ಬೆಂಗಳೂರು ಟ್ರಾಫಿಕ್ ಸಮಸ್ಯೆಗಳು: ಇಲ್ಲಿ ದೂರುಕೊಡಿ
ಇಲ್ಲಿ ಜೀಬ್ರಾ ಕ್ರಾಸಿಂಗ್ ಯಾಕಿಲ್ಲ, ಇಲ್ಲಿ ಸಿಗ್ನಲ್ ಬೇಕಲ್ವಾ? ನಮ್ಮ ರಸ್ತೆಗೆ ಟ್ರಾಫಿಕ್ ಪೊಲೀಸ್ ಬೇಕು? ಇಲ್ಲಿ ಪಾರ್ಕಿಂಗ್ ಮಾಡಲು ಅವಕಾಶ ನೀಡಬೇಡಿ, ಈ ಸ್ಥಳವನ್ನು ನೋ ಎಂಟ್ರಿ ಝೋನ್ ಮಾಡ್ಬೆಕು ಇತ್ಯಾದಿ ಸಲಹೆ, ಸೂಚನೆ, ದೂರುಗಳನ್ನು ನಿಮ್ಮ ಹತ್ತಿರದ ಸಂಚಾರ ಪೊಲೀಸ್ ಠಾಣೆಗೆ ಸಲ್ಲಿಸಬಹುದು.
ನಗರದ ಭಿನ್ನ ಜನರ, ವಿಭಿನ್ನ ಅಭಿಪ್ರಾಯಗಳನ್ನು ಸಂಗ್ರಹಿಸಲು ನಾಗರಿಕ ಸಂಚಾರ ವೇದಿಕೆ ಕಾರ್ಯಮದಡಿ ಈ ಅಭಿಯಾನವನ್ನು ಬೆಂಗಳೂರು ಟ್ರಾಫಿಕ್ ಪೊಲೀಸರು ಆಯೋಜಿಸಿದ್ದಾರೆ. ನಿಮ್ಮ ಪ್ರದೇಶದ ಟ್ರಾಫಿಕ್ ಸಂಬಂಧಿಸಿದ ದೂರು, ಸಲಹೆ, ಬೇಡಿಕೆ, ಸಮಸ್ಯೆ ಕುರಿತು ಚರ್ಚಿಸಿ ಬಗೆ ಹರಿಸಿಕೊಳ್ಳಬಹುದು. ಸಮಯ ಬೆಳಗ್ಗೆ 11.30 ರಿಂದ ಅಪರಾಹ್ನ 1.30ರವರೆಗೆ.
ನಾಗರಿಕರು, ನಾಗರಿಕ ಕ್ಷೇಮಾಭಿವೃದ್ಧಿ, ಸಂಘ ಸಂಸ್ಥೆಗಳು, ಖಾಸಗಿ ಸಂಸ್ಥೆಗಳು, ಸೇವಾ ಸಂಸ್ಥೆಗಳು ಮುಂತಾದವರು ತಮ್ಮ ಕ್ಷೇತ್ರದ ಟ್ರಾಫಿಕ್ ಇನ್ ಸ್ಪೆಕ್ಟರನ್ನು ಭೇಟಿ ಮಾಡಿ ತಮ್ಮ ಮನವಿ ಮತ್ತು ಬೇಡಿಕೆಗಳನ್ನು ಚರ್ಚಿಸಬಹುದೆಂದು ಬೆಂಗಳೂರು ಟ್ರಾಫಿಕ್ ಪೊಲೀಸ್ ಸುತ್ತೋಲೆ ತಿಳಿಸಿದೆ.
ನಗರದ ಸಂಚಾರಿ ಸಮಸ್ಯೆಗಳನ್ನು ಪರಿಹರಿಸಲು ನೀವು ಹತ್ತಿರದ ಟ್ರಾಫಿಕ್ ಸ್ಟೇಷನಿಗೆ ಹೋಗುವಿರೆಂಬ ನಿರೀಕ್ಷೆ ನಿಮ್ಮ ಕನ್ನಡ ಡ್ರೈವ್ ಸ್ಪಾರ್ಕ್ ಗಿದೆ.


Click it and Unblock the Notifications









