ಬೆಂಟ್ಲಿ ಜಿಟಿ ಸ್ಪೀಡ್: ಅತಿವೇಗದ ಕಾರಿಗೆ ದಾರಿಬಿಡಿ

ಬೆಂಟ್ಲಿ ಮೋಟರ್ಸ್ ಕಂಪನಿಯು ಕಾಂಟಿನೆಂಟಲ್ ಜಿಟಿ ಕಾರಿನ ನೂತನ ಆವೃತ್ತಿಯೊಂದನ್ನು ಅನಾವರಣ ಮಾಡಿದೆ. 2012 ಕಾಂಟಿನೆಂಟಲ್ ಜಿಟಿ ಸ್ಪೀಡ್ ಹೆಸರಿನ ನೂತನ ಆವೃತ್ತಿಯು ಕಂಪನಿಯು ಇಲ್ಲಿವರೆಗೆ ಉತ್ಪಾದಿಸಿರುವ ಕಾರುಗಳಲ್ಲೇ ಅತಿವೇಗದ ಕಾರೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ನೂತನ ಬೆಂಟ್ಲಿ ಕಾರಿನಲ್ಲಿ ಗಂಟೆಗೆ ಗರಿಷ್ಠ 329 ಕಿ.ಮೀ. ಅಥವಾ 205 ಮೈಲು ವೇಗದಲ್ಲಿ ಸಾಗಬಹುದಾಗಿದೆ. ಐಷಾರಾಮಿ ಮತ್ತು ಸ್ಪೋರ್ಟ್ಸ್ ಕಾರ್ಯಕ್ಷಮತೆಯನ್ನು ಬಯಸುವ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ನೂತನ ಕಾರು ಹೊರತಂದಿರುವುದಾಗಿ ಕಂಪನಿ ಹೇಳಿದೆ.

ಹಳೆಯ ಜಿಟಿ ಕಾರಿನ ಸ್ಪೋರ್ಟ್ ಆವೃತ್ತಿಯಾದ ಕಾಂಟಿನೆಂಟಲ್ ಜಿಟಿ ಸ್ಪೀಡ್ ಕಾರು ಟರ್ಬೊ ಚಾರ್ಜ್ಡ್ 6 ಲೀಟರಿನ ಎಂಜಿನ್ ಹೊಂದಿದೆ. ಇದು ಗಂಟೆಗೆ ಗರಿಷ್ಠ 616 ಅಶ್ವಶಕ್ತಿ ಮತ್ತು 800 ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ಇದರಲ್ಲಿ ಕೇವಲ 4.2 ಸೆಕೆಂಡಿನಲ್ಲಿ ಸೊನ್ನೆಯಿಂದ 100 ಕಿ.ಮೀ. ವೇಗ ಪಡೆಯಬಹುದು ಎಂದು ಕಂಪನಿ ಹೇಳಿದೆ.

ಬೆಂಟ್ಲಿಯ ನೂತನ ಕಾರಿನ ಡಬ್ಲ್ಯು12 ಎಂಜಿನ್ 8 ಸ್ಪೀಡಿನ ಝಡ್ಇ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿದೆ. ಕಣ್ ಮಿಟುಕಿಸುವ ಸಮಯದಲ್ಲಿ ಇದು ಗೇರ್ ಶಿಫ್ಟ್ ಮಾಡಿಕೊಳ್ಳುತ್ತದೆ. ಈ ಕಾರಿನ ಮೈಲೇಜ್ ಹೆಚ್ಚಿಸಲು ನೂತನ ಗೇರ್ ಬಾಕ್ಸ್ ನೆರವಾಗಲಿದೆ ಎಂದು ಕಂಪನಿ ಹೇಳಿದೆ. ಚಾಸೀಸ್, ಸಸ್ಪೆನ್ಷನ್ ಮತ್ತು ಸ್ಟಿಯರಿಂಗ್ ವೀಲ್ ಗಳನ್ನು ಕಂಪನಿಯು ಪರಿಷ್ಕರಿಸಿದ್ದು, ಇದರಿಂದ ಜಿಟಿ ಸ್ಪೀಡ್ ಕಾರಿನ ಕಾರ್ಯಕ್ಷಮತೆ ಹೆಚ್ಚಾಗಿದೆ.

2012 ಜಿಟಿ ಕಾಂಟಿನೆಂಟಲ್ ಜಿಟಿ ಸ್ಪೀಡ್ ಕಾರಿನ ದರ ಮಾಹಿತಿಯನ್ನು ಬೆಂಟ್ಲಿ ಮೋಟರ್ಸ್ ತಿಳಿಸಿಲ್ಲ.

More from DriveSpark

Article Published On: Wednesday, June 20, 2012, 16:00 [IST]
English summary
Bentley Unveils Its Fastest Continental GT Speed. The new 2012 Bentley Continental GT speed is aimed at Bentley enthusiasts who like the Bentley's luxury as well as sporty performance. The new Continental GT speed can reach a top speed of 329kmph or 205mph. This is an incredible top speed for a car that weighs close to two tonnes.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+