3 ಲಕ್ಷ ಯುನಿಟ್ ಎಕ್ಸ್1 ಕಾರು ಮಾರಿದ ಬಿಎಂಡಬ್ಲ್ಯು
ಎಕ್ಸ್ ಸರಣಿ ಕಾರುಗಳಲ್ಲಿ ಬಿಎಂಡಬ್ಲ್ಯು ಕಂಪನಿಯ ಎಕ್ಸ್1 ಆವೃತ್ತಿಯು ಅತ್ಯಧಿಕ ಸಂಖ್ಯೆಯಲ್ಲಿ ಮಾರಾಟಗೊಳ್ಳುವ ಕಾರಾಗಿದೆ. ರಸ್ತೆಗಿಳಿದ ಎರಡೂವರೆ ವರ್ಷಗಳಲ್ಲಿ ಒಟ್ಟಾರೆ ಜಾಗತಿಕ ಮಾರುಕಟ್ಟೆಯಲ್ಲಿ ಎಕ್ಸ್1 ಮಾರಾಟ 3 ಲಕ್ಷ ಯುನಿಟಿಗೆ ತಲುಪಿದೆ. ಐದು ಸೀಟಿನ ಕ್ರಾಸೊವರ್ ಕಾರನ್ನು ಕಂಪನಿ ದೇಶದಲ್ಲೂ ಎಂಟ್ರಿ ಲೆವೆಲ್ ಕಾರಾಗಿ ಮಾರಾಟ ಮಾಡುತ್ತಿದೆ. ಇಲ್ಲೂ ಎಕ್ಸ್1 ಕಾರಿಗೆ ಬಹುಬೇಡಿಕೆಯಿದೆ.
ಬಿಎಂಡಬ್ಲ್ಯು ಬೇಸ್ ಪೆಟ್ರೋಲ್ ಎಕ್ಸ್1 ಆವೃತ್ತಿಗೆ 22.5 ಲಕ್ಷ ರುಪಾಯಿ ಇದೆ. ಇಲ್ಲಿವರೆಗೆ ಈ ದರದಲ್ಲಿ, ಈ ಸೆಗ್ಮೆಂಟಿನಲ್ಲಿ ಬೇರಾವುದೇ ಕಾರುಗಳು ಪೈಪೋಟಿ ನೀಡಲು ಇರಲಿಲ್ಲವೆನ್ನುವುದು ಕೂಡ ಇದರ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ. ಇತ್ತೀಚೆಗೆ ರಸ್ತೆಗಿಳಿದ ಆಡಿ ಕ್ಯೂ3 ಮತ್ತು ಮರ್ಸಿಡಿಸ್ ಬೆಂಝ್ ಬಿ ಕ್ಲಾಸ್ ಪ್ರೀಮಿಯಂ ಹ್ಯಾಚ್ ಬ್ಯಾಕ್ ಗಳು ಇದಕ್ಕೆ ನೇರ ಪೈಪೋಟಿ ನೀಡಲು ಆಗಮಿಸಿವೆ.
ಎಕ್ಸ್1 ಪರಿಷ್ಕೃತ ಆವೃತ್ತಿ ಆಗಮಿಸಿರುವುದು ತನ್ನ ಪ್ರತಿಸ್ಪರ್ಧಿ ಕಾರು ಕಂಪನಿಗಳ ಎದುರು ದೃಢವಾಗಿ ನಿಲ್ಲಲು ಬಿಎಂಡಬ್ಲ್ಯು ಕಂಪನಿಗೆ ನೆರವಾಗಿದೆ. 2009ರಲ್ಲಿ ರಸ್ತೆಗಿಳಿದ ನಂತರ ಎಕ್ಸ್1 ಕಾರು ಹಲವು ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಯನ್ನು ತನ್ನದಾಗಿಸಿದಕೊಂಡಿದೆ.
ಕ್ರಾಸೊವರ್ ವಿಭಾಗದಲ್ಲಿ ವರ್ಷದ ಆಫ್ ರೋಡ್ ಪ್ರಶಸ್ತಿ, ವರ್ಷದ ಅತ್ಯುತ್ತಮ ಹೊಸ ಕಾರು ಸೇರಿದಂತೆ ಹಲವಾರು ಪ್ರಮುಖ ಪ್ರಶಸ್ತಿಗಳನ್ನು ಎಕ್ಸ್1 ಪಡೆದುಕೊಂಡಿದೆ. ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳ ರಸ್ತೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎಕ್ಸ್1 ಆವೃತ್ತಿಗಳು ಕಾಣಸಿಗುತ್ತವೆ.
ಅತ್ಯುತ್ತಮ ಉತ್ಪನ್ನ ಗುಣಮಟ್ಟ ವಿಭಾಗದಲ್ಲಿ ಎಕ್ಸ್1 ಕಾರಿಗೆ ಅಗ್ರಸ್ಥಾನವಿದೆ. ಯುರೂ ಎನ್ ಕ್ಯಾಪ್ ಕ್ರಾಷ್ ಟೆಸ್ಟ್(ಓದಿ: ಕ್ರಾಷ್ ಟೆಸ್ಟ್ ಎಂದರೇನು?) ವಿಭಾಗದಲ್ಲಿ ಇದಕ್ಕೆ 5 ಸ್ಟಾರ್ ರೇಟಿಂಗ್ ದೊರಕಿದೆ. ಸುರಕ್ಷತೆ ಮತ್ತು ದಕ್ಷತೆ ವಿಷಯದಲ್ಲೂ ಎಕ್ಸ್1 ಕಾರು ಹೆಚ್ಚು ಜನರ ಮೆಚ್ಚುಗೆಗೆ ಪಾತ್ರವಾಗಿದೆ.


Click it and Unblock the Notifications









