ಸ್ಟೀರಿಂಗ್ ಪ್ರಾಬ್ಲಂ; 250,000 ಬಿಎಂಡಬ್ಲ್ಯು ವಾಪಾಸ್
ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ (ಎಸ್‌ಯುವಿ) ಎಕ್ಸ್5 ಕಾರಿನಲ್ಲಿ ಸ್ಟೀರಿಂಗ್ ಸಮಸ್ಯೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ಜಾಗತಿಕವಾಗಿ 250,000ದಷ್ಟು ಕಾರುಗಳನ್ನು ಹಿಂಪಡೆಯಲು ವಿಶ್ವದ ಪ್ರತಿಷ್ಠಿತ ಪ್ರೀಮಿಯಂ ಕಾರು ಕಂಪನಿಯಾದ ಬಿಎಂಡಬ್ಲ್ಯು ನಿರ್ಧರಿಸಿದೆ.
2009ರಿಂದ 2012ರ ವರೆಗೆ ನಿರ್ಮಾಣವಾಗಿದ್ದ ಎಕ್ಸ್5 ಎಕ್ಸ್‌ಡ್ರೈವ್ 35ಡಿ ಡೀಸೆಲ್ ಎಂಜಿನ್ ಕಾರುಗಳನ್ನು ಜಾಗತಿಕವಾಗಿ ವಾಪಾಸ್ ಪಡೆಯಲಾಗುತ್ತಿದ್ದು, ಕಂಪನಿಗೆ ಭಾರಿ ನಷ್ಟ ಅಂದಾಜಿಸಲಾಗುತ್ತಿದೆ.
ಬಿಎಂಡಬ್ಲ್ಯು ಎಕ್ಸ್5 ಪವರ್ ಸ್ಟ್ರೀರಿಂಗ್ ಸಮಸ್ಯೆಗೆ ಕಾರಣವಾಗಿದೆ. ಈ ಎಸ್‌ಯುವಿ ಕಾರು ಮ್ಯಾನುವಲ್ ಸ್ಟೀರಿಂಗ್ ಹೊಂದಿದ್ದರೂ ಕಡಿಮೆ ವೇಗದಲ್ಲಿ ತಿರುಗುವಾಗ ಸಮಸ್ಯೆ ಸೃಷ್ಟಿಯಾಗುತ್ತಿದೆ. ಹಾಗಿದ್ದರೂ ಇದುವರೆಗೆ ಯಾವುದೇ ಅಪಾಯಕಾರಿ ಘಟನೆಗಳು ವರದಿಯಾಗದಿದ್ದರೂ ಪ್ರಮುಖವಾಗಿಯೂ ಅಮೆರಿಕ ಹಾಗೂ ಕೆನಡಾಗಳಿಂದ ದೂರುಗಳು ದಾಖಲಾಗಿವೆ. ಈ ಹಿನ್ನಲೆಯಲ್ಲಿ ಮುನ್ನಚ್ಚೆರಿಕಾ ಕ್ರಮವಾಗಿ ಕಾರುಗಳನ್ನು ವಾಪಾಸ್ ಪಡೆಯಲಾಗುತ್ತಿದೆ.
ಅಮೆರಿಕದಿಂದ 29,800 ಹಾಗೂ ಕೆನಡಾದಿಂದ 5,500 ಎಕ್ಸ್5 ಕಾರುಗಳನ್ನು ವಾಪಾಸ್ ಪಡೆಯಲಾಗುತ್ತಿದೆ. ಹಾಗೆಯೇ ಜಾಗತಿಕವಾಗಿಯೂ ಇತರ ಕಾರುಗಳನ್ನು ಹಿಂಪಡೆಯಲಾಗುತ್ತಿದೆ.

ಬಿಎಂಡಬ್ಲ್ಯು ಎಕ್ಸ್5
ಜಾಗತಿಕವಾಗಿ 2 ವರೆ ಲಕ್ಷದಷ್ಟು ಬಿಎಂಡಬ್ಲ್ಯು ಎಕ್ಸ್5 ಕಾರುಗಳ ಹಿಂಪಡೆತ

Click it and Unblock the Notifications