ಕಾರು ಚೆಸ್: ಚೀನಾದಲ್ಲಿ ವಿನೂತನ ಕಾರು ಚದುರಂಗ
ಚೆಸ್ ಆಡಲು ಕಾಯಿಗಳು ಬೇಕು. ಸಾಂಪ್ರಾದಾಯಿಕ ಚದುರಂಗದ ಕಾಯಿಗಳ ಬದಲಾಗಿ ಆ ಸ್ಥಾನದಲ್ಲಿ ಕಾರುಗಳನ್ನು ನಿಲ್ಲಿಸಿ ಆಡಿದರೆ ಹೇಗಿರುತ್ತೆ? ಚೀನಾದಲ್ಲಿ ಇತ್ತೀಚೆಗೆ ನಡೆದ ವಿನೂತನ ಚದುರಂಗ ಆಟದಲ್ಲಿ ರಾಜ, ರಾಣಿ, ಒಂಟೆ, ಕುದುರೆ, ಪದಾತಿ ಕಾಯಿಗಳ ಸ್ಥಾನಗಳಲ್ಲಿ ಕಾರುಗಳು ನಿಂತು ಚೆಸ್ ಆಡಿದವು.
ಚೀನಾದ ಚೆಂಗ್ಡು ಸಿಟಿಯಲ್ಲಿ ಎರಡನೇ ಚೀನಾ ಕಾರು ಚೆಸ್ ಗೇಮ್ಸ್ ಭಾನುವಾರ ನಡೆಯಿತು. 72 x 48 ಮೀಟರ್ ಚೆಸ್ ಅಂಗಣದಲ್ಲಿ 32 ಕಾರುಗಳ ನಡುವೆ ಈ ಚದರಂಗ ಆಟ ನಡೆಯಿತು. ಆಟಗಾರರ ನಿರ್ದೇಶನದಂತೆ ಕಾರುಗಳನ್ನು ಮುನ್ನಡೆಸಲಾಗುತ್ತಿತ್ತು.
ಇಬ್ಬರ ನಡುವೆ ಆಡುವ ಚೆಸ್ ಸಾರ್ವಜನಿಕರು ವೀಕ್ಷಿಸಬೇಕಾದರೆ ದೊಡ್ಡದಾದ ಪ್ರೊಜೆಕ್ಟರ್ ಪರದೆ ಹಾಕಿ ತೋರಿಸುವುದು ಸಾಮಾನ್ಯ. ಆದರೆ ಇಲ್ಲಿ ಚೆಸ್ ಆಟವನ್ನು ಮೈದಾನದಲ್ಲಿ ಕಾರುಗಳ ಮೂಲಕ ತೋರಿಸಿದ್ದು ವಿಶೇಷವಾಗಿತ್ತು.
ಚದುರಂಗ ಬುದ್ದಿವಂತರ ಆಟ. ಇಲ್ಲಿ ಮುಂದಾಲೋಚನೆ, ಬುದ್ದಿವಂತಿಕೆ, ಚಾಣಾಕ್ಷ್ಯತನ ಮುಖ್ಯ. ಚೆಸ್ ಇಬ್ಬರ ನಡುವೆ ನಡೆಯುವ ಯುದ್ಧದ ಆಟ. ಅಲ್ಲಿ ಇಬ್ಬರೂ ಆಟಗಾರರಲ್ಲೂ ತಲಾ ಎರಡೆರಡು ರಾಜ, ರಾಣಿ, ಆನೆ, ಕುದುರೆ, ಒಂಟೆ ಮತ್ತು ಎಂಟೆಂಟು ಪದಾತಿ ಅಥವಾ ಕಾಲಾಳುಗಳಿರುತ್ತವೆ.
ಚೀನಾದ ಕಾರು ಚೆಸ್ ಆಟಗಾರರಿಬ್ಬರು ಸಾಂಪ್ರಾದಾಯಿಕ ಚೆಸ್‌ಬೋರ್ಡ್‌ನಲ್ಲೇ ಆಡುತ್ತಿದ್ದರು. ಅವರು ಕಾಯಿಗಳನ್ನು ಮುನ್ನಡೆಸಿದಂತೆ ಆ ದೊಡ್ಡ ರಸ್ತೆಯಲ್ಲಿ 68 ಚೌಕಗಳ ನಡುವೆ ಕಾಯಿಗಳ ನಡೆಗಳಿಗೆ ತಕ್ಕಂತೆ ಕಾರುಗಳನ್ನು ಮುನ್ನಡೆಸಲಾಗುತ್ತಿತ್ತು.
ರಾಜರುಗಳ ದಿರಿಸು ಧರಿಸಿದ ಕ್ಷು ಯೆಂಚುನ್ ಮತ್ತು ಜಿಯಾಂಗ್ ಚುವಾನ್ ಚೆಸ್ ಮಾಸ್ಟರ್ಗಳ ನಡುವೆ ಈ ಪಂದ್ಯ ನಡೆಯಿತು. ಕೊನೆಗೆ ಆಟ ಡ್ರಾದಲ್ಲಿ ಸಮಾಪ್ತಿಯಾಯಿತು. (ಕನ್ನಡ ಡ್ರೈವ್‌ಸ್ಪಾರ್ಕ್)


Click it and Unblock the Notifications









