ರಸ್ತೆಗೆ ನಡುಕ: ಸ್ಪೋರ್ಟ್ಸ್ ಕಾರು ಆಡಿ ಟಿಟಿ ರಸ್ತೆಗೆ
ಬಹುನಿರೀಕ್ಷಿತ ಸ್ಪೋರ್ಟ್ ಕಾರು ಆಡಿ ಟಿಟಿ ದೇಶದ ರಸ್ತೆಗಿಳಿದಿದೆ. ಜರ್ಮನಿಯ ಐಷಾರಾಮಿ ಕಾರು ತಯಾರಿಕಾ ಕಂಪನಿ ಆಡಿಯು ನೂತನ ಕಾರನ್ನು ಸಿಬಿಯು ಹಾದಿ ಮೂಲಕ ಭಾರತಕ್ಕೆ ರಫ್ತು ಮಾಡಲಿದೆ. ಆಡಿ ಟಿಟಿ ಎಕ್ಸ್ ಶೋರೂಂ ದರ 48.36 ಲಕ್ಷ ರುಪಾಯಿ.
ಕಂಪನಿಯ ಈ ಕಾರು ಖರೀದಿಗೆ ಜೂನ್ ತಿಂಗಳವರೆಗೆ ಕಾಯಬೇಕು "ಪ್ರೀಮಿಯಂ ಸ್ಪೋರ್ಟ್ ಕಾರು ಮಾರುಕಟ್ಟೆಯಲ್ಲಿ ನಾವೀಗಲೇ ಅಗ್ರಸ್ಥಾನದಲ್ಲಿದ್ದೇವೆ. ಸ್ಪೋರ್ಟ್ ಕಾರು ಸೆಗ್ಮೆಂಟ್ ನಲ್ಲಿ ಇನ್ನಷ್ಟು ಪಾಲು ಪಡೆಯಲು ಟಿಟಿ ನೆರವಾಗುವ ಭರವಸೆ ನಮಗಿದೆ" ಎಂದು ಆಡಿ ಇಂಡಿಯಾ ಮುಖ್ಯಸ್ಥ ಮೈಕಲ್ ಪಾರ್ಷ್ಕೆ ಹೇಳಿದ್ದಾರೆ.
ನೂತನ ಆಡಿ ಟಿಟಿ ಕೂಪ್ ಕಾರು 2.0 ಲೀಟರಿನ ಟಿಎಫ್ಎಸ್ಐ ಎಂಜಿನ್ ಹೊಂದಿದೆ. ಇದು 6 ಸಾವಿರ ಆವರ್ತನಕ್ಕೆ 214 ಹಾರ್ಸ್ ಪವರ್ ಮತ್ತು 1,600 ಆವರ್ತನಕ್ಕೆ 350ಎನ್ಎಂ ಟಾರ್ಕ್ ಪವರ್ ನೀಡುತ್ತದೆ.
ಇದರಲ್ಲಿ ಕೇವಲ 5.6 ಸೆಕೆಂಡಿನಲ್ಲಿ 0-100 ಕಿ.ಮೀ. ವೇಗ ಪಡೆದುಕೊಳ್ಳಬಹುದಾಗಿದೆ. ಆರ್ 8, ಆರ್ 8 ಸ್ಪೈಡರ್ ಮತ್ತು ಆರ್ ಎಸ್5 ಇತ್ಯಾದಿ ಹಲವು ಸ್ಪೋರ್ಟ್ ಕಾರುಗಳನ್ನು ಆಡಿ ಮಾರಾಟ ಮಾಡುತ್ತಿದೆ. (ಕನ್ನಡ ಡ್ರೈವ್ ಸ್ಪಾರ್ಕ್)


Click it and Unblock the Notifications









