ಬಾಡಿಗೆ ಕಾರು ಕಂಪನಿಯಿಂದ 2 ಸಾವಿರ ಕೋಟಿ ರು. ಹೂಡಿಕೆ
ಮುಂದಿನ ಮೂರು ವರ್ಷಗಳ ವಹಿವಾಟಿಗಾಗಿ ಮತ್ತು ಸುಮಾರು 23,500 ಕಾರು ಖರೀದಿಗಾಗಿ ಸುಮಾರು 2 ಸಾವಿರ ಕೋಟಿ ರುಪಾಯಿ ಹೂಡಿಕೆ ಮಾಡಲು ದೇಶದ ಪ್ರಮುಖ ಬಾಡಿಗೆ ಕಾರು ಕಂಪನಿ ಕಾರ್ ಝೋನ್ ರೆಂಟ್ ಕಂಪನಿ ನಿರ್ಧರಿಸಿದೆ.
ಕಂಪನಿಯು ಮುಂದಿನ ಮೂರು ವರ್ಷಗಳಲ್ಲಿ 1,800 ಕೋಟಿ ರುಪಾಯಿಯಿಂದ 2 ಸಾವಿರ ಕೋಟಿ ರು.ವರೆಗೆ ಹೂಡಿಕೆ ಮಾಡಲು ನಿರ್ಧರಿಸಿದ್ದೇವೆ ಎಂದು Carzonrent (ಇಂಡಿಯಾ) ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾದ ರಾಜೀವ್ ಕೆ ವಿಜ್ ಹೇಳಿದ್ದಾರೆ.
ಕಂಪನಿಯು ಈಗ ದೇಶದ 13 ನಗರಗಳಲ್ಲಿ ತನ್ನ ವಹಿವಾಟು ಹೊಂದಿದೆ. ಇಲ್ಲಿವರೆಗೆ ಕಂಪನಿಯು ಸುಮಾರು 400 ಕೋಟಿ ರುಪಾಯಿ ಹೂಡಿಕೆ ಮಾಡಿದ್ದು, 6,500 ಕಾರುಗಳನ್ನು ಬಾಡಿಗೆಗೆ ಬಿಟ್ಟಿದೆ. ಮುಂದಿನ ಮೂರು ವರ್ಷಗಳಲ್ಲಿ ಈ ಸಂಖ್ಯೆಯನ್ನು 30 ಸಾವಿರ ಕಾರುಗಳಿಗೆ ತಲುಪಿಸುವ ಯೋಜನೆಯನ್ನು ರಾಜೀವ್ ವ್ಯಕ್ತಪಡಿಸಿದ್ದಾರೆ. ( ಕನ್ನಡ ಡ್ರೈವ್ ಸ್ಪಾರ್ಕ್ )


Click it and Unblock the Notifications









