ಆರು ದಿನಗಳಲ್ಲಿ ನೂರಾರು ಮಿನಿಕಾರುಗಳ ಬುಕ್ಕಿಂಗ್!!

"ಈಗಾಗಲೇ ನೂರಕ್ಕೂ ಹೆಚ್ಚು ಜನರು ಮಿನಿ ಬ್ರಾಂಡ್ ಕಾರುಗಳನ್ನು ಬುಕ್ಕಿಂಗ್ ಮಾಡಿದ್ದಾರೆ. ಈ ಕಾರಿನ ಡೆಲಿವರಿ ಏಪ್ರಿಲ್ ತಿಂಗಳ ನಂತರ ನಡೆಯಲಿದೆ" ಎಂದು ಬಿಎಂಡಬ್ಲ್ಯು ಇಂಡಿಯಾ ಅಧಿಕಾರಿಯೊಬ್ಬರು ಹೇಳಿದ್ದಾರೆ.
"ಕಂಪನಿಯು ಪ್ರಸಕ್ತ ವರ್ಷ ಸುಮಾರು 200 ಮಿನಿ ಕಾರುಗಳನ್ನು ಮಾರಾಟ ಮಾಡಲು ಉದ್ದೇಶಿಸಿದೆ. ಈ ಕಾರುಗಳನ್ನು ದೇಶಕ್ಕೆ ಆಮದು ಮಾಡಿಕೊಳ್ಳಲಾಗುವುದು. ಹಲವು ತಿಂಗಳ ಮುಂಗಡ ಬುಕ್ಕಿಂಗ್ ಗೆ ಅನುಗುಣವಾಗಿ ಗ್ರಾಹಕರಿಗೆ ಕಾರು ಪೂರೈಕೆ ಮಾಡಲಾಗುವುದು" ಎಂದು ಅವರು ಹೇಳಿದ್ದಾರೆ.
"ಕಳೆದ ಎರಡು ವರ್ಷಗಳಲ್ಲಿ ಹಲವು ಐಕಾನಿಕ್ ಬ್ರಾಂಡೆಡ್ ಕಾರುಗಳನ್ನು ಬಿಡುಗಡೆ ಮಾಡಲಾಗಿದೆ. ಆದರೆ ಎಲ್ಲವೂ ಯಶಸ್ವಿಯಾಗಿಲ್ಲ. ಅಂದರೆ ಸುಮಾರು 21 ಲಕ್ಷ ದರದ ಫೋಕ್ಸ್ ವ್ಯಾಗನ್ ಕೇವಲ 59 ಯುನಿಟ್ ಮಾರಾಟವಾಗಿದೆ. ಹದಿನಾರು ಲಕ್ಷ ರುಪಾಯಿಯ ಫಿಯೆಟ್ 500 ಕಾರು ಕೇವಲ ಒಂದು ಯುನಿಟ್ ಮಾರಾಟವಾಗಿತ್ತು.
ಬಿಎಂಡಬ್ಲ್ಯು ಕಂಪನಿಯು ಮಿನಿ ಬ್ರಾಂಡೆಡ್ ಕಾರುಗಳನ್ನು ದೇಶದಲ್ಲಿ ಉತ್ಪಾದಿಸುವುದಿಲ್ಲ. ಬದಲಾಗಿ ಸಿಬಿಯು ಯುನಿಟ್ ಮೂಲಕ ಆಮದು ಮಾಡಿಕೊಳ್ಳುತ್ತಿದೆ. ಈ ಕಾರಿನ ದರ ಸುಮಾರು 25 ಲಕ್ಷ ರುಪಾಯಿಯಿಂದ 37 ಲಕ್ಷ ರುಪಾಯಿ ಆಸುಪಾಸಿನಲ್ಲಿದೆ.


Click it and Unblock the Notifications








