ಇದು ಮೋಸ, ನಮಗಿಂತ ಮೊದ್ಲು ಶ್ರೀಲಂಕಾಕ್ಕೆ ಬಜಾಜ್ ಕಾರ್!

Bajaj RE 60 Going To Sri Lanka Before India Launch
ಬಜಾಜ್ ಇತ್ತೀಚೆಗೆ ಅನಾವರಣ ಮಾಡಿದ ನಾಲ್ಕು ಚಕ್ರದ ವಾಹನ(ಕಾರು ಎನ್ನಬಹುದು) RE 60ಯನ್ನು ಆರಂಭದಲ್ಲಿ ಶ್ರೀಲಂಕಾದಲ್ಲಿ ಮಾರಾಟ ಮಾಡಲು ನಿರ್ಧರಿಸಿದೆ. ನಂತರ ಭಾರತದ ಮಾರುಕಟ್ಟೆಗೆ ಈ ಪುಟ್ಟ ಕಾರನ್ನು ಅನಾವರಣ ಮಾಡಲು ಕಂಪನಿ ನಿರ್ಧರಿಸಿದೆ. ಶ್ರೀಲಂಕಾದಲ್ಲಿ ಇಂತಹ ವಾಹನಗಳಿಗೆ ಹೆಚ್ಚು ಬೇಡಿಕೆಯಿದ್ದು, ಶೀಘ್ರದಲ್ಲಿ ಆರ್ ಇ 60 ರಫ್ತು ಮಾಡುವ ಕುರಿತು ತೀರ್ಮಾನ ಕೈಗೊಳ್ಳಲಾಗುವುದೆಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಬಜಾಜ್ ಹೇಳಿದ್ದಾರೆ.

ಬಜಾಜ್ ಆರ್ಇ60 ಕಾರು ಕಳೆದ ತಿಂಗಳು ದೆಹಲಿಯಲ್ಲಿ ನಡೆದ ವಾಹನ ಪ್ರದರ್ಶನದಲ್ಲಿ ಅನಾವರಣಗೊಂಡಿತ್ತು. ಅದರಲ್ಲಿ ನಮ್ಮ ರಾಜ್ಯದ ಸಾರಿಗೆ ಸಚಿವ ಆರ್. ಅಶೋಕ್ ಕುಳಿತುಕೊಂಡು ಪೋಸ್ ನೀಡಿದ್ದರು. ಇದು ಟಾಟಾ ನ್ಯಾನೊಗೆ ಪೈಪೋಟಿ ನೀಡುವ ಸಣ್ಣಕಾರೆಂದು ಎಲ್ಲರೂ ಅಭಿಪ್ರಾಯಪಟ್ಟಿದ್ದರು.

ಆದರೆ ಕಂಪನಿಯು ಆರ್ ಇ 60ಯನ್ನು ಕಾರೆಂದು ಹೇಳಿಲ್ಲ. ಇದು ಕೇವಲ ನಾಲ್ಕು ಚಕ್ರದ ವಾಹನಷ್ಟೇ. ಇದು ಮೂರು ಚಕ್ರದ ರಿಕ್ಷಾದ ಬದಲಿಗೆ ಬಂದಿರುವ ನೂತನ ವಾಹನವೆಂದೂ ಕಂಪನಿ ಹೇಳಿತ್ತು. ಹೀಗಾಗಿ ಇದು ನಾಲ್ಕು ಚಕ್ರದ ರಿಕ್ಷಾವೆಂದು ವಿಶ್ಲೇಷಕರು ಟೀಕೆ ಮಾಡಿದ್ದರು.

ಆದರೂ ಭಾರತದಲ್ಲಿ ಬಿಡುಗಡೆಯಾಗುವ ಮುನ್ನ ಶ್ರೀಲಂಕಾದಲ್ಲಿ ಬಿಡುಗಡೆಗೊಳಿಸುವ ಔಚಿತ್ಯವೇನು? ಯಾಕೆಂದರೆ ಕಂಪನಿಯು ಶ್ರೀಲಂಕದಲ್ಲಿ ಅತ್ಯುತ್ತಮ ಮಾರಾಟ ನೆಟ್ ವರ್ಕ್ ಹೊಂದಿದೆ. ಶ್ರೀಲಂಕಾದಲ್ಲಿ ಇಂತಹ ಸಣ್ಣ ವಾಹನಗಳಿಗೆ ಅತ್ಯಧಿಕ ಬೇಡಿಕೆಯಿದೆ. ಕಂಪನಿಯು ಈಗಾಗಲೇ ಹತ್ತು ಸಾವಿರಕ್ಕಿಂತ ಹೆಚ್ಚು ರಿಕ್ಷಾಗಳನ್ನು ಶ್ರೀಲಂಕಾದಲ್ಲಿ ಮಾರಾಟ ಮಾಡಿದೆ. (ಕನ್ನಡ ಡ್ರೈವ್ ಸ್ಪಾರ್ಕ್)

Article Published On: Wednesday, February 22, 2012, 16:58 [IST]
English summary
Bajaj Auto is planning to begin commercial sales of its RE 60 four wheeler first in Sri Lanka instead of India. Reports say the company's MD Rajiv Bajaj is considering the option of exporting the RE 60 to Sri Lanka as he feels the market there is ideal for such a vehicle.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+