ್ಕೌಂಟ್ ನೀಡುತ್ತಿದ್ದರೆ ಮರ್ಸಿಡಿಸ್ ಬೆಂಝ್ ತನ್ನ ಪೆಟ್ರೋಲ್ ಆವೃತ್ತಿಗೆ ರಿಯಾಯಿತಿ ನೀಡುತ್ತಿದೆ. ಅದೇ ರೀತಿ ಆಡಿ ಕೂಡಾ 2ರಿಂದ 5 ಲಕ್ಷ ರು. ಸೇರಿದಂತೆ ವಿಸ್ತರಿತ ವಾರಂಟಿ ಹಾಗೂ ಉಚಿತ ವಿಮೆಗಳಂತಹ ಪ್ರಯೋಜನಗಳನ್ನು ನೀಡುತ್ತಿವೆ.

ಹಾಗಿದ್ದರೂ ಇಂತಹ ಭಾರಿ ರಿಯಾಯಿತಿ ದರಗಳು ಮಾರುಕಟ್ಟೆಯಲ್ಲಿನ ತನ್ನ ಬ್ರಾಂಡ್ ಇಮೇಜ್‌ಗೆ ಧಕ್ಕೆ ಮಾಡುವ ಸಾಧ್ಯತೆಯಿದೆ ಎಂಬುದನ್ನು ಚೆನ್ನಾಗಿ ಅರಿತುಕೊಂಡಿರುವ ಬಿಎಂಡಬ್ಲ್ಯು ಡೀಲರ್‌ಶಿಪ್‌ಗಳಿಗೆ ತಮ್ಮದೇ ಆದ ದರ ನಿಗದಿಪಡಿಸಲು ಸೂಚಿಸಿದೆ.

English summary
BMW is offering a 10% discount on its out going X1 while Mercedes-Benz has announced discounts for its petrol variants. Audi is offering discounts ranging from Rs.2 lakhs to Rs.5 lakhs along with benefits such as extended warranty, free insurance etc
Story first published: Tuesday, November 27, 2012, 15:10 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark