ಬಿಎಂಡಬ್ಲ್ಯು 13 ಲಕ್ಷ ಕಾರು ಹಿಂಪಡೆತ, ಯಾಕಂತೆ?

2003ರಿಂದ 2010ರ ಅವಧಿಯಲ್ಲಿ ನಿರ್ಮಿಸಿದ ಕಾರುಗಳಲ್ಲಿ ಎಲೆಕ್ಟ್ರಿಕಲ್ ಸಮಸ್ಯೆ ಕಂಡು ಬಂದ ಹಿನ್ನಲೆಯಲ್ಲಿ ಸುಮಾರು 13 ಲಕ್ಷ ಕಾರುಗಳನ್ನು ವಾಪಸ್ ಪಡೆಯುವುದಾಗಿ ಬಿಎಂಡಬ್ಲ್ಯು ಎಜಿ ಪ್ರಕಟಿಸಿದೆ. ಕಾರಿನ ಬೂಟ್ ಭಾಗದಲ್ಲಿ ಬ್ಯಾಟರಿ ಕೇಬಲ್ ಸಮಸ್ಯೆಯಿದ್ದು, ಇದರಿಂದ ಬೆಂಕಿ ಅನಾಹುತ ಸಂಭವಿಸುವ ಅಪಾಯವಿರುವುದರಿಂದ ಕಂಪನಿಯು ಈ ಬೃಹತ್ ಹಿಂಪಡೆತಕ್ಕೆ ಮುಂದಾಗಿದೆ.

5 ಸೀರಿಸ್ ಮತ್ತು 5 ಸೀರಿಸ್ ಕಾರುಗಳನ್ನು ವಾಪಸ್ ಪಡೆಯುವುದಾಗಿ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. ಶೇಕಡ 1ರಷ್ಟು ಕಾರುಗಳಲ್ಲಿ ಈ ಸಮಸ್ಯೆ ಇರುವುದು ಗಮನಕ್ಕೆ ಬಂದಿದ್ದು, ಗ್ರಾಹಕರಿಗೆ ದಕ್ಷ ಸೇವೆ ನೀಡುವ ಉದ್ದೇಶದಿಂದ ರಿಕಾಲ್ ಮಾಡುವುದಾಗಿ ಬಿಎಂಡಬ್ಲ್ಯು ತಿಳಿಸಿದೆ.

ಸಂಭಾವ್ಯ ಅಪಾಯ ತಪ್ಪಿಸಲು ಈ ಹಿಂಪಡೆತ ಮಾಡಲಿದ್ದೇವೆ ಎಂದು ಕಂಪನಿಯು ಬಿಎಂಡಬ್ಲ್ಯು ಕಾರು ಮಾಲೀಕರಿಗೆ ಬರೆದ ಪತ್ರದಲ್ಲಿ ತಿಳಿಸಿದೆ. ತಮ್ಮ ಕಾರಿನೊಂದಿಗೆ ಗ್ರಾಹಕರು ಹತ್ತಿರದ ಬಿಎಂಡಬ್ಲ್ಯು ಶೋರೂಂಗೆ ಆಗಮಿಸಬೇಕಾಗಿ ಸೂಚಿಸಲಾಗಿದೆ. ರಿಪೇರಿ ಕೆಲಸ 30 ನಿಮಿಷಕ್ಕಿಂತ ಹೆಚ್ಚಿಲ್ಲವೆಂದು ಕಂಪನಿ ಹೇಳಿದೆ.

ಹೆಚ್ಚಿನ ಕಾರುಗಳು ಅಮೆರಿಕದಲ್ಲಿ ರಿಕಾಲ್ ಮಾಡಲಾಗುವುದು. ಅಂದರೆ ಅಮೆರಿಕದಲ್ಲಿ 3.68 ಲಕ್ಷ ಕಾರುಗಳನ್ನು ವಾಪಸ್ ಪಡೆಯಲು ಕಂಪನಿ ನಿರ್ಧರಿಸಲಾಗಿದೆ. ಜರ್ಮನಿಯಿಂದ 2.93 ಲಕ್ಷ ಕಾರುಗಳು, ಬ್ರಿಟನಿನಿಂದ 1.09 ಲಕ್ಷ ಮತ್ತು ಚೀನಾದಿಂದ 1.02 ಲಕ್ಷ ಕಾರುಗಳನ್ನು ಕಂಪನಿ ಹಿಂಪಡೆಯಲಿದೆ.

ಭಾರತದಿಂದ ಯಾವುದೇ ಕಾರುಗಳನ್ನು ವಾಪಸ್ ಪಡೆಯುವುದಿಲ್ಲವೆಂದು ಕಂಪನಿ ತಿಳಿಸಿದೆ.

More from DriveSpark

Article Published On: Tuesday, March 27, 2012, 12:07 [IST]
English summary
BMW AG has announced a massive recall of 13 lakh cars after it found electrical problems in cars built between 2003 and 2010. According to reports there could be a defective battery cable cover in the trunk of the car that could lead to some electrical problems which could result in a fire.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+