ನಟ ಅಕ್ಷಯ ಕುಮಾರ್ ಹೋಂಡಾ ಬ್ರಾಂಡ್ ಅಂಬಾಸಡರ್

ಹೋಂಡಾ ಮೋಟರ್‌ಸೈಕಲ್ ಆಂಡ್ ಸ್ಕೂಟರ್ ಇಂಡಿಯಾ ಕಂಪನಿಯು ಬಾಲಿವುಡ್ ನಟ ಅಕ್ಷಯ್ ಕುಮಾರ್‌ರನ್ನು ಕಂಪನಿಯ ರಾಯಭಾರಿಯಾಗಿ ನೇಮಕ ಮಾಡಿಕೊಂಡಿದೆ. ದೇಶದ ಮಾರುಕಟ್ಟೆಯ ದ್ಚಿಚಕ್ರ ವಾಹನ ವಿಭಾಗಕ್ಕೆ ಜಪಾನಿನ ದ್ವಿಚಕ್ರವಾಹನ ಬ್ರಾಂಡ್ ಪ್ರಪ್ರಥಮ ಬಾರಿಗೆ ಬ್ರಾಂಡ್ ಅಂಬಾಸಡರನ್ನು ನೇಮಕ ಮಾಡಿದೆ.

ಹೋಂಡಾ ಕಂಪನಿಯು ಅಕ್ಷಯ ಕುಮಾರ್‌ ಜೊತೆ ಐದು ವರ್ಷದ ಒಪ್ಪಂದಕ್ಕೆ ಸುಮಾರು 50 ಕೋಟಿ ರುಪಾಯಿ ಸಂಭಾವನೆ ನೀಡಲಾಗಿದೆಯೆಂಬ ವದಂತಿಗಳಿವೆ. ಅವರು ಕಂಪನಿಯ ನೂತನ ಡ್ರೀಮ್ ಯುಗ ಬೈಕಿನ ಪ್ರಚಾರ ಪ್ರಕ್ರಿಯೆಯೊಂದಿಗೆ ತನ್ನ ಅಂಬಾಸಡರ್ ಕೆಲಸ ಆರಂಭಿಸಿದ್ದಾರೆ.

ಕಂಪನಿಯು ಬೃಹತ್ ಮೊತ್ತದ ಬ್ರಾಂಡ್ ಅಭಿಯಾನವನ್ನೂ ಆರಂಭಿಸುವ ಸೂಚನೆ ದೊರಕಿದೆ. ಈ ಮೂಲಕ ತನ್ನ ಮಾಜಿ ಪಾಲುದಾರ ಹೀರೊ ಮೊಟೊಕಾರ್ಪ್ ಕಂಪನಿಗೆ ಪೈಪೋಟಿ ನೀಡಲು ಕಂಪನಿ ನಿರ್ಧರಿಸಿದೆ. ಇತ್ತೀಚೆಗೆ ಸುಜುಕಿ ಮೋಟರ್‌ಸೈಕಲ್ ಇಂಡಿಯಾ ಕಂಪನಿಯು ಸಲ್ಮಾನ್ ಖಾನ್‌ರನ್ನು ಬ್ರಾಂಡ್ ಅಂಬಾಸಡರ್ ಆಗಿ ನೇಮಕಮಾಡಿತ್ತು.

ಇವೆರಡೂ ಕಂಪನಿಗಳು ಅತಿರಥ ಮಹಾರಥ ನಟರನ್ನು ನೇಮಕ ಮಾಡಿಕೊಳ್ಳುವ ಮೂಲಕ ದೇಶದ ಅತ್ಯಧಿಕ ಮಾರಾಟದ ಮಾಸ್ ಬೈಕ್ ಮಾರುಕಟ್ಟೆಯ ಪಾಲನ್ನು ಕಸಿದುಕೊಳ್ಳಲು ಯೋಜಿಸಿವೆ. ಈ ಇಬ್ಬರು ನಟರು ಕೇವಲ ನಗರದಲ್ಲಿ ಮಾತ್ರವಲ್ಲದೇ ಗ್ರಾಮೀಣ ಜನತೆಗೂ ಚಿರಪರಿಚಿತ.

ವಾಹನ ಮಾರುಕಟ್ಟೆಯು ನಟ ಅಥವಾ ಕ್ರಿಕೆಟ್ ತಾರೆಗಳನ್ನು ಬ್ರಾಂಡ್ ಅಂಬಾಸಡರ್ ಆಗಿ ನೇಮಕ ಮಾಡಿಕೊಳ್ಳುವ ಟ್ರೆಂಡ್ ಇಂದು ನಿನ್ನೆಯದಲ್ಲ. ಅಮೀರ್ ಖಾನ್ ಮಹೀಂದ್ರ ಕಂಪನಿಗೆ, ಯಮಹಾ ಕಂಪನಿಗೆ ಜಾನ್ ಅಬ್ರಾಹಂ ಬ್ರಾಂಡ್ ರಾಯಭಾರಿಗಳಾಗಿದ್ದಾರೆ.

ಮಹೇಂದ್ರ ಸಿಂಗ್ ಧೋನಿಯನ್ನು ನೇಮಕ ಮಾಡಿಕೊಳ್ಳುವ ಮುನ್ನ ಟಿವಿಎಸ್ ಮೋಟರ್ ಕಂಪನಿಯ ವಿಕ್ಟರ್ ಕಮ್ಯೂಟರ್ ಬೈಕಿಗೆ ಕ್ರಿಕೆಟ್ ತಾರೆ ಸಚಿನ್ ತೆಂಡೂಲ್ಕರ್ ರಾಯಭಾರಿಯಾಗಿದ್ದರು. ಧೋನಿ ಸ್ಟಾರ್ ಸಿಟಿ ಬೈಕಿಗೂ ರಾಯಭಾರಿ. ಸ್ಟಾರ್ ಸ್ಪೋರ್ಟ್ ಬೈಕಿಗೆ ವಿರಾಟ್ ಕೋಹ್ಲಿಯನ್ನು ಟಿವಿಎಸ್ ನೇಮಕಮಾಡಿಕೊಂಡಿದೆ.

More from DriveSpark

Article Published On: Wednesday, May 16, 2012, 10:28 [IST]
English summary
Bollywood actor Akshay Kumar new brand Ambassador for Honda motorcycles and scooters India. Honda recently launched Dream Yuga Commuter Bike.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+