ಬಜಾಜ್ ಪುಟ್ಟ ಕಾರ್ ಈ ವರ್ಷ ಬರೋದು ಖಚಿತ

ಬಜಾಜ್ ಕಂಪನಿಯ ಸಣ್ಣಬಂಡಿ ಆರ್‌ಇ60 ಈ ಆರ್ಥಿಕ ವರ್ಷದಲೇ ರಸ್ತೆಗಿಳಿಯಲಿದೆ ಎಂದು ಕಂಪನಿ ಖಚಿತಪಡಿಸಿದೆ. ಪ್ರಸಕ್ತ ವರ್ಷದ ಆರಂಭದಲ್ಲಿ ನಾಲ್ಕು ಚಕ್ರದ ಈ ಸಣ್ಣ ಕಾರನ್ನು ಕಂಪನಿ ದೆಹಲಿ ವಾಹನ ಪ್ರದರ್ಶನದಲ್ಲಿ ಪ್ರದರ್ಶಿಸಿತ್ತು.

ನೂತನ ಆರ್‌ಇ60 ವಾಣಿಜ್ಯ ಉತ್ಪಾದನೆ ಆರಂಭಿಸುವ ಸಮಯದಲ್ಲೇ ಬಿಡುಗಡೆ ಮಾಡಲು ಬಜಾಜ್ ನಿರ್ಧರಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ಬಜಾಜ್ ಆಟೋ ಲಿಮಿಟೆಡ್ ಹಿರಿಯ ಉಪಾಧ್ಯಕ್ಷರಾದ ಎಸ್. ರವಿಕುಮಾರ್ ನಿರಾಕರಿಸಿದ್ದಾರೆ.

ದೆಹಲಿ ವಾಹನ ಪ್ರದರ್ಶನದಲ್ಲಿ ಬಜಾಜ್ ಆಟೋ ಕಂಪನಿಯು RE60 ಪರಿಚಯಿಸಿದಾಗ ಟೀಕೆ ವ್ಯಕ್ತವಾಗಿತ್ತು. ಬಜಾಜ್ ಕಂಪನಿಯ ಕಡಿಮೆ ವೆಚ್ಚದ ಕಾರಿನ ನಿರೀಕ್ಷೆಯಲ್ಲಿದ್ದವರೆಲ್ಲ ನಾಲ್ಕು ಚಕ್ರದ ರಿಕ್ಷಾವೆಂದು ಇದನ್ನು ಟೀಕಿಸಿದ್ದರು.

ಕಡಿಮೆ ವೆಚ್ಚದ ಕಾರು ಉತ್ಪಾದನೆಗೆ ಈ ಹಿಂದೆ ನಿಸ್ಸಾನ್ ಮತ್ತು ರೆನಾಲ್ಟ್ ಕಂಪನಿಗಳ ಜೊತೆ ಬಜಾಜ್ ಒಪ್ಪಂದ ಮಾಡಿಕೊಂಡಿತ್ತು. ಆದರೆ ಈ ಒಪ್ಪಂದ ವಿಫಲವಾದ ನಂತರ ಕಂಪನಿಯು ತಾನೇ ಒಬ್ಬಂಟಿಯಾಗಿ ಸಣ್ಣಕಾರು ಪರಿಚಯಿಸುವುದಾಗಿ ಹೇಳಿತ್ತು.

ಬಜಾಜ್ ಕಂಪನಿಯ ನೂತನ ಪುಟ್ಟಬಂಡಿ ಆಟೋರಿಕ್ಷಾಗಳಿಗೆ ಪರ್ಯಾಯವಾಗಿ ರಸ್ತೆಯಲ್ಲಿ ಜಾಗಪಡೆದುಕೊಳ್ಳುವ ನಿರೀಕ್ಷೆಯನ್ನೂ ವಾಹನ ವಿಶ್ಲೇಷಕರು ವ್ಯಕ್ತಪಡಿಸುತ್ತಾರೆ.

More from DriveSpark

Article Published On: Friday, May 18, 2012, 15:06 [IST]
English summary
The launch of the Bajaj RE60 has been a topic of suspense since its unveiling at the Delhi Auto Expo this January. The four wheeler which was initially considered to be a competitor of the Tata Nano has emerged just as a replacement of the three wheeled auto rickshaw.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+