ಅಶೋಕ್ ಲೇಲ್ಯಾಂಡ್ ಹೊಸ ದೋಸ್ತ್ ಅನಾವರಣ

ಚೆನ್ನೈ, ಸೆ 12: ದೋಸ್ತ್ ಹೆಸರಿನ ಹಗುರ ವಾಣಿಜ್ಯ ವಾಹನ ರಸ್ತೆಗಿಳಿದು ಒಂದು ವರ್ಷವಾದ ಸಂಭ್ರಮದ ನೆನಪಿಗಾಗಿ ನೂತನ ದೋಸ್ತ್ ಆವೃತ್ತಿಯೊಂದನ್ನು ಹಿಂದೂಜಾ ಸಮೂಹದ ಅಂಗಸಂಸ್ಥೆ ಅಶೋಕ್ ಲೇಲ್ಯಾಂಡ್ ಪರಿಚಯಿಸಿದೆ.

ಅಶೋಕ್ ಲೇಲ್ಯಾಂಡ್ ಮತ್ತು ನಿಸ್ಸಾನ್ ಮೋಟರ್ ಕಂಪನಿಯು ಕಳೆದ ವರ್ಷ ಇದೇ ಸಮಯದಲ್ಲಿ 2.5 ಟನ್ ಸಾಮರ್ಥ್ಯದ ದೋಸ್ಟ್ ಕಮರ್ಷಿಯಲ್ ವಾಹನ ಪರಿಚಯಿಸಿತ್ತು. ಈ ಸಣ್ಣ ವಾಣಿಜ್ಯ ವಾಹನ ಮಾರುಕಟ್ಟೆಯಲ್ಲಿ ಯಶಸ್ವಿಯಾಗಿ ಮಾರಾಟವಾಗುತ್ತಿದೆ.

ನೂತನ ಲಿಮಿಟೆಡ್ ಅಡಿಷನ್ ದೋಸ್ಟ್ ವಾಹನಕ್ಕೆ ಕಂಪನಿಯು ಒಂದಿಷ್ಟು ಹೊಸ ಫೀಚರುಗಳನ್ನು ಅಳವಡಿಸಿದೆ. ಇದು ಕಂಪನಿಯ ಎಲ್ಲಾ 45 ಟಚ್ ಪಾಯಿಂಟುಗಳಲ್ಲಿ ಲಭ್ಯವಿರಲಿದೆ ಎಂದು ಅಶೋಕ್ ಲೇಲ್ಯಾಂಡ್ ಉಪ ಚೇರ್ಮನ್ ವಿ ಸುಮಂತ್ರನ್ ಹೇಳಿದ್ದಾರೆ.

ದೋಸ್ತ್ ಅಂದರೆ: ಕಳೆದ ವರ್ಷ ಅಶೋಕ್ ಲೇಲ್ಯಾಂಡ್, ವಾಣಿಜ್ಯ ಉದ್ದೇಶದ ಎಂಟ್ರಿ ಲೆವೆಲ್ ವಾಹನ ದೋಸ್ಟ್ ಪರಿಚಯಿಸಿತ್ತು. ಇದರ ಎಕ್ಸ್ ಶೋರೂಂದರ 3.79 ಲಕ್ಷ ರು.ನಿಂದ 4.39 ಲಕ್ಷ ರು.ವರೆಗಿದೆ. ಇದು ಹಗುರ ವಾಣಿಜ್ಯ ವಾಹನ.

ದೋಸ್ತ್ ಅಂದ್ರೆ ಸ್ನೇಹಿತ. ಇದು ಅಶೋಕ್ ಲೇಲ್ಯಾಂಡ್ ಮತ್ತು ನಿಸ್ಸಾನ್ ಜಂಟಿ ಉದ್ಯಮದ ಮೊದಲ ವಾಹನ ಕೂಡ ಹೌದು. ಇದು ಮೂರು ಆವೃತ್ತಿಗಳಲ್ಲಿ ದೊರಕುತ್ತದೆ. ಇದರಲ್ಲಿ ಹೆಚ್ಚು ದರದ ಟಾಪ್ ಎಂಡ್ ಆವೃತ್ತಿಯಲ್ಲಿ ಏರ್ ಕಂಡಿಷನ್, ಪವರ್ ಸ್ಟೇರಿಂಗ್ ಮತ್ತು ಫ್ಯಾಬ್ರಿಕ್ ಸೀಟುಗಳಿವೆ.

More from DriveSpark

Article Published On: Wednesday, September 12, 2012, 10:40 [IST]
English summary
Country's leading heavy vehicle manufacturer Ashok Leyland has unveiled the limited edition of its latest small commercial vehicle 'DOST' on its first anniversary.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+