ಮರ್ಸಿಡಿಸ್ ಬೆಂಝ್ ಓವರ್‌ಟೇಕ್ ಮಾಡಿದ ಆಡಿ

ದೇಶದ ಐಷಾರಾಮಿ ಕಾರುಮಾರುಕಟ್ಟೆಯ ಅಗ್ರ ಮೂರು ಸ್ಥಾನಕ್ಕೆ ಪೈಪೋಟಿ ಜೋರಾಗಿಯೇ ಇದೆ. ಇದೀಗ ಎರಡನೇ ಸ್ಥಾನದಲ್ಲಿದ್ದ ಮರ್ಸಿಡಿಸ್ ಬೆಂಝ್ ಕಂಪನಿಯನ್ನು ಜರ್ಮನಿಯ ಐಷಾರಾಮಿ ಕಾರು ಕಂಪನಿ ಆಡಿ ಇಂಡಿಯಾ ಹಿಂದಿಕ್ಕಿದೆ. ಮರ್ಸಿಡಿಸ್ ಬೆಂಝ್ ಅಗ್ರ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಬಿಎಂಡಬ್ಲ್ಯು ಮತ್ತು ಆಡಿ ಕಂಪನಿಗಳು ಇತ್ತೀಚೆಗೆ ಭಾರತದ ಮಾರುಕಟ್ಟೆಗೆ ಪ್ರವೇಶಿಸಿವೆ. ಆದರೆ ಮರ್ಸಿಡಿಸ್ ಬೆಂಝ್ ಇಲ್ಲಿಗೆ ಬಂದು ಸುಮಾರು 15 ವರ್ಷಗಳು ಸಂದಿವೆ. ಬಿಎಂಡಬ್ಲ್ಯು ಮತ್ತು ಆಡಿ ಇಂಡಿಯಾ ಕಂಪನಿಗಳು ಭಾರತದಲ್ಲಿ 2007ರಲ್ಲಿ ವಹಿವಾಟು ಆರಂಭಿಸಿದ್ದವು.

ಜನವರಿಯಿಂದ ಮಾರ್ಚ್ ತಿಂಗಳವರೆಗಿನ ವಾಹನ ಮಾರಾಟದಲ್ಲಿ ಮರ್ಸಿಡಿಸ್ ಕಂಪನಿಯನ್ನು ಆಡಿ ಹಿಂದಿಕ್ಕಿದೆ. ಈ ಅವಧಿಯಲ್ಲಿ ಬಿಎಂಡಬ್ಲ್ಯು ಕಂಪನಿಯು ಸುಮಾರು 2,369 ಐಷಾರಾಮಿ ಕಾರುಗಳನ್ನು ಮಾರಾಟ ಮಾಡಿದೆ. ಸುಮಾರು 2,269 ವಾಹನ ಮಾರಾಟ ಮಾಡಿ ಆಡಿ ಎರಡನೇ ಸ್ಥಾನದಲ್ಲಿ ವಿರಾಜಮಾನವಾಗಿದೆ. ಆದರೆ ಮರ್ಸಿಡಿಸ್ ಬೆಂಝ್ ಸುಮಾರು 2,130 ಕಾರು ಮಾರಾಟದಿಂದಾಗಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಆದರೂ ಮಾರಾಟ ಇಳಿಕೆಯನ್ನು ಸೋಲು ಎಂದು ಒಪ್ಪಲು ಮರ್ಸಿಡಿಸ್ ಬೆಂಝ್ ಇಂಡಿಯಾ ನಿರಾಕರಿಸಿದೆ. "ನಮಗೆ ನಂಬರ್ ಮುಖ್ಯವಲ್ಲ. ಗ್ರಾಹಕರಿಗೆ ಅತ್ಯುತ್ತಮ ಐಷಾರಾಮಿ ಉತ್ಪನ್ನ ನೀಡುವುದಷ್ಟೇ ನಮ್ಮ ಗುರಿ. ನಮಗೆ ಕಮಾಡಿಟಿಗಿಂತಲೂ ಲಗ್ಷುರಿ ಮುಖ್ಯ. ನಂಬರ್ ಹೆಚ್ಚಿಸುವುದು ನಮ್ಮ ಈಗಿನ ಆದ್ಯತೆಯಲ್ಲ" ಎಂದು ಮರ್ಸಿಡಿಸ್ ಮಾರಾಟ ವಿಭಾಗದ ನಿರ್ದೇಶಕರಾದ ದೇಬಾಸಿಸ್ ಮಿತ್ರಾ ಹೇಳಿದ್ದಾರೆ.

More from DriveSpark

Article Published On: Friday, April 13, 2012, 16:01 [IST]
English summary
After BMW, Audi India has now overtook Mercedes Benz in sales. BMW is at the first spot, Audi at second and Mercedes has been pushed to 3rd spot. Sales reports of the first quarter of 2012 (January-March) reveal that BMW lead the market by selling 2,369 units, Audi second with sales of 2,269 and Mercedes in t
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+