ಬಿಎಂಡಬ್ಲ್ಯು 3 ಸೀರಿಸ್ ಕಾರುಗಳಿಗೆ 7 ಲಕ್ಷ ಡಿಸ್ಕೌಂಟ್
ಅದ್ದೂರಿ, ವಿಲಾಸಿ, ಲಗ್ಷುರಿ, ಐಷಾರಾಮಿ ಕಾರೊಂದನ್ನು ಖರೀದಿಸಲು ದುಬಾರಿ ದರದಿಂದಾಗಿ ಹಿಂದೇಟು ಹಾಕುವರಿಗಿದು ಸೂಕ್ತ ಸಮಯ. ಜರ್ಮನಿಯ ಕಾರು ತಯಾರಿಕಾ ಕಂಪನಿ ಬಿಎಂಡಬ್ಲ್ಯು, ಇದೀಗ 3 ಸೀರಿಸ್(ಇ90) ಕಾರಿಗೆ ಸುಮಾರು 7 ಲಕ್ಷ ರುಪಾಯಿವರೆಗೆ ದರ ವಿನಾಯಿತಿ ಮಾಡುತ್ತಿದೆ.
ಬಿಎಂಡಬ್ಲ್ಯು ಕಂಪನಿಯು ಹೊಸ 3 ಸೀರಿಸ್ ಸೆಡಾನ್ ಕಾರೊಂದನ್ನು ಪ್ರಸಕ್ತ ತಿಂಗಳ ಅಂತ್ಯದೊಳಗೆ ತರಲಿದೆ. ಇದೇ ಸಮಯಕ್ಕೆ ಹಳೆ ಮಾಡೆಲ್ ದಾಸ್ತಾನು ಖಾಲಿ ಮಾಡುವ ಉದ್ದೇಶದಿಂದ ಕಂಪನಿಯು ಭರ್ಜರಿ ಡಿಸ್ಕೌಂಟ್ ಪ್ರಕಟಿಸಿದೆ.
3 ಸೀರಿಸ್ ಕಾರುಗಳಲ್ಲಿ 320ಡಿ ಕಾರ್ಪೊರೆಟ್ ಅಡಿಷನ್ ಬೇಸ್ ಆವೃತ್ತಿಗೆ ಕಂಪನಿಯು ಸುಮಾರು 6 ಲಕ್ಷ ರುಪಾಯಿಯಷ್ಟು ದರ ವಿನಾಯಿತಿ ನೀಡಲಿದೆ. ಹೈಎಂಡ್ ಡೈನಾಮಿಕ್ ಆವೃತ್ತಿಗೆ ಸುಮಾರು 5 ಲಕ್ಷ ರುಪಾಯಿ ದರ ವಿನಾಯಿತಿ ಪ್ರಕಟಿಸಿದೆ. ಪೆಟ್ರೋಲ್ ಆವೃತ್ತಿಗೆ 7 ಲಕ್ಷ ರು.ವರೆಗೆ ದರ ವಿನಾಯಿತಿ ದೊರಕಲಿದೆ.
ಈ ಡಿಸ್ಕೌಂಟ್ ದರಗಳಿಂದಾಗಿ ಬಿಎಂಡಬ್ಲ್ಯು 3 ಸೀರಿಸ್ ಕಾರುಗಳ ಆರಂಭಿಕ ದರ 24 ಲಕ್ಷ ರು. ಆಗಿದೆ.


Click it and Unblock the Notifications









