ದೇಶಿ ಕಾರು ಕಂಪನಿಗಳಿಗೆ ಕಳೆದ ವರ್ಷ ಶನಿದೆಸೆ!

Car Sales in 2011
ಕಳೆದ ವರ್ಷ ದೇಶದ ಕಾರು ಕಂಪನಿಗಳಿಗೆ ಅಷ್ಟೇನೂ ಒಳ್ಳೆಯ ವರ್ಷವಾಗಿರಲಿಲ್ಲ. 2011ರಲ್ಲಿ ದೇಶದ ಒಟ್ಟಾರೆ ಕಾರು ಮಾರಾಟ ಕೇವಲ ಶೇಕಡ 4.3ರಷ್ಟು ಏರಿಕೆ ಕಂಡಿದೆ ಎಂದು ದೇಶದ ವಾಹನ ತಯಾರಿಕ ಕಂಪನಿಗಳ ಒಕ್ಕೂಟ(ಸ್ಯಾಮ್) ವರದಿ ಹೇಳಿದೆ.

ಇಂಧನ ದರ ಹೆಚ್ಚಳ, ಬ್ಯಾಂಕ್ ಬಡ್ಡಿದರ ಹೆಚ್ಚಳ ಮುಂತಾದ ಕಾರಣಗಳಿಂದ ಕಾರು ಖರೀದಿ ಕಡಿಮೆಯಾಗಿತ್ತು. ಕಳೆದ ವರ್ಷ ಕೇವಲ 19.5 ಲಕ್ಷ ಕಾರು ಮಾರಾಟವಾಗಿದೆ. ಇದಕ್ಕೂ ಹಿಂದಿನ ವರ್ಷ 18.7 ಲಕ್ಷ ಕಾರು ಮಾರಾಟವಾಗಿದ್ದವು.

ಇದರಿಂದ ಪ್ರಸಕ್ತ ಆರ್ಥಿಕ ವರ್ಷದ ಕಾರು ಮಾರಾಟ ಮುನ್ನೋಟವನ್ನು ಶೇಕಡ 2ರಷ್ಟು ಕಡಿಮೆ ಮಾಡಲಾಗಿದೆ. ಈ ಮಾರ್ಚ್ ಅಂತ್ಯಕ್ಕೆ ಒಟ್ಟು ಕಾರು ಮಾರಾಟ ಶೇಕಡ 2-4ರಷ್ಟು ಪ್ರಗತಿ ಕಾಣುವ ನಿರೀಕ್ಷೆಯನ್ನು ಸ್ಯಾಮ್ ವ್ಯಕ್ತಪಡಿಸಿತ್ತು.

ಈ ಸಮಯದಲ್ಲಿ ವಿದೇಶಿ ಕಂಪನಿಗಳ ಕಾರು ಮಾರಾಟ ಇಳಿಕೆ ಕಂಡಿತ್ತು. ದೇಶದಲ್ಲಿ ಹ್ಯುಂಡೈ, ಫೋಕ್ಸ್ ವ್ಯಾಗನ್, ಫೋರ್ಡ್ ಮೋಟರ್ ಮತ್ತು ಟೊಯೊಟಾ ಕಂಪನಿಗಳು ಗಮನಾರ್ಹವಾಗಿ ಹೂಡಿಕೆ ಮಾಡಿವೆ.

More from DriveSpark

Article Published On: Monday, January 16, 2012, 15:11 [IST]
English summary
India car sales growth slowed to just 4.3%, compared previous 12 months, according to the Society of Indian Automobile Manufacturers(SIAM).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+