2012ರ ಭವಿಷ್ಯ: ರಸ್ತೆಯಲ್ಲಿ ಪ್ರಳಯ ಸಂಭವ

ನೂತನ ವರ್ಷದ ಮೊದಲ ತ್ರೈಮಾಸಿಕದಲ್ಲಿ ಹೆಚ್ಚಿನ ಕಾರು ಕಂಪನಿಗಳು ವಾಹನ ದರ ಹೆಚ್ಚಳ ಪ್ರಕಟಿಸಿವೆ. ಪ್ರಸಕ್ತ ತಿಂಗಳಿನಿಂದ ಹೆಚ್ಚಿನ ಕಾರುಗಳ ದರ ಶೇಕಡ 2ರಿಂದ ಶೇಕಡ 10ರಷ್ಟು ಏರಿಕೆ ಕಾಣಲಿವೆ. ಇದು ವಾಹನ ಮಾರಾಟದ ಮೇಲೆ ವಕ್ರದೃಷ್ಟಿ ಬೀರುವುದು ನಿಚ್ಚಳವಾಗಿದೆ.
ದೇಶದ ವಾಣಿಜ್ಯ ಮತ್ತು ಉದ್ಯಮ ಒಕ್ಕೂಟ(ಅಸೋಚಾಮ್) ಸಲ್ಲಿಸಿರುವ "ಭಾರತದ ವಾಹನೋದ್ಯಮ: ಮುಂಬರುವ ವರ್ಷ" ಎಂಬ ವರದಿಯಲ್ಲಿ ದೇಶದ ವಾಹನ ಮಾರುಕಟ್ಟೆಗೆ ಕಠಿಣ ದಿನಗಳು ಕಾದಿವೆ ಎಂದಿದೆ.
"ಬಡ್ಡಿದರ ಹೆಚ್ಚಳ, ವಾಹನ ಬಿಡಿಭಾಗ ದರ ಹೆಚ್ಚಳ, ರೂಪಾಯಿ ಮೌಲ್ಯದಲ್ಲಿನ ಏರುಪೇರು ಮತ್ತು ವಾಹನಗಳ ದರ ಹೆಚ್ಚಳವು ಪ್ರಸಕ್ತ ವರ್ಷ ವಾಹನ ಕಂಪನಿಗಳನ್ನು ಕಾಡಲಿವೆ" ಎಂದು ಅಸೋಚಾಮ್ ಪ್ರಧಾನ ಕಾರ್ಯದರ್ಶಿ ಡಿ. ಎಸ್. ರಾವತ್ ಹೇಳಿದ್ದಾರೆ.
ಅಮೆರಿಕದ ಆರ್ಥಿಕ ಚೇತರಿಕೆ ನಿಧಾನಗತಿಯಲ್ಲಿರುವುದು, ಯುರೋ ವಲಯದಲ್ಲಿ ಸಾಲದ ಬಿಕ್ಕಟ್ಟು, ಜಪಾನಿನಲ್ಲಿ ಆಮೆಗತಿಯ ಆರ್ಥಿಕ ಪ್ರಗತಿ ಮತ್ತು ಚೀನಾದ ಅರ್ಥವ್ಯವಸ್ಥೆ ಇಳಿಮುಖವಾಗಿರುವುದು ಕೂಡ ಭಾರತದ ವಾಹನ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುವ ಇತರ ವಿಷಯಗಳಾಗಿವೆ ಎಂದು ಅಸೋಚಾಮ್ ಹೇಳಿದೆ.


Click it and Unblock the Notifications








