ಬಜೆಟ್ ಭೀತಿ: ಕಾರು ಖರೀದಿಗೆ ನೂಕುನುಗ್ಗಲು

ಜನವರಿ ಕಳೆದು ಫೆಬ್ರವರಿ ತಲುಪುತ್ತಿದ್ದಂತೆ ದೇಶದ ವಾಹನ ಮಾರಾಟ ಗರಿಗೆದರಿದೆ. 2012-13ನೇ ಸಾಲಿನ ಬಜೆಟ್ ಭೀತಿಯಲ್ಲಿ ಹೆಚ್ಚಿನ ಜನರು ಕಾರು ಖರೀದಿ ಯೋಜನೆಯನ್ನು ತ್ವರಿತಗೊಳಿಸಿದ್ದಾರೆ. ಪ್ರಸಕ್ತ ಬಜೆಟಿನಲ್ಲಿ ತೆರಿಗೆ ಹೆಚ್ಚಳ ಭೀತಿಗೆ ಸಿಲುಕಿ ಜನರೆಲ್ಲ ಫೆಬ್ರವರಿಯಲ್ಲೇ ಕಾರು ಖರೀದಿಗೆ ಮನಸ್ಸು ಮಾಡಿರುವುದರಿಂದ ಕಳೆದ ತಿಂಗಳ ಒಟ್ಟಾರೆ ಕಾರು ಮಾರಾಟ ಶೇಕಡ 13ರಷ್ಟು ಏರಿಕೆ ಕಂಡಿದೆ.

ಫೆಬ್ರವರಿ 2012ರಲ್ಲಿ ದೇಶದಲ್ಲಿ ಒಟ್ಟು 2,11,402 ಕಾರುಗಳು ಮಾರಾಟವಾಗಿವೆ. ಕಳೆದ ವರ್ಷದ ಫೆಬ್ರವರಿ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಇದು ಶೇಕಡ 13.11ರಷ್ಟು ಹೆಚ್ಚಾಗಿದೆ. ಬಜೆಟ್ ಹತ್ತಿರದಲ್ಲಿರುವುದು ಮತ್ತು ಡೀಸೆಲ್ ಕಾರುಗಳಿಗೆ ತೆರಿಗೆ ಹೆಚ್ಚಳವಾಗುವ ನಿರೀಕ್ಷೆಯಲ್ಲಿ ಕಾರು ಮಾರಾಟ ಹೆಚ್ಚಾಗಿದೆ ಎಂದು ದೇಶದ ವಾಹನ ಕಂಪನಿಗಳ ಒಕ್ಕೂಟ ಸ್ಯಾಮ್(ಎಸ್ಐಎಎಂ) ವರದಿಯಲ್ಲಿ ಹೇಳಿದೆ.

"ಬಜೆಟಿನಲ್ಲಿ ಸರಕಾರ ಅಬಕಾರಿ ಸುಂಕವನ್ನು ಶೇಕಡ 2ರಷ್ಟು ಏರಿಕೆ ಮಾಡುವ ನಿರೀಕ್ಷೆಯಿದೆ. ಇದರಿಂದಾಗಿ ಕಾರು ದರಗಳು ಸಹಜವಾಗಿಯೇ ಏರಿಕೆ ಕಾಣಲಿದೆ. ಹೀಗಾಗಿ ಫೆಬ್ರವರಿಯಲ್ಲಿ ಹೆಚ್ಚು ಜನರು ವಾಹನ ಖರೀದಿಗೆ ಮನಸ್ಸು ಮಾಡಿದ್ದಾರೆ" ಎಂದು ಸ್ಯಾಮ್ ಪ್ರಧಾನ ನಿರ್ದೇಶಕರಾದ ವಿಷ್ಣು ಮಾಥುರ್ ಹೇಳಿದ್ದಾರೆ.

"ಇದರೊಂದಿಗೆ ಡೀಸೆಲ್ ಕಾರುಗಳಿಗೆ ಹೆಚ್ಚುವರಿ ಸುಂಕ ವಿಧಿಸುವ ಮುನ್ಸೂಚನೆ ಸರಕಾರದ ಕಡೆಯಿಂದ ಸಿಕ್ಕಿದೆ. ಇದರಿಂದ ಡೀಸೆಲ್ ಕಾರುಗಳು 60 ಸಾವಿರ ರುಪಾಯಿಯಿಂದ 1 ಲಕ್ಷ ರು.ವರೆಗೆ ದುಬಾರಿಯಾಗುವ ನಿರೀಕ್ಷೆಯಿದೆ. ಹೀಗಾಗಿ ಗ್ರಾಹಕರು ಮುಂಜಾಗ್ರತೆಯಿಂದ ಡೀಸೆಲ್ ಕಾರುಗಳನ್ನು ಖರೀದಿಸಿಬಿಟ್ಟಿದ್ದಾರೆ. ಇದು ಸಹ ಫೆಬ್ರವರಿ ಮಾರಾಟ ಹೆಚ್ಚಳಕ್ಕೆ ಕಾರಣ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕಳೆದ ತಿಂಗಳು ಮಾರುತಿ ಸುಜುಕಿ 94,118 ಕಾರುಗಳನ್ನು ಮಾರಾಟ ಮಾಡಿದ್ದು, ಕಳೆದ ವರ್ಷದ ಫೆಬ್ರವರಿಗಿಂತ ಶೇಕಡ 7.13ರಷ್ಟು ಪ್ರಗತಿ ಕಂಡಿದೆ. ದೇಶದ ಎರಡನೇ ಬೃಹತ್ ಕಾರು ಕಂಪನಿ ಹ್ಯುಂಡೈ ಮೋಟರ್ಸ್ 36,658 ಯುನಿಟ್ ಕಾರು ಮಾರಾಟ ಮಾಡಿದ್ದು, ಶೇಕಡ 12.78ರಷ್ಟು ಏರಿಕೆ ದಾಖಲಿಸಿದೆ. ಮೂರನೇ ಬೃಹತ್ ಕಂಪನಿ ಟಾಟಾ ಮೋಟರ್ಸ್ ಫೆಬ್ರವರಿ ಮಾರಾಟ 28,236 ಯುನಿಟ್ ತಲುಪಿದ್ದು, ಕಳೆದ ವರ್ಷದ ಇದೇ ತಿಂಗಳಿಗಿಂತ ಶೇಕಡ 5.46ರಷ್ಟು ಏರಿಕೆ ದಾಖಲಿಸಿದೆ. (ಕನ್ನಡ ಡ್ರೈವ್ ಸ್ಪಾರ್ಕ್)

More from DriveSpark

Article Published On: Tuesday, March 13, 2012, 9:06 [IST]
English summary
The auto industry which was slowly picking up speed in January after a very slow 2011 has suddenly picked up speed thanks to the forthcoming budget for 2012-13. Several car buyers fearing a steep increase in taxes on cars decided to buy new cars in February helping the industry grow by a massive 13 per cent in February 2012.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+