ಬಿಎಂಡಬ್ಲ್ಯು ನೂತನ ಕಾರು ರಸ್ತೆಗೆ, ದರ 28 ಲಕ್ಷ ರುಪಾಯಿ

By Super

ಮುಂಬೈ, ಜು 27: ಆರನೇ ತಲೆಮಾರಿನ ನೂತನ ಬಿಎಂಡಬ್ಲ್ಯು 3 ಸೀರಿಸ್ ಕಾರನ್ನು ದೇಶದ ಕ್ರಿಕೆಟ್ ತಾರೆ ಸಚಿನ್ ತೆಂಡೂಲ್ಕರ್ ಅನಾವರಣ ಮಾಡಲಿದ್ದಾರೆ. ನೂತನ 3 ಸೀರಿಸ್ ದರ 28.90 ಲಕ್ಷ ರುಪಾಯಿಯಿಂದ 37.90 ಲಕ್ಷ ರುಪಾಯಿವರೆಗಿದೆ. ಕಂಪನಿಯು ನೂತನ ಕಾರನ್ನು ಚೆನ್ನೈ ಸಿಕೆಡಿ ಘಟಕದಲ್ಲಿ ಅಸೆಂಬಲ್ ಮಾಡಲಿದೆ. ಈ ತಿಂಗಳೇ ಡೆಲಿವರಿ ಮಾಡಲಿದೆ.

ಇದು ಕಂಪನಿಯು ಪ್ರಸಕ್ತ ವರ್ಷ ಪರಿಚಯಿಸಿರುವ ಪ್ರಮುಖ ಕಾರು. ಪ್ರಸಕ್ತ ವರ್ಷದ ಮೊದಲಾರ್ಧದಲ್ಲಿ ಕಂಪನಿಯ ವಾಹನ ಮಾರಾಟ ಆಶಾದಾಯಕವಾಗಿರಲಿಲ್ಲ. ಸಚಿನ್ ತೆಂಡೂಲ್ಕರ್ ಬ್ರಾಂಡ್ ಅಂಬಾಸಡರ್ ಆಗುವ ಮೂಲಕ ಕಂಪನಿಯ ದೆಸೆ ತಿರುಗುವುದೇ ಕಾದು ನೋಡಬೇಕಿದೆ. ಡಿ ಸೆಗ್ಮೆಂಟ್ ಸೆಡಾನ್ ಕಾರುಗಳಲ್ಲಿ 3 ಸರಣಿಯ ಕಾರುಗಳು ಅಲ್ಟಿಮೆಟ್ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ. "ಆರಾಮದಾಯಕ ಸವಾರಿಗೆ ಸೂಕ್ತವಾಗಿರುವ ಇದು ವಿಶಾಲ ಸ್ಥಳಾವಕಾಶವನ್ನೂ ಹೊಂದಿದೆ" ಎಂದು ಕಂಪನಿ ಹೇಳಿದೆ.

ನೂತನ ಬಿಎಂಡಬ್ಲ್ಯು 3 ಸೀರಿಸ್ ಕಾರು ಐದು ಆವೃತ್ತಿಗಳಲ್ಲಿ ದೊರಕಲಿದೆ. ಇದರಲ್ಲಿ ನಾಲ್ಕು ಆವೃತ್ತಿಗಳು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ದೊರಕಲಿದೆ. ಇದರಲ್ಲಿ 328ಐ ಸ್ಪೋರ್ಟ್ಸ್ ಲೈನ್ ಮಾತ್ರ ಪೆಟ್ರೋಲ್ ಆಯ್ಕೆಗಳಲ್ಲಿ ದೊರಕಲಿದೆ. ದೇಶದಲ್ಲಿ ಡೀಸೆಲ್ ಕಾರುಗಳಿಗೆ ಅತ್ಯಧಿಕ ಬೇಡಿಕೆಯಿರುವುದರಿಂದ ಕಂಪನಿಯು ಡೀಸೆಲ್ ಆವೃತ್ತಿಗಳಿಗೆ ಹೆಚ್ಚಿನ ಒತ್ತು ನೀಡಿದೆ.

ನೂತನ ಬಿಎಂಡಬ್ಲ್ಯು 3 ಸೀರಿಸ್ ದರ
ಬಿಎಂಡಬ್ಲ್ಯು 320ಡಿ ಕಾರಿನ ದರ 28.90 ಲಕ್ಷ ರುಪಾಯಿ
320ಡಿ ಡಿ ಸ್ಪೋರ್ಟ್ಸ್ ಲೈನ್ ಆವೃತ್ತಿ ದರ:31.50 ಲಕ್ಷ ರು.
320ಡಿ ಲಗ್ಷುರಿ ಲೈನ್ ದರ 31.50 ಲಕ್ಷ ರುಪಾಯಿ.
320ಡಿ ಲಗ್ಷುರಿ ಪ್ಲಸ್: 36.90 ಲಕ್ಷ ರು.
328ಐ ಸ್ಪೋರ್ಟ್ಸ್ ಲೈನ್ ದರ 37.90 ಲಕ್ಷ ರುಪಾಯಿ.

ಹೊಸ ಬಿಎಂಡಬ್ಲ್ಯು 3 ಸೀರಿಸ್ ಕಾರು ಸ್ಪೋರ್ಟ್ ಲೈನ್ ಮತ್ತು ಲಗ್ಷುರಿ ಲೈನ್ ಎಂಬ ಎರಡು ವಿನ್ಯಾಸಗಳಲ್ಲಿ ದೊರಕುತ್ತದೆ. ಇನ್ನಷ್ಟು ಮಾಹಿತಿಗಳನ್ನು ಮುಂಬೈನಲ್ಲಿರುವ ನಮ್ಮ ವರದಿಗಾರ "ಜೊಬೊ ಕುರುವಿಲ್ಲಾ" ಕಳುಹಿಸಿಕೊಡಲಿದ್ದಾರೆ. ನಿರೀಕ್ಷಿಸಿ. ಇದು ಕನ್ನಡ ಡ್ರೈವ್ ಸ್ಪಾರ್ಕಿನಲ್ಲಿ ಮಾತ್ರ

More from DriveSpark

Article Published On: Friday, July 27, 2012, 12:18 [IST]
English summary
BMW Launches New 3-Series At Rs.28.9 L. The new 3-series is priced between Rs.28.90 lakhs and Rs.37.90 lakhs. Stay tuned to Kannada.Drivespark.com as we will provide you live updates of the new BMW 3-Series launch event in Mumbai. BMW's new brand ambassador Sachin Tendulkar has arrived at the venue and will shortly unveil the new sedan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+