ಐಟಿ ಎಫೆಕ್ಟ್; ಬೆಂಗ್ಳೂರಲ್ಲಿ ವಾಹನಗಳ ದರ್ಬಾರ್

ಬೆಂಗಳೂರಿನಲ್ಲಿ ಐಟಿ ಉದ್ಯೋಗಗಳಲ್ಲಿ ಗಣನೀಯ ವರ್ಧನೆ ಕಂಡುಬಂದಿರುವಂತೆಯೇ ವಾಹನ ಸಾಂದ್ರತೆಯಲ್ಲೂ ಭಾರಿ ಏರಿಕೆ ದಾಖಲಿಸಿದೆ ಎಂದು ವರದಿಗಳು ತಿಳಿಸಿವೆ.

ದೇಶದ ಇತರ ನಗರಗಳಿಗೆ ಹೋಲಿಸಿದರೆ ಐಟಿ ನಗರಗಳಾದ ಬೆಂಗಳೂರು ಹಾಗೂ ಹೈದರಾಬಾದ್‌ಗಳಲ್ಲಿ ನೂತನ ವಾಹನಗಳ ರಿಜಿಸ್ಟ್ರೇಶನ್ ಪ್ರಕ್ರಿಯೆಯಲ್ಲಿ ಭಾರಿ ಹೆಚ್ಚಳ ಕಂಡುಬಂದಿದೆ. ಹಾಗಿದ್ದರೂ ವಾರ್ಷಿಕ ವಾಹನ ರಿಜಿಸ್ಟ್ರೇಶನ್ ಗಣತಿಯಲ್ಲಿ ದೆಹಲಿ ನಂಬರ್ ವನ್ ಸ್ಥಾನ ಕಾಯ್ದುಕೊಂಡಿದೆ.

ವರದಿಯ ಪ್ರಕಾರ ಐಟಿ ಉದ್ಯೋಗ ಬೆಂಗಳೂರು ಹಾಗೂ ಹೈದರಾಬಾದ್ ನಗರಗಳ ಖಾಸಗಿ ವಾಹನಗಳ ವರ್ಧನೆಯಲ್ಲಿ ನೇರ ಪರಿಣಾಮ ಬೀರಿದೆ. ಕಳೆದೆರಡು ವರ್ಷಗಳ ನೂತನ ವಾಹನಗಳ ರಿಜಿಸ್ಟ್ರೇಶನ್ ಪ್ರಕಾರ ಈ ಫಲಿತಾಂಶ ಹೊರಬಿದ್ದಿದೆ.

2011 ಹಾಗೂ ಪ್ರಸಕ್ತ ಸಾಲಿನ ನವೆಂಬರ್ ವರೆಗೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅತಿ ಹೆಚ್ಚು ವಾಹನ ದಾಖಲಾತಿ ನಡೆದಿದೆ. ದೆಹಲಿಯಲ್ಲಿ ಕಳೆದ ವರ್ಷ 4.76 ಲಕ್ಷ ಹಾಗೂ ಈ ವರ್ಷ ನವೆಂಬರ್ ವರೆಗೂ 3.99 ಲಕ್ಷ ವಾಹನಗಳ ದಾಖಲಾತಿ ನಡೆದಿವೆ.

ಮತ್ತೊಂದೆಡೆ ಬೆಂಗಳೂರಿನಲ್ಲಿ ಕಳೆದ ವರ್ಷ 2.72 ಲಕ್ಷ ವಾಹನ ದಾಖಲಾತಿ ಕಂಡುಬಂದಿದ್ದರೆ ಈ ಬಾರಿಯದು 3.28 ಲಕ್ಷಕ್ಕೆ ಏರಿಕೆಯಾಗಿದೆ. ಇದೇ ಪರಿಸ್ಥಿತಿ ಐಟಿ ಸಿಟಿ ಆದ ಹೈದಾಬಾದ್‌ನಲ್ಲೂ ಕಂಡುಬಂದಿದ್ದು, ಕಳೆದ ವರ್ಷಕ್ಕಿಂತಲೂ 14 ಸಾವಿರ ವಾಹನಗಳ ದಾಖಲಾತಿ ಹೆಚ್ಚಳಗೊಂಡು 46,163ಕ್ಕೆ ತಲುಪಿದೆ.

ಯುವಜನಾಂಗ ಉದ್ಯೋಗಿಗಳು ಐಟಿ ಕಂಪನಿಗಳಿಂದ ಹೆಚ್ಚಿನ ವೇತನ ಪಡೆಯುತ್ತಿರುವುದು ಇಂತಹದೊಂದು ಬೆಳವಣಿಗೆಗೆ ಕಾರಣವಾಗಿದೆ. ಮುಂದಿನೆರಡು ವರ್ಷಗಳ ವರೆಗೂ ಇದೇ ಪ್ರವೃತ್ತಿ ಮುಂದುವರಿಯುವ ಸಾಧ್ಯತೆಯಿದೆ.

ಅಂದ ಹಾಗೆ ವಾಹನಗಳಲ್ಲಿ ಉಂಟಾಗಿರುವ ಭಾರಿ ವರ್ಧನೆಯಿಂದಾಗಿ ಬೆಂಗಳೂರು ನಗರದಲ್ಲಿ ಭಾರಿ ವಾಹನ ದಟ್ಟಣೆ ಕಂಡುಬರುತ್ತಿದೆ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೊಂದೆಡೆ ವಾಹನ ವೃದ್ಧಿ (ದಾಖಲಾತಿ ಆಧಾರದಲ್ಲಿ) ಇತರ ಮೂರು ಮೆಟ್ರೋ ನಗರಗಳಾದ ಮುಂಬೈ, ಚೆನ್ನೈ ಹಾಗೂ ಕೊಲ್ಕತ್ತಾಗಳಲ್ಲಿ ಸ್ಥಿರವಾಗಿದೆ. ಉದಾಹರಣೆಗಾಗಿ ಚೆನ್ನೈನಲ್ಲಿ ಈ ವರ್ಷ 1.91 ಲಕ್ಷ ನೂತನ ದಾಖಲಾತಿ ಕಂಡುಬಂದಿದೆ. ಇದು ಕಳೆದ ವರ್ಷ 2.26 ಲಕ್ಷಗಳಾಗಿತ್ತು. ಅದೇ ರೀತಿ ಮುಂಬೈನಲ್ಲಿ ಈ ವರೆಗೆ 1.60 ಲಕ್ಷ ವಾಹನ ದಾಖಲಾತಿ ನಡೆದಿದ್ದು, ಕಳೆದ ಬಾರಿಯಿದು 2.27 ಲಕ್ಷ ಆಗಿತ್ತು.

ಚೆನ್ನೈ ಮೆಟ್ರೋ ರೈಲ್ ಅಧಿಕಾರಿಗಳ ಪ್ರಕಾರ, ನಗರದ ವಾಹನ ದಾಖಲಾತಿಯಲ್ಲಿ ಭಾರಿ ಕೊರತೆ ಕಂಡುಬರುತ್ತಿದ್ದು, ದೈನಂದಿನ 1000 ವಾಹನಗಳಿಗಷ್ಟೇ ದಾಖಲಾತಿ ನಡೆಯುತ್ತಿದೆ. ಈ ಪೈಕಿ ಶೇಕಡಾ 80ರಷ್ಟು ದ್ವಿಚಕ್ರ ವಾಹನಗಳಾಗಿವೆ.

More from DriveSpark

Article Published On: Monday, November 26, 2012, 12:39 [IST]
English summary
Creation of IT jobs in Bangalore and Hyderabad seems to have a direct impact on the growth of private vehicles in these two cities. Bangalore, in the past two years, has emerged as next only to Delhi in terms of annual vehicle registration while Hyderabad recorded a big increase in this category in the past two years.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+