2012 ಲಾಸ್ ಏಂಜಲೀಸ್‌ ಹಾಟ್ ಶೋ

ಉತ್ತರ ಅಮೆರಿಕ ಖಂಡದ ಪ್ರತಿಷ್ಠಿತ ಆಟೋ ಶೋ ಎಂಬ ಹೆಗ್ಗಳಿಕೆಯನ್ನು ಪಡೆದಿರುವ ಲಾಸ್ ಏಂಜಲೀಸ್ ಆಟೋ ಶೋಗೆ ಈಗಾಗಲೇ ಚಾಲನೆ ದೊರಕಿದೆ. ನವೆಂಬರ್ ಅಂತ್ಯದಿಂದ ಡಿಸೆಂಬರ್ ತಿಂಗಳ ಮೊದಲ ಹತ್ತು ದಿನಗಳ ಪರ್ಯಂತ ಸಾಗಲಿರುವ ಲಾಸ್ ಏಂಜಲೀಸ್ ಆಟೋ ಶೋದಲ್ಲಿ ವಿವಿಧ ನೂತನ ಕಾರುಗಳು ಪ್ರದರ್ಶನಗೊಳ್ಳಲಿದೆ.

ಲಾಸ್ ಏಂಜಲೀಸ್ ಆಟೋ ಶೋ ಆರಂಭವಾಗಿರುವಂತೆಯೇ ವಿಶ್ವದೆಲ್ಲೆಡೆಯ ಕಾರು ಪ್ರಿಯರ ಗಮನ ಅತ್ತ ಹರಿದಿದೆ. ಯಾವೆಲ್ಲ ನೂತನ ಕಾನ್ಸೆಪ್ಟ್‌ಗಳು ಪ್ರದರ್ಶನಗೊಳ್ಳಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಕ್ಯಾಲೆಂಡರ್ ವರ್ಷದಲ್ಲಿ ನಡೆಯುವ ವಿಶ್ವದ ಪ್ರಮುಖ ಆಟೋ ಶೋಗಳ ಪೈಕಿ ಲಾಸ್ ಏಂಜಲೀಸ್ ಆಟೋ ಶೋ ಅಂತಿಮದ್ದಾಗಿದೆ. ಇದರಂತೆ ಕಾರು ಪ್ರಿಯರ ಗಮನ ಸಳೆಯಲು ಕಾರು ತಯಾರಕ ಕಂಪನಿಗಳು ಯೋಜನೆ ಹಾಕಿಕೊಂಡಿದೆ.

2012 ಲಾಸ್ ಏಜಂಲೀಸ್ ಆಟೋ ಶೋದಲ್ಲಿ 40ಕ್ಕೂ ಹೆಚ್ಚು ನೂತನ ಕಾರುಗಳು ಪ್ರದರ್ಶನಗೊಳ್ಳುವ ನಿರೀಕ್ಷೆಯಿದೆ. ಈ ಪೈಕಿ ಹೊಸದಾಗಿ ಆಗಮನವಾಗಲಿರುವ ಕೆಲವು ಕಾರುಗಳ ಹೆಸರುಗಳು ಈಗಾಗಲೇ ಬಹಿರಂಗವಾಗಿವೆ.

ಹಾಗಿದ್ದರೆ ಲಾಸ್ ಏಂಜಲೀಸ್ ಆಟೋ ಶೋದಲ್ಲಿ ಪ್ರದರ್ಶನಗೊಳ್ಳುವ ಹಾಟ್ ಕಾರುಗಳ ಪಟ್ಟಿ ನೋಡೋಣ

ಹೊಂಡಾ ಅಕ್ಯುರಾ ಆರ್‌ಎಲ್‌ಎಕ್ಸ್

ಹೊಂಡಾ ಅಕ್ಯುರಾ ಆರ್‌ಎಲ್‌ಎಕ್ಸ್

2012 ಲಾಸ್ ಏಂಜಲೀಸ್ ಆಟೋ ಶೋದಲ್ಲಿ ಹೊಂಡಾ ಪ್ರೀಮಿಯಂ ಬ್ರಾಂಡ್ ಕಾರು ಆದ ಅಕ್ಯುರಾ ಆರ್‌ಎಲ್‌ಎಕ್ಸ್ ಬ್ರಾಂಡ್‌ನಲ್ಲಿ ಪ್ರದರ್ಶನಗೊಳ್ಳಲಿದೆ. ಮುಂದಿನ ವರ್ಷ ಬಿಡುಗಡೆಯಾಗಲಿರುವ ಹೊಂಡಾ ಅಕ್ಯುರಾ ಸದ್ಯ ಚಾಲ್ತಿಯಲಿರುವ ಅಕ್ಯುರಾ ಆರ್‌ಎಲ್ ಕಾರಿನ ಪರಿಷ್ಕೃತ ಆವೃತ್ತಿಯಾಗಿದೆ.

ಬಿಎಂಡಬ್ಲ್ಯು ಎಕ್ಸ್1 ಲಿಮಿಟೆಡ್ ಅಡಿಷನ್

ಬಿಎಂಡಬ್ಲ್ಯು ಎಕ್ಸ್1 ಲಿಮಿಟೆಡ್ ಅಡಿಷನ್

ಎಲ್‌ಎ ಆಟೋ ಶೋದಲ್ಲಿ ಪ್ರದರ್ಶನಗೊಳ್ಳುವ ಮತ್ತೊಂದು ಹಾಟ್ ಕಾರು ಬಿಎಂಡಬ್ಲ್ಯು ಎಕ್ಸ್1 ಕಾರು ಆಗಿದೆ. ಪ್ರಸ್ತುತ ಕಾರು ಇದೇ ತಿಂಗಳು ಅಮೆರಿಕ ಮಾರುಕಟ್ಟೆಗೆ ಪ್ರವೇಶಿಸಲಿದೆ.

ಷೆವರ್ಲೆ ಸ್ಪಾರ್ಕ್ ಇವಿ

ಷೆವರ್ಲೆ ಸ್ಪಾರ್ಕ್ ಇವಿ

ಜನರಲ್ ಮೋಟಾರ್ಸ್‌ನಿಂದ ನಿರ್ಮಾಣವಾಗಿರುವ ಮೊದಲ ಸಂಪೂರ್ಣ ಎಲೆಕ್ಟ್ರಿಕ್ ಕಾರು ಷೆವರ್ಲೆ ಸ್ಪಾರ್ಕ್ ಇವಿ ಆಗಿದೆ. ಸ್ಪಾರ್ಕ್ ಭಾರತದಲ್ಲಿ ಷೆವರ್ಲೆ ಬೀಟ್ ಎಂದು ಅರಿಯಲ್ಪಡುತ್ತದೆ.

ಫಿಯೆಟ್ 500ಇ

ಫಿಯೆಟ್ 500ಇ

ಪ್ರತಿಷ್ಠಿತ ಕಾರು ಕಂಪನಿಯಾದ ಫಿಯೆಟ್‌ನ ಎಲೆಕ್ಟ್ರಿಕ್ ಮೋಟಾರ್ ಸಣ್ಣ ಕಾರು ಸಹ ಇದೇ ಆಟೋ ಶೋದಲ್ಲಿ ಪ್ರದರ್ಶನಗೊಳ್ಳುತ್ತಿದೆ.

ನೂತನ ಹ್ಯುಂಡೈ ಸಾಂಟಾ ಫೆ

ನೂತನ ಹ್ಯುಂಡೈ ಸಾಂಟಾ ಫೆ

ಹ್ಯುಂಡೈ ಇತ್ತೇಚೆಗಿನ ಪೀಳೆಗೆಯ ಸಾಂಟಾ ಫೆ ಎಸ್‌ಯುವಿ ಬಿಡುಗಡೆ ಮಾಡಲು ಸನ್ನದ್ಧವಾಗಿದೆ. ಹ್ಯುಂಡೈನ ಫ್ಯೂಯಿಡಿಕ್ ವಿನ್ಯಾಸ ಆಕರ್ಷಿಸುವ ನಿರೀಕ್ಷೆಯಿದೆ.

ಹೊಸ ಹೊಂಡಾ ಸಿವಿಕ್

ಹೊಸ ಹೊಂಡಾ ಸಿವಿಕ್

ಹೊಂಡಾ ಸಿವಿಕ್‌ನ ಅಮೆರಿಕ ಆವೃತ್ತಿ ಕೂಡಾ ಇದೇ ಲಾಸ್ ಏಂಜಲೀಸ್ ಆಟೋ ಶೋದಲ್ಲಿ ಪ್ರದರ್ಶನಗೊಳ್ಳಲಿದೆ.

ನ್ಯೂ ಜಾಗ್ವಾರ್ ಎಕ್ಸ್‌ಎಫ್‌ಆರ್-ಎಸ್

ನ್ಯೂ ಜಾಗ್ವಾರ್ ಎಕ್ಸ್‌ಎಫ್‌ಆರ್-ಎಸ್

ಎಕ್ಸ್‌ಎಫ್‌ಆರ್-ಎಸ್ ಪವರ್‌ನಿಂದ ನಿಯಂತ್ರಿಸ್ಪಡುವ ಜಾಗ್ವಾರ್ ಕಾರು 2012 ಎಲ್‌ಎ ಆಟೋ ಶೋದ ಮತ್ತೊಂದು ಆಕರ್ಷಣೆಯಾಗಲಿದೆ.

ಮರ್ಸಿಡಿಸ್ ಬೆಂಝ್ ಎಸ್‌ಎಲ್‌ಎಸ್ ಎಎಂಜಿ ಬ್ಲ್ಯಾಕ್ ಸಿರೀಸ್

ಮರ್ಸಿಡಿಸ್ ಬೆಂಝ್ ಎಸ್‌ಎಲ್‌ಎಸ್ ಎಎಂಜಿ ಬ್ಲ್ಯಾಕ್ ಸಿರೀಸ್

ಮರ್ಸಿಡಿಸ್ ಬೆಂಝ್‌ನಿಂದ ಬಿಡುಗಡೆಯಾಗುತ್ತಿರುವ ಐದನೇ ಅಡಿಷನ್ ಬ್ಲ್ಯಾಕ್ ಅಡಿಷನ್ ಮೊನಿಕರ್ ಕಾರು ಎಸ್‌ಎಲ್‌ಎಸ್ ಎಎಂಜಿ ಆಗಿದೆ. ಸಹಜವಾಗಿಯೇ ಬ್ಲ್ಯಾಕ್ ಸಿರೀಸ್ ಕಾರು ಮೇಲೆ ಕಾರು ಪ್ರಿಯರ ದೃಷ್ಟಿ ನೆಟ್ಟಿದೆ.

ನಿಸ್ಸಾನ್ ಜಿಟಿಆರ್

ನಿಸ್ಸಾನ್ ಜಿಟಿಆರ್

ನಿಸ್ಸಾನ್‌ನ ಹೊಸ ಆವೃತ್ತಿ ಸಹ ಇದೇ ಆಟೋ ಶೋದಲ್ಲಿ ಪ್ರದರ್ಶನವಾಗಲಿದೆ.

ಟೊಯೊಟಾ ಆರ್‌ಎವಿ4

ಟೊಯೊಟಾ ಆರ್‌ಎವಿ4

ನಾಲ್ಕನೇ ಪೀಳಿಗೆಯ ಕಾರು ಎಂದೇ ಬಿಂಬಿಸಲ್ಪಟ್ಟಿರುವ ಟೊಯೊಟಾದ ಆರ್‌ಎವಿ4 ಕಾರು ಕೂಡಾ 2012 ಲಾಸ್ ಏಂಜಲೀಸ್ ಆಟೋ ಶೋದಲ್ಲಿ ಡೆಬ್ಯುಟ್ ಮಾಡಲಿದೆ.

VW BEetle Convertible

VW BEetle Convertible

ಉತ್ತರ ಅಮೆರಿಕದಲ್ಲಿ ಫೋಕ್ಸ್‌ವ್ಯಾಗನ್‌ನಿಂದ ಲಾಂಚ್ ಆಗಲಿರುವ ಬಹುನಿರೀಕ್ಷಿತ ಕಾರು VW BEetle Convertible ಆಗಿದೆ. ಜರ್ಮನ್ ಕಾರು ತಯಾರಕರಾದ ಫೋಕ್ಸ್‌ವ್ಯಾಗನ್ ಈಗಾಗಲೇ BEetle Convertible ಕಾರಿನ ಚಿತ್ರ ಬಿಡುಗಡೆ ಮಾಡಿದ್ದು, ಅಧಿಕೃತ ಬಿಡುಗಡೆಗಾಗಿ ತಯಾರಾಗಿದೆ.

More from DriveSpark

Article Published On: Friday, November 30, 2012, 15:22 [IST]
English summary
The Los Angeles Auto Show has emerged as one of the most happening auto show in the North American continent. The 2012 Los Angeles Auto Show will open on November 30 and auto enthusiasts from across the globe will home in on to the show to witness the debuts of several new cars
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+