ರೋಬೋ ಬಂದ್ಮೇಳೆ ನಮ್ ಕೆಲಸಕ್ಕೆ ಇಲ್ಲವಾಗಿದೆ ಖಾತ್ರಿ!!

ಕಾರು ಕಂಪನಿಗಳೊಳಗೆ ಯಂತ್ರಮಾನವರ ಸಂಖ್ಯೆ ಹೆಚ್ಚಾಗುತ್ತಿದೆ. ಕಾರ್ಮಿಕರ ಅವಶ್ಯಕತೆ ಕಡಿಮೆಯಾಗುತ್ತಿದೆ. ಮಾರುತಿ ಸುಜುಕಿ, ಹೋಂಡಾ, ಹ್ಯುಂಡೈ ಸೇರಿದಂತೆ ಹೆಚ್ಚಿನ ಕಾರು ಕಂಪನಿಗಳು ರೋಬೋ ಬಳಕೆ ಹೆಚ್ಚಿಸುತ್ತಿವೆ. ಬಿಡಿಭಾಗ ತಯಾರಿಕಾ ಕಂಪನಿಗಳು ಕೂಡ ಯಂತ್ರಮಾನವರನ್ನು ಹೆಚ್ಚಿಸುತ್ತಿವೆ.
ಹ್ಯುಂಡೈನ ಘಟಕವೊಂದರಲ್ಲೇ ಸುಮಾರು 300 ರೋಬೋಟ್ ಗಳು ಕೆಲಸ ಮಾಡುತ್ತಿವೆ. ಈ ಘಟಕದಲ್ಲಿ ಮಾನವ ಮತ್ತು ಯಂತ್ರಮಾನವ ಜೊತೆಯಾಗಿ ನಿಮಿಷಕ್ಕೆ ಒಂದರಂತೆ ಕಾರು ಉತ್ಪಾದಿಸುತ್ತಾರೆ.
ಚೆನ್ನೈನಿಂದ ಚಕನ್ ಘಟಕದವರೆಗೆ, ಗುರುಗಾಂವ್ ನಿಂದ ಸನಂದ್ ಘಟಕದವರೆಗೆ ಎಲ್ಲೆಲ್ಲೂ ರೋಬೋ ಕಾರುಬಾರು ಜೋರಾಗಿದೆ. ಸೈಲೆಂಟಾಗಿ ಕಾರ್ಮಿಕರ ಸ್ಥಾನಗಳನ್ನು ಈ ರೋಬೋಗಳು ಆಕ್ರಮಿಸಿಕೊಳ್ಳುತ್ತಿವೆ.
ಮಾರುತಿ ಸುಜುಕಿಯ ಮಾನೆಸರ್ ಘಟಕದಲ್ಲೂ ರೋಬೋಟ್ ಗಳು ಹೆಚ್ಚಾಗುತ್ತಿವೆ. ಫಿಗೊ ಸಣ್ಣಕಾರಿನ ಬೇಡಿಕೆ ಹೆಚ್ಚಾದ ಹಿನ್ನಲೆಯಲ್ಲಿ ಸುಮಾರು 90 ರೋಬೊಗಳನ್ನು ಸಣ್ಣಕಾರು ಉತ್ಪಾದನೆಗೆ ಫೋರ್ಡ್ ಬಳಸಿಕೊಳ್ಳುತ್ತಿದೆ. ಆದರೆ ಇಲ್ಲಿವರೆಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ರೋಬೋಗಳು ವಾಹನ ಫ್ಯಾಕ್ಟರಿ ಪ್ರವೇಶಿಸಿಲ್ಲ.
ಆದರೆ ಒಬ್ಬ ಕಾರ್ಮಿಕ ಸುಮಾರು 10-15 ರೋಬೊಗಳೊಂದಿಗೆ ಅಪರೇಟ್ ಮಾಡಬೇಕು. ಪ್ರತಿಕಾರು ಉತ್ಪಾದನೆಯಲ್ಲಿ ಕಾರು ಕಂಪನಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸುಮಾರು 5 ಜನರಿಗೆ ಕೆಲಸ ಕೊಡುತ್ತಿದೆ. ಮುಂದಿನ ದಿನಗಳಲ್ಲಿ ವಾಹನ ಕಂಪನಿಗಳಲ್ಲಿ ಯಂತ್ರಮಾನವರಿಗೆ ಹೆಚ್ಚು ಉದ್ಯೋಗಾವಕಾಶವಿರುವುದರಲ್ಲಿ ಸಂಶಯವಿಲ್ಲ.


Click it and Unblock the Notifications








