ಹೆಚ್ಚುವರಿ ಸುಂಕ: ಮಾರುತಿ ಸುಜುಕಿ ಡೋಂಟ್ ವರಿ

ಪ್ರಸಕ್ತ ಬಜೆಟ್ ನಂತರ ಡೀಸೆಲ್ ಕಾರುಗಳು ದುಬಾರಿಯಾಗುವ ನಿರೀಕ್ಷೆಯಿದೆ. ಯಾಕೆಂದ್ರೆ ಈ ಬಜೆಟ್ ನಲ್ಲಿ ಡೀಸೆಲ್ ಕಾರುಗಳಿಗೆ ಕೇಂದ್ರ ಸರಕಾರವು ಹೆಚ್ಚುವರಿ ತೆರಿಗೆ ವಿಧಿಸುವುದು ನಿಚ್ಚಳವಾಗಿದೆ. ಆದ್ರೆ ಹೆಚ್ಚುವರಿ ತೆರಿಗೆ ಕುರಿತು ಮಾರುತಿ ಸುಜುಕಿಗೆ ವರಿ ಮಾಡಬೇಕಾದ ಅಗತ್ಯವೇ ಇಲ್ಲವಂತೆ!

ಎಲ್ಲಾ ಕಾರುಕಂಪನಿಗಳು ತಲೆಬಿಸಿಯಲ್ಲಿರುವಾಗ ಮಾರುತಿ ಸುಜುಕಿ ನಿರುಮ್ಮಳವಾಗಿರಬಹುದು. ಯಾಕೆಂದ್ರೆ ಹೆಚ್ಚುವರಿ ತೆರಿಗೆಯಿಂದ ಮಾರುತಿ ಸುಜುಕಿಗೆ ನಷ್ಟಕ್ಕಿಂತ ಲಾಭವೇ ಹೆಚ್ಚಾಗುವ ಸಾಧ್ಯತೆ ಹೆಚ್ಚಿದೆ ಎಂದು ಎಚ್ಎಸ್ ಬಿಸಿ ಗ್ಲೋಬಲ್ ರಿಸರ್ಚ್ ಸಂಸ್ಥೆ ಹೇಳಿದೆ.

ಡೀಸೆಲ್ ಕಾರುಗಳಿಗೆ ತೆರಿಗೆ ಹೆಚ್ಚಾದ್ರೆ ಎಂಟ್ರಿ ಲೆವೆಲ್ ಡೀಸೆಲ್ ಕಾರುಗಳಾದ ಟಾಟಾ ಇಂಡಿಕಾ, ಷೆವರ್ಲ್ ಬೀಟ್, ಫೋರ್ಡ್ ಫಿಗೊ ಮತ್ತು ಟೊಯೊಟಾ ಲಿವಾ ಮಾರಾಟ ಇಳಿಕೆ ಕಾಣಲಿದೆ. ಸಣ್ಣಕಾರು ಮಾರುಕಟ್ಟೆಯ ಪಾಲಿನಲ್ಲಿ ಈ ಕಾರುಗಳ ಪಾಲು ಮೂರನೇ ಒಂದು ಭಾಗದಷ್ಟಿದೆ.

ಡೀಸೆಲ್ ತೆರಿಗೆ ಹೆಚ್ಚಾದ್ರೆ ಈ ಕಾರುಗಳ ಮಾರಾಟ ಇಳಿಕೆ ಕಂಡು ಮಾರುತಿ ಕಾರುಗಳಿಗೆ ಬೇಡಿಕೆ ಹೆಚ್ಚಾಗಬಹುದು. ಯಾಕೆಂದ್ರೆ ಮಾರುತಿ ಕಂಪನಿಯು ಎಂಟ್ರಿ ಲೆವೆಲ್ ಕಾರುಗಳೆಲ್ಲ ಪೆಟ್ರೋಲ್ ಆವೃತ್ತಿಗಳಾಗಿವೆ ಎಂದು ಎಚ್ಎಸ್ ಬಿಸಿ ವರದಿ ಹೇಳಿದೆ.

ಈಗ ಡೀಸೆಲ್ ಮತ್ತು ಪೆಟ್ರೋಲ್ ಕಾರುಗಳ ದರದಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಹೆಚ್ಚಿನ ಕಾರು ಖರೀದಿದಾರರು ಕಳೆದ ವರ್ಷ ಡೀಸೆಲ್ ಎಂಜಿನ್ ಕಾರು ಖರೀದಿಸಲು ಮುಂದಾಗಿದ್ದರು. ಇದರಿಂದಾಗಿ ಒಟ್ಟು ಕಾರು ಮಾರಾಟದಲ್ಲಿ ಶೇಕಡ 37ರಷ್ಟು ಡೀಸೆಲ್ ಕಾರುಗಳು ಮಾರಾಟವಾಗಿದ್ದವು. ಪೆಟ್ರೋಲ್ ದರ ಹೆಚ್ಚಳ ಮತ್ತು ಬಡ್ಡಿದರ ಹೆಚ್ಚಳ ಪೆಟ್ರೋಲ್ ಕಾರುಗಳಿಗೆ ಹೊಡೆತ ನೀಡಿದೆ.

ಸರಕಾರ ಪ್ರಸ್ತಾಪಿತ ಹೆಚ್ಚುವರಿ ತೆರಿಗೆಯಿಂದ ಡೀಸೆಲ್ ಕಾರುಗಳು 60-80 ಸಾವಿರ ರು. ದುಬಾರಿಯಾಗುವ ಸಾಧ್ಯತೆಯಿದೆ. ಇದರು ಡೀಸೆಲ್ ಕಾರುಗಳ ಮಾರಾಟಕ್ಕೆ ಬಲವಾದ ಹೊಡೆತ ನೀಡಲಿದೆ.

ಸಾಂಪ್ರದಾಯಿಕವಾಗಿ ಕಡಿಮೆ ಖರ್ಚಿನಲ್ಲಿ ಮಾರುತಿ ಕಾರುಗಳ ಮಾಲೀಕತ್ವ ಪಡೆಯಬಹುದು. ಷೇರು ಮಾರುಕಟ್ಟೆಯಲ್ಲಿ ಮಾರುತಿ ಷೇರು ದರ ಈಗ 1,405 ರುಪಾಯಿ ಇರಬೇಕಿತ್ತು. ಆದರೆ ಈಗ ಇದು 1,309 ರುಪಾಯಿಗೆ ವೆಹಿವಾಟು ನಡೆಸುತ್ತಿದೆ.

ಕಳೆದ ವರ್ಷ ಮಾರುತಿ ಸುಜುಕಿ ನೌಕರರ ಮುಷ್ಕರ ಕಂಪನಿಗೆ ಬಲವಾದ ಹೊಡೆತ ನೀಡಿತ್ತು. ಇದರಿಂದಾಗಿ ಕಂಪನಿಗೆ ಗ್ರಾಹಕರ ಬೇಡಿಕೆಯನ್ನು ಸಮರ್ಥವಾಗಿ ಪೂರೈಸಲು ಸಾಧ್ಯವಾಗಿರಲಿಲ್ಲ. ಕಳೆದ ವರ್ಷದ ಡಿಸೆಂಬರ್ ವರೆಗೆ ಮಾರುತಿ ಕಾರುಗಳ ಮಾರಾಟ ಇಳಿಕೆ ಕಾಣುತ್ತಿತ್ತು. ಆದರೆ ಕಳೆದ ತಿಂಗಳು ಕಂಪನಿಯ ಮಾರಾಟ ಶೇಕಡ 6.5 ರಷ್ಟು ಹೆಚ್ಚಾಗಿದೆ. ಒಟ್ಟಾರೆ ಮಾರುತಿಗೆ ಶುಭ ಕಾಲ ಬಂದೈತೆ ಎಂದುಕೊಳ್ಳಬಹುದು. (ಕನ್ನಡ ಡ್ರೈವ್ ಸ್ಪಾರ್ಕ್)

More from DriveSpark

Article Published On: Thursday, March 8, 2012, 15:21 [IST]
English summary
Central Government diesel-engine car Tax proposal not impact Maruti Suzuki. HSBC Global Research Report said Maruti could benefit tax. Why?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+