ವೋಲ್ವೊ ನೂತನ XC60 ರಸ್ತೆಗೆ, ಓಹ್ ದರ ಕೇಳ್ತಿದ್ದೀರಾ?

2012 Volvo XC60 Launched at Rs 34.4 Lakh
ಸ್ವೀಡನಿನ ಐಷಾರಾಮಿ ಕಾರು ತಯಾರಿಕ ಕಂಪನಿ ವೋಲ್ವೊ, ಜಾಗತಿಕ ಮಾರುಕಟ್ಟೆಗೆ 2012ರ ನೂತನ ಎಕ್ಸ್ ಸಿ60 ಡೀಸೆಲ್ ಆವೃತ್ತಿಯೊಂದನ್ನು ಪರಿಚಯಿಸಿದೆ. ಸಿಂಪಲ್ ಆಗಿ ಸೂಪರ್ಬ್ ಆಗಿರೋ ಈ ಕಾರಿನ ದರ ಮಾತ್ರ ಕೊಂಚ ದುಬಾರಿ ಎನಿಸಬಹುದು. ದರ: 34.4 ಲಕ್ಷ ರುಪಾಯಿ.

ನೂತನ ತಲೆಮಾರಿನ Volvo XC60 ಕಾರನ್ನು ಸಿಬಿಯು(ಪೂರ್ಣ ಪ್ರಮಾಣದಲ್ಲಿ ನಿರ್ಮಿಸಿದ) ಮೂಲಕ ಭಾರತಕ್ಕೆ ಆಮದುಮಾಡಿಕೊಳ್ಳಲಿದೆ. ಅಂದರೆ ಕಂಪನಿಯು ದೇಶದ ವೋಲ್ವೊ ಘಟಕದಲ್ಲಿ ಈ ಕಾರನ್ನು ಉತ್ಪಾದಿಸುವುದಿಲ್ಲ. ಅಥವಾ ಬಿಡಿಭಾಗಗಳನ್ನು ತಂದು ಇಲ್ಲಿ ಜೋಡಿಸುವುದಿಲ್ಲ.

ಕಂಪನಿಯು ಸಿಬಿಯು ಹಾದಿ ಮೂಲಕ ಆಮದು ಮಾಡಿಕೊಳ್ಳುವುದರಿಂದ ಎಕ್ಸ್ ಸಿ60 ಕಾರಿಗೆ ಶೇಕಡ 100ರಷ್ಟು ಆಮದು ಸುಂಕವಿರಲಿದೆ. ಈ ಕಾರಿನ ಬೇಸ್ ಆವೃತ್ತಿ ದರ ಸುಮಾರು 34.4 ಲಕ್ಷ ರು. ಇರಲಿದೆ. ಹೈಯರ್ ಎಂಡ್ ಆವೃತ್ತಿ ದರ 37.4 ಲಕ್ಷ ರು. ಇದೆ.

ನೂತನ ಎಕ್ಸ್ ಸಿ60 ಕಾರು ಮೂರು ಸಿಲಿಂಡರ್ ಟರ್ಬೊ ಚಾರ್ಜಡ್ ಡೀಸೆಲ್ ಎಂಜಿನ್ ಹೊಂದಿದೆ. ಇದು ಸುಮಾರು 163 ಹಾರ್ಸ್ ಪವರ್ ಮತ್ತು 400ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ಇದು ಆರು ಸ್ಪೀಡಿನ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಮತ್ತು ಆಲ್ ವೀಲ್ ಡ್ರೈವ್ ಸಿಸ್ಟಮ್ ಹೊಂದಿದೆ.

ವೊಲ್ವೊ ಕಂಪನಿಯ ನೂತನ ಕಾರು ಆಡಿ ಕ್ಯೂ5 ಮತ್ತು ಬಿಎಂಡಬ್ಲ್ಯು ಎಕ್ಸ್3 ಕಾರುಗಳಿಗೆ ಪೈಪೋಟಿ ನೀಡುವ ನಿರೀಕ್ಷೆಯಿದೆ. (ಕನ್ನಡ ಡ್ರೈವ್ ಸ್ಪಾರ್ಕ್)

More from DriveSpark

Article Published On: Friday, February 10, 2012, 11:48 [IST]
English summary
The 2012 Volvo XC60 crossover Launched in Global Market at Rs. 34.4 Lakh Price Tag. All-new generation Volvo XC60 Powered By 3 cylinder turbo diesel engine.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+