ದಂಪತಿಗಳಿಗೆ ಮಲಗಲು ಸೂಕ್ತವಾಗಿರೋ ಕಾರುಗಳು
ಸಿಟ್ರೊನ್ ಟ್ಯೂಬಿಕ್: 2011ರ ಸಿಟ್ರೊನ್ ಟ್ಯೂಬಿಕ್ ಐಷಾರಾಮಿ ಕಾರು. ಇದರ ನಡುವಿನ ಮತ್ತು ಹಿಂಭಾಗದ ಸೀಟನ್ನು ಫೋಲ್ಡ್ ಮಾಡಿ ಬೆಡ್‌ನಂತೆ ಬಳಸಿಕೊಳ್ಳಬಹುದು. ಹೀಗಾಗಿ ಈ ಕಾರನ್ನು ಮನೆಯಾಗಿ ಬಳಸಿಕೊಳ್ಳಬಹುದು. ಸದ್ಯ ಈ ಕಾರು ಕಾನ್ಸೆಪ್ಟ್ ಹಂತದಲ್ಲೇ ಇದೆ.
ಆಸ್ಟಿನ್ ಮ್ಯಾಕ್ಸಿ: ಇದು ಕುಟುಂಬ ಸವಾರಿಗೆ ಸೂಕ್ತವಾಗಿರುವ ಸಲೂನ್ ಕಾರು ಕೂಡ ಹೌದು. ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವ ಸ್ಕೂಲ್ ಬಸ್ ಹೌದು. ಈ ಕಾರಲ್ಲೂ ಆರಾಮವಾಗಿ ನಿದ್ರಿಸಬಹುದಾಗಿದೆ. ಈ ಕಾರಿನಲ್ಲಿ ಇಬ್ಬರು ಹಾಯಾಗಿ ನಿದ್ರಿಸಬಹುದು.
ರೆನೊ 16: ಆಸ್ಟಿನ್ ಮ್ಯಾಕ್ಸಿ ತರಹ ರೆನೊ 16 ಕಾರು ಕೂಡ ಬಹುಉಪಯೋಗಿ. ಈ ಕಾರಿನ ಸೀಟನ್ನು ಡಬಲ್ ಬೆಡ್ ಆಗಿ ಬಳಸಬಹುದು.
ಝುನಾಪ್ ಜನಾಸ್: ಜನಾಸ್ ಕಾರನ್ನು ಝನಾಪ್ ಕಂಪನಿಯು 1957ರಲ್ಲಿ ಅಭಿವೃದ್ಧಿಪಡಿಸಿತ್ತು. ಇದು ವಿಚ್ಛೇದಿತ ದಂಪತಿಗಳಿಗೆ ಸೂಕ್ತವಾದ ಕಾರು ಎಂದು ಹೇಳಬಹುದು. ಯಾಕೆಂದರೆ ಈ ಕಾರಿನ ಸೀಟನ್ನು ಎರಡು ಬೆಡ್ ಆಗಿ ಮಾಡಬಹುದು. ಆದರೆ ಈ ಬೆಡ್‌ಗಳು ಪ್ರತ್ಯೇಕವಾಗಿರುತ್ತವೆ.
ಫೋಕ್ಸ್‌ವ್ಯಾಗನ್ ಕ್ಯಾಲಿಫೋರ್ನಿಯಾ: ಇದು ಏಳು ಸೀಟಿನ ಮಲ್ಟಿಪರ್ಪೊಸ್ ವೆಹಿಕಲ್. ಇದರ ಸೀಟು ಕೂಡ ನಿದ್ದೆ ಮಾಡುವ ಬೆಡ್ ಆಗುತ್ತದೆ. ಹಿಂಭಾಗದ ಸೀಟನ್ನು ಆರಾಮದಾಯಕ ಬೆಡ್ ಆಗಿ ಬಳಸಬಹುದು. ಕಾರಿನ ಟಾಪ್ ಮೇಲಿರುವ ವಿಶೇಷ ಮನೆಯೊಳಗೆ ಮತ್ತೊಂದು ಡಬಲ್ ಬೆಡ್ ಇರುವುದು ಈ ಕಾರಿನ ವಿಶೇಷ. (ಕನ್ನಡ ಡ್ರೈವ್‌ಸ್ಪಾರ್ಕ್)


Click it and Unblock the Notifications









