ಬೆಂಗ್ಳೂರು ಯುಬಿ ಸಿಟಿ ಮಾಲ್ನಲ್ಲಿ ಬೆಂಝ್ ಟ್ರೆಂಡ್ಜ್

ಮರ್ಸಿಡಿಸ್ ಬೆಂಝ್ ಇಂಡಿಯಾ ಕಂಪನಿಯು ಬೆಂಗಳೂರು ಯುಬಿ ಸಿಟಿ ಮಾಲ್ ನಲ್ಲಿ ನೂತನ ಟ್ರೆಂಡ್ಜ್ ಕಾನ್ಸೆಪ್ಟ್ ಸ್ಟೋರ್ ಉದ್ಘಾಟನೆ ಮಾಡಿದೆ. ಇತ್ತೀಚೆಗೆ ದೆಹಲಿ ವಾಹನ ಪ್ರದರ್ಶನದಲ್ಲಿ ಪ್ರದರ್ಶಿಸಿದ ಎಸ್ ಎಲ್ಎಸ್ ಎಎಂಜಿ ರೋಡ್ ಸ್ಟಾರ್ ಕಾರನ್ನು ಕೂಡ ಇಲ್ಲಿ ಪ್ರದರ್ಶಿಸಲಾಗಿದೆ. ಇಲ್ಲಿ ಟಿಟಿಎಂ ರೇಸಿಂಗ್ ಕಾರು ಕೂಡ ಇದ್ದು, ಕಣ್ತುಂಬಿಕೊಳ್ಳಬಹುದು.
ಈ ಟ್ರೆಂಡ್ಜ್ ಕಾನ್ಸೆಪ್ಟ್ ಸ್ಟೋರ್ ನಲ್ಲಿ ಎಎಂಜಿ ಫರ್ಮಾಮೆನ್ಸ್ ಡ್ರೈವಿಂಗ್ ಅಕಾಡಮಿಗೆ ಸೇರಲಿಚ್ಚಿಸುವರು ಹೆಸರು ನೋಂದಾಯಿಸಿಕೊಳ್ಳಲು ಕೂಡ ಅವಕಾಶವಿದೆ. "ಈಗ ಯುವಕರ ಬೇಡಿಕೆಗೆಳು ವಿಭಿನ್ನವಾಗಿರುತ್ತವೆ. ಅದಕ್ಕೆ ತಕ್ಕಂತೆ ಅವರಿಗೆ ವಿಭಿನ್ನ ಅನುಭವ ನೀಡುವ ಇಂತಹ ಅವಕಾಶಗಳನ್ನು ಕಂಪನಿ ನೀಡುತ್ತಿದೆ" ಎಂದು ಕಂಪನಿಯ ನಿರ್ದೇಶಕ ದೇಬಾಸಿಸ್ ಮಿತ್ರಾ ಹೇಳಿದ್ದಾರೆ.
ಪ್ರತಿ ತ್ರೈಮಾಸಿಕದಲ್ಲಿ ಎರಡು ದಿನಗಳ ಕಾಲ ಫರ್ಮಾಮೆನ್ಸ್ ಡ್ರೈವಿಂಗ್ ತರಬೇತಿ ನೀಡುತ್ತದೆ. ಈ ಎಎಂಜಿ ತರಬೇತಿಯನ್ನು ಕಂಪನಿಯು ಗ್ರೇಟರ್ ನೋಯ್ಡಾದ ಬುದ್ಧ್ ಇಂಟರ್ ನ್ಯಾಷನಲ್ ಸರ್ಕ್ಯುಟ್ ನಲ್ಲಿ ನೀಡುತ್ತದೆ.
ದೇಶದ ಪ್ರತಿಶೋರೂಂನಲ್ಲೂ ಸಿ63 ಎಎಂಜಿ ಪ್ರದರ್ಶಿಸುವುದು ಕಂಪನಿಯ ಮತ್ತೊಂದು ಕಾರ್ಯತಂತ್ರ. ಡೀಸೆಲ್ ಕಾರುಗಳಿಗೆ ಸರಕಾರ ವಿಧಿಸಿರುವ ಹೆಚ್ಚುವರಿ ತೆರಿಗೆ ಬೆಂಝ್ ನಂತಹ ಕಾರು ಕಂಪನಿಗಳಿಗೆ ಸಮಸ್ಯೆ ಉಂಟು ಮಾಡಿದೆ ಎಂದು ಕೂಡ ದೇಬಾಸಿಸ್ ಹೇಳಿದ್ದಾರೆ.
ರಸ್ತೆಗಿಳಿಯಲಿರುವ ಬೆಂಝ್ ಕಾರುಗಳು: ಮುಂದಿನ ದಿನಗಳಲ್ಲಿ ರಸ್ತೆಗಿಳಿಯಲಿರುವ ಕಾರುಗಳ ಕುರಿತು ಮಿತ್ರಾ ಮಾಹಿತಿ ನೀಡಿದ್ದಾರೆ. 2012ರ ಅಂತ್ಯದಲ್ಲಿ ಮರ್ಸಿಡಿಸ್ ಬೆಂಝ್ ಬಿ ಕ್ಲಾಸ್ ಕಾರುಗಳು ರಸ್ತೆಗಿಳಿಯಲಿವೆ. ಎ ಕ್ಲಾಸ್ ಕಾರುಗಳು 2013ರಲ್ಲಿ, 2014-15ರಲ್ಲಿ ನೂತನ ಸ್ಪೋರ್ಟ್ ಯುಟಿಲಿಟಿ ವೆಹಿಕಲುಗಳನ್ನು ಪರಿಚಯಿಸಲಿದ್ದೇವೆ" ಎಂದರು.


Click it and Unblock the Notifications








