ಬಿಎಂಡಬ್ಲ್ಯು ಎಕ್ಸ್6 ಲಾಂಚ್; ದರ ಎಷ್ಟು ಗೊತ್ತೇ?

ವಿಶ್ವದ ಮುಂಚೂಣಿಯ ಕಾರು ತಯಾರಕ ಕಂಪನಿಯಾದ ಬಿಎಂಡಬ್ಲ್ಯು ಮತ್ತೊಂದು ಐಷಾರಾಮಿ ಕಾರನ್ನು ದೇಶದಲ್ಲಿ ಬಿಡುಗಡೆಗೊಳಿಸಿದೆ. ದರದ ಬಗ್ಗೆ ಹೆಚ್ಚು ಕ್ರೇಜ್ ಹೊಂದಿರುವ ಭಾರತೀಯ ಗ್ರಾಹಕರಿಗಾಗಿ ಆರಂಭದಲ್ಲೇ ಹೇಳಿಬಿಡುತ್ತೇವೆ ಈ ಐಷಾರಾಮಿ 2013 ಎಕ್ಸ್6 ಸ್ಪೋರ್ಟ್ಸ್ ಆಕ್ಟಿವಿಟಿ ಕೋಪ್ ಕಾರಿನ ಬೆಲೆ ಬರೋಬ್ಬರಿ 78.9 ಲಕ್ಷ ರುಪಾಯಿಗಳಾಗಿವೆ.

ಫರಿದಾಬಾದ್‌ನ ಶೋರೂಂನಲ್ಲಿ ಬಿಎಂಡಬ್ಲ್ಯು ಗ್ರೂಪ್ ಇಂಡಿಯಾ ಅಧ್ಯಕ್ಷ ಪಿಲಿಪ್ ವಾನ್ ಸಹ್ರ್ ನೂತನ ಕಾರನ್ನು ಅನಾವರಣಗೊಳಿಸಿದ್ದಾರೆ. ಬಿಎಂಡಬ್ಲ್ಯು ಎಕ್ಸ್6 ಎರಡು ವೆರಿಯಂಟ್‌ಗಳಲ್ಲಿ ಲಭ್ಯವಿರಲಿದೆ. ಡೀಸೆಲ್ ಎಕ್ಸ್‌ಡ್ರೈವ್‌40ಡಿ ಹಾಗೂ ಪೆಟ್ರೋಲ್ ಎಕ್ಸ್‌ಡ್ರೈವ್50ಐ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಎಂಟ್ರಿ ಲೆವೆಲ್ ಎಕ್ಸ್‌ಡ್ರೈವ್40ಡಿ 3 ಲೀಟರ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 306 ಹಾರ್ಸ್ ಪವರ್ ಉತ್ಪಾದಿಸಲಿದೆ. ಹಾಗೆಯೇ ಗರಿಷ್ಠ ಟರ್ಕ್ಯೂ 600 ಎನ್‌ಎಂ ನೀಡಲಿದೆ.

ಪವರ್ ಹಾಗೂ ಸ್ಪೀಡ್ ಉತ್ಸಾಹಿಗಳಿಗೆ ವಿಶೇಷವಾಗಿ ಎಕ್ಸ್‌ಡ್ರೈಮ್50ಐ ತಯಾರು ಮಾಡಲಾಗಿದೆ. ಬಿಎಂಡಬ್ಲ್ಯು ಎಕ್ಸ್‌ಡ್ರೈವ್50ಐ 4.4 ಲೀಟರ್ ವಿ8 ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಎಕ್ಸ್‌ಡ್ರೈವ್50ಐ ಪೆಟ್ರೋಲ್ ಎಂಜಿನ್ 600 ಎನ್‌ಎಂನಲ್ಲಿ 407 ಹಾರ್ಸ್ ಪವರ್ ಉತ್ಪಾದಿಸಲಿದೆ. ಅಲ್ಲದೆ ಟಾಪ್ ಎಂಡ್ ವೆರಿಯಂಟ್ ದರ 93.4 ಲಕ್ಷ ರುಪಾಯಿಗಳ ವರೆಗೂ ಬೆಲೆಬಾಳುವುದಾಗಿದೆ.

ನಿರ್ವಹಣೆ

ನಿರ್ವಹಣೆ

ಅತ್ಯಾಕರ್ಷಕ ತಂತ್ರಜ್ಞಾನ ಹೊಂದಿರುವ ಬಿಎಂಡಬ್ಲ್ಯು ಎಕ್ಸ್6ನ ಎಕ್ಸ್‌ಡ್ರೈವ್40ಡಿ ಕಾರು ಕೇವಲ 6.5 ಸೆಕೆಂಡುಗಳಲ್ಲಿ 100 ಕೀ. ಮೀ. ವೇಗತೆಯನ್ನು ಪಡೆದುಕೊಳ್ಳಲಿದ್ದು, ಗರಿಷ್ಠ ವೇಗ 236 ಕೀ. ಮೀ ಆಗಿದೆ.

ನಿರ್ವಹಣೆ

ನಿರ್ವಹಣೆ

ಅದೇ ರೀತಿ ಪೆಟ್ರೋಲ್ ನಿಯಂತ್ರಿತ ಎಕ್ಸ್‌ಡ್ರೈವ್50ಐ ಕಾರು 5.4 ಸೆಕೆಂಡುಗಳಲ್ಲಿ 0-100 ಕೀ. ಮೀ. ವೇಗತೆಯನ್ನು ಪಡೆದುಕೊಳ್ಳಲಿದೆ. ಇದರ ಗರಿಷ್ಠ ಸ್ಪೀಡ್ ಗಂಟೆಗೆ 240 ಕೀ. ಮೀ. ಆಗಿದೆ.

ಭಾರತದಲ್ಲಿ ಬಿಎಂಡಬ್ಲ್ಯು ಎಕ್ಸ್6 ಲಾಂಚ್

ನೂತನ ಬಿಎಂಡಬ್ಲ್ಯು ಎಕ್ಸ್6 ಆವೃತ್ತಿಯಲ್ಲಿ ಗಮನಾರ್ಹ ಬದಲಾವಣೆ ತರಲಾಗಿದ್ದು, ಹೊಸ ಕಿಡ್ನಿ ಗ್ರಿಲ್, ಪರಿಷ್ಕೃತ ಫಾಗ್ ಲ್ಯಾಂಪ್, ಹೊಸ ಎಲ್‌ಇಡಿ ಟೈಲ್‌ಲೈಟ್ಸ್, ಹೊಸ ವಿನ್ಯಾಸದ ಇಂಟಿರಿಯರ್, ಸಿಟ್ಟಿಂಗ್ ವ್ಯವಸ್ಥೆ, ಸ್ಪೋರ್ಟ್ಸ್ ಸೀಟ್ ಸಹಿತ ಹಲವು ಬದಲಾವಣೆಗಳನ್ನು ತರಲಾಗಿದೆ.

ಕಲರ್ ವೆರಿಯಂಟ್

ಕಲರ್ ವೆರಿಯಂಟ್

2013 ಬಿಎಂಡಬ್ಲ್ಯು ಎಕ್ಸ್6 ಒಟ್ಟು ಒಂಬತ್ತು ಕಲರ್ ವೆರಿಯಂಟ್‌ಗಳಲ್ಲಿ ಗ್ರಾಹಕರ ಕೈಸೇರಲಿದೆ. ಅವುಗಳೆಂದರೆ ಅಲ್ಪಿನ್ ವೈಟ್, ಬ್ಲ್ಯಾಕ್ ಸಪ್ಪೈರ್, ಡೀಪ್ ಬ್ಲ್ಯೂ ಸೀ, ಮರ್ರಕೇಶ್ ಬ್ರೌನ್, ಮಿಡ್‌ನೈಟ್ ಬ್ಲ್ಯೂ, ಸ್ಪೇಸ್ ಗ್ರೇ, ಓರಿಯಾನ್ ಸಿಲ್ವರ್, ಟೈಟಾನಿಯಂ ಸಿಲ್ವರ್ ಮತ್ತು ವೆರ್ಮಿಲಿಯನ್ ರೆಡ್.

ಭಾರತದಲ್ಲಿ ಬಿಎಂಡಬ್ಲ್ಯು ಎಕ್ಸ್6 ಲಾಂಚ್

2013 ಎಕ್ಸ್6 ರಾಷ್ಟ್ರ ರಾಜಧಾನಿ ನವದೆಹಲಿ ಸಮೀಪವಿರುವ ಬಿಎಂಡಬ್ಲ್ಯುವಿನ ದೇಶದ ಅತಿ ದೊಡ್ಡ ಶೋ ರೂಂ ಆದ ಫರಿದಾಬಾದ್‌ನಲ್ಲಿ ಲಾಂಚ್ ಮಾಡಲಾಗಿದೆ.

ಭಾರತದಲ್ಲಿ ಬಿಎಂಡಬ್ಲ್ಯು ಎಕ್ಸ್6 ಲಾಂಚ್

ಬಿಎಂಡಬ್ಲ್ಯು ಎಕ್ಸ್6 ಫೋಟೊ ಫೀಚರ್

ಭಾರತದಲ್ಲಿ ಬಿಎಂಡಬ್ಲ್ಯು ಎಕ್ಸ್6 ಲಾಂಚ್

ಬಿಎಂಡಬ್ಲ್ಯು ಎಕ್ಸ್6 ಫೋಟೊ ಫೀಚರ್

ಭಾರತದಲ್ಲಿ ಬಿಎಂಡಬ್ಲ್ಯು ಎಕ್ಸ್6 ಲಾಂಚ್

ಬಿಎಂಡಬ್ಲ್ಯು ಎಕ್ಸ್6 ಫೋಟೊ ಫೀಚರ್

ಭಾರತದಲ್ಲಿ ಬಿಎಂಡಬ್ಲ್ಯು ಎಕ್ಸ್6 ಲಾಂಚ್

ಬಿಎಂಡಬ್ಲ್ಯು ಎಕ್ಸ್6 ಫೋಟೊ ಫೀಚರ್

ಭಾರತದಲ್ಲಿ ಬಿಎಂಡಬ್ಲ್ಯು ಎಕ್ಸ್6 ಲಾಂಚ್

ಬಿಎಂಡಬ್ಲ್ಯು ಎಕ್ಸ್6 ಫೋಟೊ ಫೀಚರ್

ಭಾರತದಲ್ಲಿ ಬಿಎಂಡಬ್ಲ್ಯು ಎಕ್ಸ್6 ಲಾಂಚ್

ಬಿಎಂಡಬ್ಲ್ಯು ಎಕ್ಸ್6 ಫೋಟೊ ಫೀಚರ್

Article Published On: Thursday, November 22, 2012, 14:39 [IST]
English summary
BMW has launched yet another new car in India in the form of the new 2013 X6 Sports Activity Coupe. The new 2013 BMW X6 is priced at Rs.78.9 lakhs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+