ಮಳೆ ಮಳೆ ಎಲ್ಲೆಡೆ ಮಳೆ; ಬೆಂಗ್ಳೂರಿಗರಿಗೆ ಟ್ರಾಫಿಕ್ ಸಲಹೆ
ಬೆಂಗಳೂರಿನ ನಗರದ್ಯಾಂತ ಮಳೆ ಅಬ್ಬರ ಜೋರಾಗುತ್ತಿದ್ದು, ಒಂದೆರೆಡು ದಿನ ಮುಂದುವರಿಯುವ ಸಾಧ್ಯತೆಗಳಿವೆ. ಇದರಂತೆ ಬೆಂಗಳೂರು ಟ್ರಾಫಿಕ್ ಪೊಲೀಸ್, ಸಂಚಾರಿ ಮಾರ್ಗಸೂಚಿಯನ್ನು ಜಾರಿಗೊಳಿಸಿದೆ.
ಬೆಂಗಳೂರು ಟ್ರಾಫಿಕ್ ಪೊಲೀಸ್ ಫೇಸ್‌ಬುಕ್ ಅಧಿಕೃತ ಪೇಜ್‌ನಲ್ಲಿ ಟ್ರಾಫಿಕ್ ಗೈಡ್‌ಲೈನ್ಸ್ ಕಂಡುಬಂದಿದ್ದು, ಎಲ್ಲ ವಾಹನ ಚಾಲಕರು ಇದನ್ನು ಪಾಲಿಸುವಂತೆ ಸಲಹೆ ಮಾಡಲಾಗಿದೆ.
ನಗರದ ವಾಹನ ಚಾಲಕರು ಇದನೊಮ್ಮೆ ಗಮನಿಸಿ...
" ಬೆಂಗಳೂರಿನಲ್ಲಿ ಹಲವೆಡೆ ಮಳೆಯಾಗುತ್ತಿದ್ದು,ವಾಹನ ಸಂಚಾರ ನಿಧಾನವಾಗಿರುತ್ತದೆ. ದಯವಿಟ್ಟು ಮರದ ಕೆಳಗೆ ನಿಲ್ಲಬೇಡಿ, ನಿಮ್ಮ ವಾಹನವನ್ನು ಕಂಡ ಕಂಡಲ್ಲಿ ನಿಲ್ಲಿಸಿ ಮಳೆಯಿಂದ ರಕ್ಷಣೆ ಪಡೆಯಲು ಹೋಗಬೇಡಿ, ಸಂಚಾರ ನಿಯಮ ಪಾಲಿಸಿ ಸುರಕ್ಷಿತವಾಗಿ ಮನೆ ತಲುಪಿ ಹಾಗು ಉಳಿದವರಿಗೂ ಸುರಕ್ಷಿತವಾಗಿ ಮನೆ ತಲುಪಲು ಸಹಕರಿಸಿ"
ಇದರಂತೆ ಡ್ರೈವ್‌ಸ್ಪಾರ್ಕ್ ಕನ್ನಡ ತಂಡವು ಸಹ ಸುಗಮ ಸಂಚಾರಕ್ಕಾಗಿ ವಾಹನ ಚಾಲಕರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ. ಹವಾಮಾನ ವೈಪರೀತ್ಯ ಉಂಟಾದಾಗ ಸುರಕ್ಷಿತ ಡ್ರೈವಿಂಗ್‌ಗಾಗಿ ಸಂಚಾರಿ ಮಾರ್ಗ ಸೂಚಿಗಳನ್ನು ಪಾಲಿಸುವುದು ಅತಿ ಅಗತ್ಯವಾಗಿದೆ. ಹಾಗಾಗಿ ಮೇಲೆ ಸೂಚಿಸಿದಂತೆ ಬೆಂಗಳೂರು ಟ್ರಾಫಿಕ್ ನಿಯಮಗಳನ್ನು ತಪ್ಪದೇ ಪಾಲಿಸಿರಿ.


Click it and Unblock the Notifications









