ದೇಶದ ರಸ್ತೆಗೆ ಮೇಡ್ ಇನ್ ಚೈನಾ ಎಲೆಕ್ಟ್ರಿಕ್ ರಿಕ್ಷಾ

ರೊಮೆಯಿ ಎಲೆಕ್ಟ್ರಿಕ್ ವೆಹಿಕಲ್ಸ್ ಎಂಬ ಶಾಂಘೈ ಮೂಲದ ಕಂಪನಿಯೊಂದು ತನ್ನ ಎಲೆಕ್ಟ್ರಿಕ್ ತ್ರಿಚಕ್ರವಾಹನ(ರಿಕ್ಷಾ ಎನ್ನಬಹುದು)ವನ್ನು ಭಾರತಕ್ಕೆ ಪರಿಚಯಿಸಲು ಯೋಜಿಸಿದೆ. ಕಂಪನಿಯ ಮೊದಲ ಟಾರ್ಗೆಟ್ ದೇವರ ನಾಡು ಕೇರಳ!
ಯಾವುದೇ ಎಲೆಕ್ಟ್ರಿಕ್ ಪಾಯಿಂಟ್ ಮೂಲಕ ನೂತನ ಎಲೆಕ್ಟ್ರಿಕ್ ತ್ರಿಚಕ್ರವಾಹನವನ್ನು ಚಾರ್ಜ್ ಮಾಡಬಹುದು. ಈಗಾಗಲೇ ಕಂಪನಿಯು ಈ ರಿಕ್ಷಾವನ್ನು ಕೇರಳದಲ್ಲಿ ಟೆಸ್ಟ್ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಪೆಟ್ರೋಲ್ ಮತ್ತು ಎಲ್ ಪಿಜಿ ರಿಕ್ಷಾಗಳ ಸ್ಥಾನವನ್ನು ನೂತನ ಎಲೆಕ್ಟ್ರಿಕ್ ರಿಕ್ಷಾಗಳು ಅಲಂಕರಿಸುವ ನಿರೀಕ್ಷೆಯಿದೆ.
ಮೇಡ್ ಇನ್ ಚೀನಾ ರಿಕ್ಷಾದಿಂದ ಪ್ರಮುಖ ಲಾಭವೆಂದರೆ ಅದರ ದರ ಕಡಿಮೆ. ಇದರ ದರ ಸುಮಾರು 40-50 ಸಾವಿರ ರುಪಾಯಿ ಆಸುಪಾಸಿನಲ್ಲಿರಲಿದೆ. ನೂತನ ಟ್ರಿಸೈಕಲ್ ರಿಕ್ಷಾದ ಬದಲಿಯೆಂದು ರೊಮೆಯಿ ಕಂಪನಿ ಹೇಳಿಲ್ಲ. (ಕನ್ನಡ ಡ್ರೈವ್ ಸ್ಪಾರ್ಕ್)


Click it and Unblock the Notifications








