ಕರಾವಳಿ ನಾಡು ಮಂಗ್ಳೂರಿಗೂ ಕಾಲಿಟ್ಟ ಬಿಎಂಡಬ್ಲ್ಯು
ಕರಾವಳಿ ನಾಡೆಂದು ಪ್ರಸಿದ್ಧಿ ಪಡೆದಿರುವ ಮಂಗಳೂರಿಗೂ ವಿಶ್ವದ ಐಷಾರಾಮಿ ಕಾರು ತಯಾರಕ ಕಂಪನಿಯಾದ ಬಿಎಂಡಬ್ಲ್ಯು ಕಾಲಿಟ್ಟಿದೆ. ಬಿಎಂಡಬ್ಲ್ಯು ಇಂಡಿಯಾದ ನೂತನ ಡೀಲರ್‌ಶಿಪ್ ನವನೀತ್ ಮೋಟಾರ್ಸ್ ಮಂಗಳೂರಿನಲ್ಲಿ ಆರಂಭಿಸಲಾಗಿದ್ದು, ಕನ್ನಡಿಗರೆಲ್ಲರು ಸಂತೋಷಪಡುವಂತಾಗಿದೆ.
ಮಂಗಳೂರಿನ ಪಡೀಲ್‌ನಲ್ಲಿರುವ ಕಣ್ಣೂರು ವಿಲೇಜ್‌ನ ಸರ್ವೆ ನಂಬರ್ 48 ಎಂಬಲ್ಲಿ ನವನೀತ್ ಮೋಟಾರ್ಸ್ ಡೀಲರ್‌ಶಿಪ್ ಆರಂಭಿಸಲಾಗಿದೆ. ನವನೀತ್ ಗ್ರೂಪ್‌ನ ಮುಖ್ಯಸ್ಥ ಹಾಗೂ ನಿರ್ವಾಹಕ ನಿರ್ದೇಶಕ ನವನೀತ್ ಕಚಲಿಯಾ ಆಗಿದ್ದಾರೆ.
ಬಿಎಂಡಬ್ಲ್ಯು ಮಂಗಳೂರು ಶೋ ರೂಂನಲ್ಲಿ ಅತಿ ವಿಸ್ತಾರವಾದ ಸ್ಥಳಾವಕಾಶ ಕಲ್ಪಿಸಲಾಗಿದ್ದು 27000 ಸ್ಕೇರ್ ಫೀಟ್ ಹೊಂದಿದೆ. ಮಾರಾಟ ಸರ್ವಿಸ್ ಘಟಕದ ಜತೆ ಎಲ್ಲ ರೀತಿಯ ಸುಸಜ್ಜಿತ ಸೌಲಭ್ಯಗಳನ್ನು ಒದಗಿಸಲಾಗಿದೆ.
ಸಾಂಪ್ರದಾಯಿಕ ಬಿಎಂಡಬ್ಲ್ಯು ಜತೆ ನಗರ ಸ್ಟ್ರೀಟ್ ಪ್ರದರ್ಶನಕ್ಕೆ ವಿನ್ಯಾಸಕ್ಕೆ ಹೆಚ್ಚಿನ ಮಹತ್ವ ಕೊಡಲಾಗಿದೆ. ದಕ್ಷಿಣ ಭಾರತದಲ್ಲಿ ತ್ವರಿತ ಗತಿಯಲ್ಲಿ ಬೆಳೆದು ಬರುತ್ತಿರುವ ನಗರವಾಗಿರುವುದರಿಂದ ಮಂಗಳೂರನ್ನು ಬಿಎಂಡಬ್ಲ್ಯು ಗುರಿಯಾರಿಗಿಸಿದೆ.
ಈ ಮೂಲಕ ದೇಶದ ಲಗ್ಷುರಿ ಕಾರು ಸೆಗ್ಮಂಟ್‌ನಲ್ಲಿ ತನ್ನ ಅಧಿಪತ್ಯವನ್ನು ಬಿಎಂಡಬ್ಲ್ಯು ಮುಂದುವರಿಸಿದೆ. ಅಲ್ಲದೆ 2014ರ ವೇಳೆಗೆ ದೇಶದ 50 ಪ್ರಮುಖ ನಗರ ಪ್ರದೇಶಗಳಲ್ಲಿ ಶೋ ರೂಂ ತೆರೆಯುವ ಗುರಿ ಹೊಂದಿದೆ.

ಬಿಎಂಡಬ್ಲ್ಯು ನೂತನ ಡೀಲರ್‌ಶಿಪ್ ನವನೀತ್ ಮೋಟಾರ್ಸ್ ಮಂಗಳೂರಿನಲ್ಲಿ ಆರಂಭಿಸಲಾಗಿದೆ.

ಬಿಎಂಡಬ್ಲ್ಯು ಕಾನ್ಸೆಪ್ಟ್ ಕಾರು

ಬಿಎಂಡಬ್ಲ್ಯು ಕಾನ್ಸೆಪ್ಟ್ ಕಾರು

ಬಿಎಂಡಬ್ಲ್ಯು ಕಾನ್ಸೆಪ್ಟ್ ಕಾರು

ಬಿಎಂಡಬ್ಲ್ಯು ಎಕ್ಸ್ 6


Click it and Unblock the Notifications