2013ರಲ್ಲಿ ಲಾಂಚ್ ಆಗಲಿರುವ ಕಾರುಗಳ ಪಟ್ಟಿ

ಹೊಸ ವರ್ಷವನ್ನು ಬರಮಾಡಿಕೊಳ್ಳಲು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಹಾಗಿರುವಾಗ ಕಾರೊಂದನ್ನು ಕೊಂಡುಕೊಳ್ಳುವ ಮೂಲಕ ಹೊಸ ವರ್ಷವನ್ನು ಇನ್ನಷ್ಟು ಸಿಹಿ ಮಾಡಿಕೊಳ್ಳುವ ಇರಾದೆ ಏನಾದರೂ ಹೊಂದಿದ್ದೀರಾ? ಹಾಗಿದ್ದರೆ ಬನ್ನಿ 2013ರಲ್ಲಿ ಬಿಡುಗಡೆಯಾಗಲಿರುವ ನೂತನ ಕಾರುಗಳ ಬಗ್ಗೆ ಡ್ರೈವ್ ಸ್ಪಾರ್ಕ್ ತಂಡ ವಿಸೃತ ಮಾಹಿತಿಯನ್ನು ನೀಡಲಿದ್ದೇವೆ.

ಸಮಕಾಲೀನ ಪರಿಸ್ಥಿತಿಯಲ್ಲಿ ದೇಶದ ಕಾರು ಮಾರುಕಟ್ಟೆಯಲ್ಲಿ ಡೀಸೆಲ್ ಕಾರುಗಳಿಗೆ ಭಾರಿ ಬೇಡಿಕೆಯಿದೆ. ಪೆಟ್ರೋಲ್ ಬೆಲೆ ಏರಿಕೆ ಗಣನೀಯವಾಗಿದ್ದರಿಂದ ದೇಶದ ಕಾರು ಖರೀದಿ ಗ್ರಾಹಕರು ಡೀಸೆಲ್ ಕಾರುಗಳತ್ತ ವಾಲುತ್ತಿದ್ದಾರೆ. ಇದರಂತೆ ವಾಹನ ತಯಾರಕರು ಕೂಡಾ ಡೀಸೆಲ್ ಕಾರುಗಳತ್ತ ಗಮನ ಕೇಂದ್ರಿಕರಿಸಿದ್ದಾರೆ.

ಅತ್ಯಾಧುನಿಕ ತಂತ್ರಜ್ಞಾನ ಸೇರಿದಂತೆ ನವನವೀನ ವೆರಿಯಂಟ್‌ ಕಾರುಗಳು ಬಿಡುಗಡೆಗೆ ಸಿದ್ಧವಾಗಿದೆ. ದೇಶದ ಗ್ರಾಹಕರು ಮೈಲೇಜ್‌‌ನತ್ತ ಹೆಚ್ಚು ಗಮನ ವಹಿಸುತ್ತಿರುವ ಹಿನ್ನಲೆಯಲ್ಲಿ ಕಾರು ಕಂಪನಿಗಳು ಉತ್ತಮ ಇಂಧನ ದಕ್ಷತೆಯ ಕಾರುಗಳನ್ನು ರಸ್ತೆಗಿಳಿಸುವ ಯೋಜನೆ ಹೊಂದಿದೆ.

ಹೊಸ ವರ್ಷಕ್ಕೆ ಸಾಲು ಸಾಲು ಕಾರುಗಳು ರಸ್ತೆಗಿಳಿಯಲಿದೆ. ಈ ಪೈಕಿ ಡೀಸೆಲ್ ವೆರಿಯಂಟ್‌ಗಳು ಫೇವರಿಟ್ ಎನಿಸಿಕೊಂಡಿವೆ. ಇದರ ಜತೆಗೆ ಪ್ರಮುಖ ಲಗ್ಷುರಿ ಕಾರು ತಯಾರಕರಾದ ಮರ್ಸಿಡಿಸ್ ಬೆಂಝ್ ತನ್ನ ಕಡಿಮೆ ದುಬಾರಿ ಕಾರನ್ನು ಸಹ ಪರಿಚಯಿಸಲಿದೆ.

ಇಂದಿನ ಲೇಖನದಲ್ಲಿ ಹೊಸ ವರ್ಷದಲ್ಲಿ ಬಿಡುಗಡೆಯಾಗಲಿರುವ ಕಾರುಗಳು ಹಾಗೂ ಈಗಾಗಲೇ ಮಾರುಕಟ್ಟೆಯಲ್ಲಿರುವ ಅವುಗಳ ಪ್ರತಿಸ್ಪರ್ಧಿಗಳ ಬಗ್ಗೆ ಮಾಹಿತಿ ಕೊಡಲಿದ್ದೇವೆ. ಇದಕ್ಕಾಗಿ ಫೋಟೊ ಫೀಚರ್ ಮುಂದಕ್ಕೆ ಕ್ಲಿಕ್ಕಿಸುತ್ತಾ ಸಾಗಿರಿ.

ಹೊಂಡಾ ಸಿಟಿ ಡೀಸೆಲ್

ಬಹುನಿರೀಕ್ಷಿತ ಮಿಡ್ ಲೆವೆಲ್ ಸೆಡಾನ್ ಕಾರು ಆದ ಹೊಂಡಾ ಸಿಟಿ ಡೀಸೆಲ್ ಎಂಜಿನ್ ಹೊಸ ವರ್ಷದಲ್ಲಿ ಬಿಡುಗಡೆಯಾಗಲಿದೆ. ಹೌದು, ಈ ತನಕ ಹೊಂಡಾದ ಯಾವುದೇ ಡೀಸೆಲ್ ಇಂಜಿನ್ ಕಾರುಗಳು ದೇಶದಲ್ಲಿ ಬಿಡುಗಡೆಯಾಗಿಲ್ಲ. ಕಂಪನಿಯು ಈ ಕಾರಿನಲ್ಲಿ 1.4 ಲೀಟರ್ ಇಂಧನ ಕ್ಷಮತೆಯ iCTDi (intelligent Common Rail Turbocharged Direct Injection) ಡೀಸೆಲ್ ಎಂಜಿನ್ ಆಳವಡಿಸಿದೆ. ಈ ಕಾರಿನ ದರ 11 ಲಕ್ಷ ರು. ಅಸುಪಾಸಿನಲ್ಲಿರಲಿದೆ. 2013ರ ಮಧ್ಯಂತರ ಅವಧಿಯಲ್ಲಿ ಕಾರು ಮಾರುಕಟ್ಟೆಗಿಳಿಯುವ ನಿರೀಕ್ಷೆಯಿದೆ.

ಹೊಂಡಾ ಸಿಟಿ ಡೀಸೆಲ್ ಪ್ರತಿಸ್ಪರ್ಧಿ

ಹೊಂಡಾ ಸಿಟಿ ಡೀಸೆಲ್ ಪ್ರತಿಸ್ಪರ್ಧಿ

ಹೊಂಡಾ ಸಿಟಿ ಡೀಸೆಲ್ ಕಾರಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿ ಹ್ಯುಂಡೈ ವರ್ನಾ ಪರಿಗಣಿಸಲಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿರುವ ಹ್ಯುಂಡೈ ವರ್ನಾ 1.4 ಲೀಟರ್ ಡೀಸೆಲ್ ವೆರಿಯಂಟ್ 8.37 ಲಕ್ಷ ರುಪಾಯಿಗಳಿಗೆ ಗ್ರಾಹಕರ ಕೈಸೇರುತ್ತಿದೆ. ಹಾಗೆಯೇ 1.6 ಲೀಟರ್ ಕ್ಷಮತೆಯ ಎಂಜಿನ್ ಕಾರುಗಳಿಗೆ 9.12 ಲಕ್ಷ ರುಪಾಯಿಗಳಿವೆ.

ಹೊಂಡಾ ಬ್ರಿಯೊ ಅಮೇಜ್

ಹೊಂಡಾದ ಮತ್ತೊಂದು ಬ್ರಿಯೊ ಅಮೇಜ್ ಆವೃತ್ತಿಯು ಸಹ ಮುಂದಿನ ವರ್ಷವೇ ಬಿಡುಗಡೆಯಾಗಲಿದೆ. ಈಗಗಾಲೇ ಪರೀಕ್ಷಾರ್ಥ ಪ್ರಯೋಗ ನಡೆದಿರುವ ಬ್ರಿಯೊ ಅಮೇಜ್ ಥಾಲೈಂಡ್ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಈ ಕಾರಿನಲ್ಲಿ 1.5 ಲೀಟರ್ ಡೀಸೆಲ್ ಎಂಜಿನ್ ಪ್ರಯೋಗ ಮಾಡಲಾಗಿದೆ. ಮುಂದಿನ ವರ್ಷಾಂರಂಭದಲ್ಲಿ ಹೊಂಡಾ ಬ್ರಿಯೊ ಅಮೇಜ್ ಮಾರುಕಟ್ಟೆಗಿಳಿಯುವ ನಿರೀಕ್ಷೆಯಿದೆ. ಈ ಕಾರಿನ ದರ ಸುಮಾರು 8ರಿಂದ 9 ಲಕ್ಷ ರುಪಾಯಿಗಳ ಅಸುಪಾಸಿನಲ್ಲಿರಲಿದೆ.

ಹೊಂಡಾ ಬ್ರಿಯೊ ಅಮೇಜ್ ಪ್ರತಿಸ್ಪರ್ಧಿ

ಹೊಂಡಾ ಬ್ರಿಯೊ ಅಮೇಜ್ ಪ್ರತಿಸ್ಪರ್ಧಿ

ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿಯ ಜನಪ್ರಿಯ ಸೆಡಾನ್ ಕಾರು ಆದ ಸ್ವಿಫ್ಟ್ ಡಿಜೈರ್ ಈಗಾಗಲೇ ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಹೊಂಡಾ ಡಿಜೈರ್‌ಗೆ ಸವಾಲೆಸುವ ಸಾಧ್ಯತೆಯಿದೆ. ಸ್ವಿಫ್ಟ್ ಡಿಜೈರ್‌ನಲ್ಲಿ ಕಂಪನೆಯು 1.3 ಮಲ್ಟಿಜೆಟ್ ಡೀಸೆಲ್ ಎಂಜಿನ್ ಪ್ರಯೋಗ ಮಾಡಿವೆ. ಅಲ್ಲದೆ ಕಾರಿನ ಪ್ರಾರಂಭಿಕ ದರ 6.5 ಲಕ್ಷ ರುಪಾಯಿಗಳಾಗಿದೆ.

ಮರ್ಸಿಡಿಸ್ ಬೆಂಝ್ ಎ ಕ್ಲಾಸ್

ಜರ್ಮನಿಯ ಲಗ್ಷುರಿ ಕಾರು ತಯಾರಕ ಕಂಪನಿಯಾದ ಮರ್ಸಿಡಿಸ್ ಬೆಂಝ್ ದೇಶದಲ್ಲಿ ಇದೇ ಮೊದಲ ಬಾರಿಗೆ ಕಡಿಮೆ ದುಬಾರಿ ಕಾರನ್ನು ಲಾಂಚ್ ಮಾಡಲು ಹೊರಟಿದೆ. ಕಂಪನಿಯು 2013ರಲ್ಲಿ ಆಕರ್ಷಕ ಹ್ಯಾಚ್‌ಬ್ಯಾಕ್ ಎ ಕ್ಲಾಸ್ ಕಾರನ್ನು ಪ್ರದರ್ಶಿಸಲಿದೆ. ಮರ್ಸಿಡಿಸ್ ಬೆಂಝ್ ಈ ಕಾರಿನ ಪೆಟ್ರೋಲ್ ಆವೃತ್ತಿಯಲ್ಲಿ 1.7 ಹಾಗೂ ಡೀಸೆಲ್ ವೆರಿಯಂಟ್‌ಗಳಲ್ಲಿ 1.6 ಲೀಟರ್ ಎಂಜಿನ್ ಪ್ರಯೋಗಿಸಿದೆ. ಪ್ರಮುಖವಾಗಿಯೂ ಯುವ ಜನಾಂಗವನ್ನು ಗುರಿಯಾರಿಗಿರಿಸಿಕೊಂಡು ಬೆಂಝ್ ಈ ಕಡಿಮೆ ದುಬಾರಿ ಕಾರನ್ನು ಮಾರುಕಟ್ಟೆಗೆ ಇಳಿಸುತ್ತಿದೆ. ಈ ಕಾರಿನ ಅಂದಾಜು ಬೆಲೆ ಸುಮಾರು 20 ಲಕ್ಷ ರುಪಾಯಿಗಳಾಗಿವೆ.

ಮರ್ಸಿಡಿಸ್ ಬೆಂಝ್ ಎ ಕ್ಲಾಸ್ ಪ್ರತಿಸ್ಪರ್ಧಿ

ಮರ್ಸಿಡಿಸ್ ಬೆಂಝ್ ಎ ಕ್ಲಾಸ್ ಪ್ರತಿಸ್ಪರ್ಧಿ

ಒಮ್ಮೆ ಮರ್ಸಿಡಿಸೆ ಬೆಂಝ್ ಮಾರುಕಟ್ಟೆಯನ್ನು ಪ್ರವೇಶಿಸಿದ ತಕ್ಷಣ ಬಿಎಎಂಡಬ್ಲ್ಯು ಎಕ್ಸ್1 ಕಾರಿನ ನಡುವೆ ಪ್ರಬಲ ಪೈಪೋಟಿ ಏರ್ಪಡುವ ಸಾಧ್ಯತೆಯಿದೆ. ಈ ಕಾರಿನಲ್ಲಿ ಬಿಎಂಡಬ್ಲ್ಯು 1995 ಸಿಸಿ ಕ್ಷಮತೆಯ ಎಂಜಿನ್ ಪ್ರಯೋಗಿಸಿದೆ. ಇದರ ಜತೆ ದೇಶದಲ್ಲಿ ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಬಿಎಂಡಬ್ಲ್ಯು ಎಕ್ಸ್1 ದರ 24 ಲಕ್ಷ ರೂಪಾಯಿಗಳಾಗಿವೆ.

ಹೊಂಡಾ ಅಕಾರ್ಡ್ ಡೀಸೆಲ್

ಸದ್ಯ ಹೊಂಡಾ ಕಂಪನಿಯು ಡೀಸೆಲ್ ವೆರಿಯಂಟ್ ಕಾರುಗಳನ್ನು ಬಿಡುಗಡೆ ಮಾಡುವುದರಲ್ಲೇ ಮಗ್ನವಾಗಿದೆ. ಹೊಂಡಾ ತನ್ನ ಪ್ರೀಮಿಯಂ ಸೆಡಾನ್ ಕಾರನ್ನು ಸಹ ಮುಂದಿನ ವರ್ಷದಲ್ಲೇ ಬಿಡುಗಡೆ ಮಾಡುವ ಯೋಜನೆ ಹೊಂದಿದೆ. ಕಂಪನಿಯು ಈ ಕಾರಿನಲ್ಲಿ 2.2 ಲೀಟರ್ ಇಂಧನ ಕ್ಷಮತೆಯ ಕಾಮನ್ ರೈಲ್ ಡೀಸೆಲ್ ಎಂಜಿನ್ ಪ್ರಯೋಗಿಸಿದೆ. ಈ ಕಾರಿನ ದರ 22 ಲಕ್ಷ ರುಪಾಯಿಗಳಿರುವ ಸಾಧ್ಯತೆಗಳಿವೆ.

ಹೊಂಡಾ ಅಕಾರ್ಡ್ ಡೀಸೆಲ್ ಪ್ರತಿಸ್ಪರ್ಧಿ

ಹೊಂಡಾ ಅಕಾರ್ಡ್ ಡೀಸೆಲ್ ಪ್ರತಿಸ್ಪರ್ಧಿ

ಚೆಕ್ ಗಣರಾಜ್ಯದ ಪ್ರಮುಖ ಕಾರು ತಯಾರಕ ಕಂಪನಿಯಾದ ಸ್ಕೋಡಾ ಪ್ರೀಮಿಯಂ ಸೆಡಾನ್ ಕಾರುಗಳ ಪೈಕಿ ದೇಶದಲ್ಲಿ ತನ್ನದೇ ಆದ ಗ್ರಾಹಕರನ್ನು ಹೊಂದಿದೆ. ಸ್ಕೋಡಾದ ಸೂಪರ್ಬ್ ಕಾರು ಹೊಂಡಾ ಡೀಸೆಲ್‌ಗೆ ಪ್ರಬಲ ಸವಾಲಾಗುವ ಸಾಧ್ಯತೆಯಿದೆ. ಈ ಕಾರಿನಲ್ಲಿ ಕಂಪನಿಯು 2.0 ಲೀಟರ್ ಟಿಡಿಐ ಎಂಜಿನ್ ಆಳವಡಿಸಿದೆ. ಈ ಕಾರಿನ ದರ 24 ಲಕ್ಷವಾಗಿದೆ.

ಫೋರ್ಡ್ ಇಕೊಸ್ಪೋರ್ಟ್

ದೇಶದ ಮಾರುಕಟ್ಟೆಯಲ್ಲಿ ಎಸ್‌ಯುವಿ ಸೆಗ್ಮೆಂಟ್ ಕಾರುಗಳಿಗೆ ಭಾರಿ ಬೇಡಿಕೆಯಿದೆ. ಆ ನಡುವೆ ಅಮೆರಿಕ ಕಾರು ಕಂಪನಿಯಾದ ಫೋರ್ಡ್ ದೇಶದ ಮಾರುಕಟ್ಟೆಗೆ ಬಹುನಿರೀಕ್ಷಿತ ಇಕೊಸ್ಪೋರ್ಟ್ ಕಾರನ್ನು ಪರಿಚಯಿಸಲಿದೆ. ಕಂಪನಿಯು ಈ ಎಸ್‌ಯುವಿ ಕಾರಿನಲ್ಲಿ 1.6 ಲೀಟರ್ ಇಂಧನ ಕ್ಷಮತೆಯ ಇಕೊಬೂಸ್ಟ್ ಎಂಜಿನ್ ಆಳವಡಿಸಿದೆ. ಈ ಕಾರಿನ ಆಕಾರ ಸಣ್ಣದಾಗಿರುವುದರಿಂದ ಉತ್ತಮ ಇಂಧನ ಕ್ಷಮತೆಯ ಜತೆ ತೆರಿಗೆ ರಿಯಾಯಿಯನ್ನು ಗ್ರಾಹಕರು ಪಡೆಯಬಹುದು. ಈ ಕಾರಿನ ದರ 8ರಿಂದ 9 ಲಕ್ಷ ಅಸುಪಾಸಿನಲ್ಲಿರಲಿದೆ.

ಫೋರ್ಡ್ ಇಕೊಸ್ಪೋರ್ಟ್ ಪ್ರತಿಸ್ಪರ್ಧಿ

ಫೋರ್ಡ್ ಇಕೊಸ್ಪೋರ್ಟ್ ಪ್ರತಿಸ್ಪರ್ಧಿ

ಇತ್ತೀಚೆಗಷ್ಟೇ ತನ್ನ ಫೇವರಿಟ್ ಡಸ್ಟರ್ ಎಸ್‌ಯುವಿ ಕಾರನ್ನು ಫ್ರಾನ್ಸ್ ವಾಹನ ತಯಾರಕ ಕಂಪನಿಯಾದ ರೆನೊ ಪರಿಚರಿಸಿತ್ತು. ಈಗಾಗಲೇ ಭಾರಿ ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಡಸ್ಟರ್ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ಫೋರ್ಡ್ ಇಕೊಫೋರ್ಡ್‌ಗೆ ಸವಾಲಾಗಲಿದೆ. ಈ ಎಸ್‌ಯುವಿ ಪೆಟ್ರೋಲ್ ಆವೃತ್ತಿಯಲ್ಲಿ 1.6 ಲೀಟರ್ ಹಾಗೂ ಡೀಸೆಲ್ ವೆರಿಯಂಟ್‌ನಲ್ಲಿ 1.5 ಲೀಟರ್ ಎಂಜಿನ್ ಆಳವಡಿಸಲಾಗಿದೆ. ರೆನೊ ಡಸ್ಟರ್ ಪ್ರಾರಂಭಿಕ ದರ 7.99 ಲಕ್ಷ ರುಪಾಯಿಗಳಾಗಿವೆ.

ಟಾಟಾ ನ್ಯಾನೋ ಸಿಎನ್‌ಜಿ

ಕೆಲವು ವರ್ಷಗಳ ಹಿಂದೆಯಷ್ಟೇ ದೇಶಕ್ಕೆ ಅಗ್ಗದ ಕಾರು ಪರಿಚಯಿಸಿದ ಟಾಟಾ ಮೋಟಾರ್ಸ್ ಇದೀಗ ಗ್ರಾಹಕರ ಬೇಡಿಕೆಗಳ ಅನುಸಾರವಾಗಿ ಮುಂದಿನ ವರ್ಷದ ಅಗ್ಗದ ಸಿಎನ್‌ಜಿ ಕಾರುಗಳನ್ನು ಪರಿಚಯಿಸಲಿದೆ. ಈ ಕಾರಿನಲ್ಲಿ 624 ಸಿಸಿ ಕ್ಷಮತೆಯ ಎಂಜಿನ್ ಆಳವಡಿಸಲಾಗಿದ್ದು, ದರ 2.5ರಿಂದ 3 ಲಕ್ಷ ರು. ಅಸುಪಾಸಿನಲ್ಲಿರಲಿದೆ.

ಟಾಟಾ ನ್ಯಾನೋ ಸಿಎನ್‌ಜಿ ಪ್ರತಿಸ್ಪರ್ಧಿ

ಟಾಟಾ ನ್ಯಾನೋ ಸಿಎನ್‌ಜಿ ಪ್ರತಿಸ್ಪರ್ಧಿ

ಟಾಟಾ ನ್ಯಾನೋ ಸಿಎನ್‌ಜಿ ವೆರಿಯಂಟ್‌ಗೆ ಹ್ಯುಂಡೈನ ಆಕರ್ಷಕ ಸಿಎನ್‌ಜಿ ಹ್ಯಾಚ್‌ಬ್ಯಾಕ್ ಇಯಾನ್ ಕಾರು ಪ್ರಬಲ ಪ್ರತಿಸ್ಪರ್ಧಿಯಾಗುವ ಸಾಧ್ಯತೆಯಿದೆ. ಹ್ಯುಂಡೈ ಇಯಾನ್ ಎಲ್‌ಪಿಜಿ ಆವೃತ್ತಿ ದರ 3.32 ಲಕ್ಷ ರು.ಗಳಾಗಿವೆ.

ಷೆವರ್ಲೆ ಎಂಜಾಯ್

ವಿಶ್ವದ ಅತಿ ದೊಡ್ಡ ವಾಹನ ತಯಾರಕ ಕಂಪನಿಯಾದ ಜನರಲ್ ಮೋಟಾರ್ಸ್ ಹೊಸ ವರ್ಷದಲ್ಲಿ ಆಕರ್ಷಕ ಷೆವರ್ಲೆ ಎಂಪಿವಿ ಎಂಜಾಯ್ ಕಾರನ್ನು ಪರಿಚಯಿಸಲಿದೆ. ಮುಂದಿನ ವರ್ಷ ಮಧ್ಯಂತರ ಅವಧಿಯಲ್ಲಿ ಪ್ರಸ್ತುತ ಕಾರು ರಸ್ತೆಗಿಳಿಯಲಿದೆ. ಈ ಕಾರಿನಲ್ಲಿ 1.4 ಲೀಟರ್ ಎಂಜಿನ್ ಆಳವಡಿಸಲಾಗಿದೆ. ಅಲ್ಲದೆ ಕಾರಿನ ದರ 7ರಿಂದ 9 ಲಕ್ಷ ರು. ಅಸುಪಾಸಿನಲ್ಲಿರಲಿದೆ.

ಷೆವರ್ಲೆ ಎಂಜಾಯ್ ಪ್ರತಿಸ್ಪರ್ಧಿ

ಷೆವರ್ಲೆ ಎಂಜಾಯ್ ಪ್ರತಿಸ್ಪರ್ಧಿ

ಷೆವರ್ಲೆಯ ಎಂಜಾಯ್‌ಗೆ ಮಾರುತಿ ಸುಜುಕಿ ಎಟಿರ್ಗಾದಿಂದ ಪ್ರಬಲ ಪೈಪೋಟಿ ಏರ್ಪಡಲಿದೆ. ಪ್ರಸ್ತುತ ಎಂಪಿವಿ ಸೆಗ್ಮೆಂಟ್‌ನ ಈ ಕಾರಿಗೆ ಭಾರಿ ಬೇಡಿಕೆಯಿದೆ. ಈ ಕಾರಿನಲ್ಲಿ ಕಂಪನಿಯು 1.4 ಲೀಟರ್ ಎಂಜಿನ್ ಆಳವಡಿಸಿದೆ. ಇದರ ಜತೆ ಆಕರ್ಷಕ ಲುಕ್, ಹೆಚ್ಚಿನ ಸ್ಥಳಾವಕಾಶ ಹಾಗೂ ಆಕರ್ಷಕ ದರಗಳಲ್ಲಿ (5.92 ಲಕ್ಷ ರು.) ಗ್ರಾಹಕರ ಕೈಸೇರುತ್ತಿದೆ.

ಮಹೀಂದ್ರ ವೆರಿಟೊ ಹ್ಯಾಚ್‌ಬ್ಯಾಕ್

ಕಾರು ಸೆಗ್ಮೆಂಟ್‌ನಲ್ಲಿ ಮೊದಲ ಬಾರಿಗೆ ಹ್ಯಾಚ್‌ಬ್ಯಾಕ್ ಕಾರುಗಳನ್ನು ಮಹೀಂದ್ರ ಕಣಕ್ಕಿಳಿಸುತ್ತಿದೆ. ಮಹೀಂದ್ರ ತನ್ನ ಸೆಡಾನ್ ವೆರಿಟೊ ಪ್ಲಾಟ್ ಫಾರ್ಮ್‌ನಲ್ಲಿಯೇ ವೆರಿಟೊ ಹ್ಯಾಚ್‌ಬ್ಯಾಕ್ ಕಾರುಗಳನ್ನು ಪರಿಚಯಿಸಲಿದೆ. ಈ ಕಾರಿನಲ್ಲಿ 1.4 ಲೀಟರ್ ಕ್ಷಮತೆಯ ಎಂಜಿನ್ ಆಳವಡಿಸಲಾಗಿದ್ದು, ಡೀಸೆಲ್ ಹಾಗೂ ಪೆಟ್ರೋಲ್ ಆವೃತ್ತಿಗಳಲ್ಲಿ ಕಾರು ಮಾರುಕಟ್ಟೆಗೆ ಪ್ರವೇಶಿಸಲಿದೆ. ಈ ಕಾರಿನ ನಿರೀಕ್ಷಿತ ದರ 4.5 ರಿಂದ 5 ಲಕ್ಷ ರು.ಗಳಾಗಿವೆ.

ಮಹೀಂದ್ರ ವೆರಿಟೊ ಹ್ಯಾಚ್‌ಬ್ಯಾಕ್ ಪ್ರತಿಸ್ಪರ್ಧಿ

ಮಹೀಂದ್ರ ವೆರಿಟೊ ಹ್ಯಾಚ್‌ಬ್ಯಾಕ್ ಪ್ರತಿಸ್ಪರ್ಧಿ

ದೇಶದ ಅತಿ ದೊಡ್ಡ ಕಾರು ತಯಾರಕ ಮಾರುತಿ ಸುಜುಕಿಯ ಸ್ವಿಫ್ಟ್ ಬಗ್ಗೆ ಎರಡು ಮಾತಿಲ್ಲ. ಮಾರುತಿ ಸ್ವಿಫ್ಟ್ ಈಗಾಗಲೇ ಭಾರಿ ಜನಪ್ರಿಯತೆಗೊಂಡಿದ್ದು ಬ್ರಾಂಡ್ ನೇಮ್ ಉಳಿಸಿಕೊಂಡಿದೆ. ಈ ಕಾರಿನಲ್ಲಿ ಕಂಪನಿಯು 1.2 ಲೀಟರ್ ಮಲ್ಟಿಜೆಟ್ ಎಂಜಿನ್ ಆಳವಡಿಸಲಾಗಿದೆ. ಈ ಕಾರಿನ ದರ 4.47 ಲಕ್ಷ ರುಪಾಯಿಗಳಾಗಿವೆ.

ಟಾಟಾ ನ್ಯಾನೋ ಡೀಸೆಲ್

ಈಗಾಗಲೇ ಘೋಷಿಸಿರುವಂತೆಯೇ ಟಾಟಾ ನ್ಯಾನೋ ಡೀಸೆಲ್ ಆವೃತ್ತಿ ಮುಂದಿನ ವರ್ಷ ಆಗಮನವಾಗುವ ನಿರೀಕ್ಷೆಯಿದೆ. ಇದನ್ನು ನಂಬುವುದು ನಿಮಗೆ ಬಿಟ್ಟ ವಿಚಾರ. ಯಾಕೆಂದರೆ ಟಾಟಾ ಮೋಟಾರ್ಸ್ ನ್ಯಾನೋ ಡೀಸೆಲ್ ಆವೃತ್ತಿ ಪ್ರತಿ ಲೀಟರ್‌ಗೆ 40 ಕಿಲೋ ಮೀಟರ್ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ ಎಂದು ಕಂಪನಿಯು ಪ್ರತಿಪಾದಿಸುತ್ತಿದೆ. ವರ್ಷಾಂತ್ಯದಲ್ಲಿ ನ್ಯಾನೋ ಡೀಸೆಲ್ ಕಾರು ಆಗಮನವಾಗುವ ನಿರೀಕ್ಷೆಯಿದ್ದು ಅಗ್ಗದ ದರದಲ್ಲಿ (2.5-3 ಲಕ್ಷ ರು.) ಗ್ರಾಹಕರ ಕೈಸೇರಲಿದೆ.

ಟಾಟಾ ನ್ಯಾನೋ ಡೀಸೆಲ್ ಪ್ರಿತಿಸ್ಪರ್ದಿ

ಟಾಟಾ ನ್ಯಾನೋ ಡೀಸೆಲ್ ಪ್ರಿತಿಸ್ಪರ್ದಿ

ಟಾಟಾ ನ್ಯಾನೋ ಡೀಸೆಲ್ ವೆರಿಯಂಟ್‌ ಜತೆ ಸ್ಪರ್ಧಿಸಲು ಸದ್ಯ ಮಾರುಕಟ್ಟೆಯಲ್ಲಿ ಯಾವುದೇ ಕಾರುಗಳಿಲ್ಲ. ಆದರೂ ನ್ಯಾನೋ ಡೀಸೆಲ್ ಆವೃತ್ತಿಗೆ ಮಾರುತಿ ಸುಜುಕಿ ಆಲ್ಟೊ 800 ಸವಾಲೆಸುವ ನಿರೀಕ್ಷೆಯಿದೆ. ಈಗಾಗಲೇ ಭಾರತ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಮಾರುತಿ ಆಲ್ಟೊ ಪ್ರಾರಂಭಿಕ ದರ 2.44 ಲಕ್ಷ ರುಪಾಯಿಗಳಾಗಿವೆ.

More from DriveSpark

Article Published On: Friday, November 30, 2012, 12:20 [IST]
English summary
Upcoming cars in India breakdown. The 2013 upcoming cars in India are going to cause big waves. We look at the fresh bunch of upcoming cars in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+