ಉಚಿತ ಕಾರು ಚೆಕಪ್ ಬಗ್ಗೆ ಈ ಕೂಡಲೇ ಪ್ರತಿಕ್ರಿಯಿಸಿರಿ!

Written By:

ನಿಮ್ಮ ಬಳಿ ಕಾರೊಂದು ಇದ್ದಿದ್ದರೆ ಉಚಿತ ಕಾರು ಚೆಕಪ್ ಕ್ಯಾಂಪ್‌ಗಳ ಬಗ್ಗೆ ಹೆಚ್ಚು ತಿಳಿದುಕೊಂಡಿರಬಹುದು. ಆದರೆ ನಾವಿಂದು ಬಹಿರಂಗಪಡಿಸುವ ಆಘಾತಕಾರಿ ವಿಚಾರ ಏನೆಂದರೆ ಇಂತಹ ಫ್ರಿ ಕಾರು ಚೆಕಪ್ ಕ್ಯಾಂಪ್‌ಗಳಿಂದ ಗ್ರಾಹಕರಿಗೆ ಹೆಚ್ಚಿನ ಪ್ರಯೋಜನ ಸಿಗುತ್ತಿಲ್ಲ.

ಸಾಮಾನ್ಯವಾಗಿ ಫ್ರಿ ಚೆಕಪ್ ಕ್ಯಾಂಪ್‌ಗಳನ್ನು ನಿರ್ದಿಷ್ಟ ಕಂಪನಿಗಳು ಘೋಷಿಸುತ್ತವೆ. ಆದರೆ ಫ್ರಿ ಚೆಕಪ್ ಸಂದರ್ಭದಲ್ಲಿ ಸರಿಯಾದ ಸೇವೆ ನೀಡಲಾಗುತ್ತಿಲ್ಲ ಎಂಬ ಬಗ್ಗೆ ಗ್ರಾಹಕರಿಂದಲೇ ಬಹಳಷ್ಟು ದೂರುಗಳು ಕೇಳಿ ಬಂದಿವೆ.

ಎಂಜಿನ್, ಟ್ರಾನ್ಸ್ ಮಿಷನ್, ಎಲೆಕ್ಟ್ರಿಕಲ್ ಸಿಸ್ಟಮ್ ,ಬಾಡಿ, ಎಸಿ, ಎಕ್ಸ್ ಟಿರಿಯರ್ ಇತ್ಯಾದಿ ಭಾಗಗಳನ್ನು ಕಾರು ಚೆಕಪ್ ಸಂದರ್ಭದಲ್ಲಿ ಪರಿಶೀಲಿಸಲಾಗುತ್ತದೆ. ಆದರೆ ಫ್ರಿ ಚೆಕ್ ಕ್ಯಾಂಪ್ ಸಂದರ್ಭದಲ್ಲಿ ಭಾರಿ ಸಂಖ್ಯೆಯ ಗ್ರಾಹಕರು ನೊಂದಣಿ ಮಾಡಿರುವುದರಿಂದ ಮೆಕಾನಿಕಲ್‌ಗಳಿಗೆ ಎಲ್ಲ ಕಾರುಗಳನ್ನು ಸರಿಯಾಗಿ ಪರಿಶೀಲಿಸಲು ಸಯಮ ಸಿಗುತ್ತಿಲ್ಲ.

ಇದರಿಂದ ಬೇಗನೇ ಕೈತೊಳೆದುಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ಎಲ್ಲವೂ ಉಚಿತವಾಗಿ ಪರಿಶೀಲಿಸಲಾಗುವುದು ಎಂದು ತಿಳಿದುಕೊಂಡ ಗ್ರಾಹಕರು ಮೋಸ ಹೋಗುತ್ತಾರೆ. ಇಲ್ಲಿ ಕಂಪನಿಗಳು ಕೇವಲ ಮಾರಾಟ ತಂತ್ರ ಅನುಸರಿಸುತ್ತಿದೆ ಎಂಬುದನ್ನು ಗ್ರಾಹಕರು ಮರೆಯಬಾರದು.

ಇದರಿಂದ ಗ್ರಾಹಕರಿಗೆ ಕಹಿ ಅನುಭವಾಗುತ್ತದೆ. ಸರಿಯಾಗಿ ಸರ್ವೀಸ್ ಕೂಡಾ ಮಾಡಲಾಗದೇ ಆಕ್ರೋಶಕ್ಕೊಳಗಾಗುತ್ತಾರೆ. ಅದೇ ಹೊತ್ತಿಗೆ ಕಂಪನಿಗಳು ಸ್ಪೇರ್ ಪಾರ್ಟ್ಸ್‌ನಲ್ಲಿ ಲೇಬರ್ ಚಾರ್ಜ್ ಜಾಸ್ತಿ ಮಾಡುವ ಮೂಲಕ ಮಾರಾಟ ತಂತ್ರ ಅನುಸರಿಸುತ್ತವೆ.

ಇಷ್ಟೆಲ್ಲ ಆದರೂ ಕಾರನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವುದು ಅತಿ ಅಗತ್ಯ. ಇದರಿಂದ ಪದೇ ಪದೇ ಎದುರಾಗುತ್ತಿರುವ ಸಮಸ್ಯೆಗಳನ್ನು ತಪ್ಪಿಸಬಹುದು. ಆದರೆ ಇಂತಹ ಉಚಿತ ಚೆಕಪ್ ಕ್ಯಾಂಪ್‌ಗಳಲ್ಲೇ ಭರಯಸೆಯನ್ನಿಡಬಾರದು. ಇದು ಗ್ರಾಹಕರಿಂದಲೇ ಬಂದ ಪ್ರತಿಕ್ರಿಯೆಯಾಗಿದ್ದು ಈ ಬಗ್ಗೆ ನಿಮ್ಮ ಅನುಭವಗಳಗಳನ್ನು ಕೂಡಾ ನಮ್ಮ ಕಾಮೆಂಟ್ಸ್ ಬಾಕ್ಸ್‌ನಲ್ಲಿ ಹಂಚಿಕೊಳ್ಳಬಹುದಾಗಿದೆ.

ಉಚಿತ ಕಾರು ಚೆಕಪ್ ಕ್ಯಾಂಪ್

ಉಚಿತ ಕಾರು ಚೆಕಪ್ ಕ್ಯಾಂಪ್ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಉಚಿತ ಕಾರು ಚೆಕಪ್ ಕ್ಯಾಂಪ್

ಉಚಿತ ಕಾರು ಚೆಕಪ್ ಕ್ಯಾಂಪ್ ಬಗ್ಗೆ ಗ್ರಾಹಕರಲ್ಲಿ ಅಸಾಮಾಧಾನ

ಉಚಿತ ಕಾರು ಚೆಕಪ್ ಕ್ಯಾಂಪ್

ಆಯಿಲ್ ಲೆವೆಲ್ ಕೂಡಾ ಸರಿಯಾಗಿ ಮಾಡಿಕೊಡಲ್ಲ ಎಂಬ ಬಗ್ಗೆ ಅನೇಕ ದೂರುಗಳು ಕೇಳಿಬಂದಿವೆ.

ಉಚಿತ ಕಾರು ಚೆಕಪ್ ಕ್ಯಾಂಪ್

ಕಾರಿನ ಇಂಟಿರಿಯರ್ ಭಾಗದಲ್ಲಿ ಅಂಟಿಕೊಂಟಿರುವ ಧೂಳುಗಳನ್ನು ಕ್ಲೀನ್ ಮಾಡುವುದರಲ್ಲೂ ವಿಫಲತೆ ಅನುಭವಿಸುತ್ತಾರೆ.

ಉಚಿತ ಕಾರು ಚೆಕಪ್ ಕ್ಯಾಂಪ್

ಕೇವಲ ಹೊರಂಗಣ ಭಾಗಗಳನ್ನು ಮಾತ್ರ ಸರಿಯಾಗಿ ವಾಶ್ ಮಾಡಿಕೊಡುತ್ತಾರೆ.

ಉಚಿತ ಕಾರು ಚೆಕಪ್ ಕ್ಯಾಂಪ್

ಎಂಜಿನ್, ಟ್ರಾನ್ಸ್ ಮಿಷನ್, ಎಲೆಕ್ಟ್ರಿಕಲ್ ಸಿಸ್ಟಮ್ ,ಬಾಡಿ, ಎಸಿ, ಎಕ್ಸ್ ಟಿರಿಯರ್ ಇತ್ಯಾದಿ ಭಾಗಗಳನ್ನು ಕಾರು ಚೆಕಪ್ ಸಂದರ್ಭದಲ್ಲಿ ಪರಿಶೀಲಿಸಲಾಗುತ್ತದೆ.

ಉಚಿತ ಕಾರು ಚೆಕಪ್ ಕ್ಯಾಂಪ್

ಸಮರ್ಪಕ ಸೇವೆ ನೀಡಲು ಕಂಪನಿಗಳು ವಿಫಲ

ಉಚಿತ ಕಾರು ಚೆಕಪ್ ಕ್ಯಾಂಪ್

ಈ ಬಗ್ಗೆ ನಿಮ್ಮ ಅನುಭವಗಳನ್ನು ಕಾಮೆಂಟ್ ಬಾಕ್ಸ್‌ನಲ್ಲಿ ಹಂಚಿಕೊಳ್ಳಿರಿ.

English summary
Most of the car owners complaining about the free car check up camps. If you have the car please share your opinion with the given comment box below.
Story first published: Tuesday, December 18, 2012, 16:40 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark