ಡೇಂಜರ್, ಡೀಸೆಲ್ ಕಾರಿನ ಹೊಗೆಯಿಂದ ಕ್ಯಾನ್ಸರ್!
ಇದೀಗ ಡೀಸೆಲ್ ಕಾರುಗಳ ಹೊಗೆ ವಿರೋಧಿಗಳ ವಾದವನ್ನು ಸಮರ್ಥಿಸುವ ಅಧ್ಯಯನವೊಂದು ಹೊರಬಿದ್ದಿದೆ. ಡೀಸೆಲ್ ಎಂಜಿನ್ ಹೊರಸೂಸುವ ಮಾಲಿನ್ಯದಿಂದ ಶ್ವಾಸಕೋಶಕ್ಕೆ ಹಾನಿಯಾಗಬಹುದು ಮತ್ತು ಪುಪ್ಪಸ ಕ್ಯಾನ್ಸರ್ ಬರುವ ಸಂಭಾವ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಘಟನೆ(ಡಬ್ಲ್ಯುಎಚ್ಒ) ನೂತನ ಅಧ್ಯಯನ ತಿಳಿಸಿದೆ.
ಡೀಸೆಲ್ ವಾಹನದ ಹೊಗೆ ಮನುಷ್ಯರಲ್ಲಿ ಕಾರ್ಸಿಯೊಜೆನಿಕ್(ಕ್ಯಾನ್ಸರ್ ಉತ್ಪಾದಕ) ಉಂಟು ಮಾಡಲಿವೆ ಎಂದು 1988ರಲ್ಲಿಯೇ ಅಂತಾರಾಷ್ಟ್ರೀಯ ಕ್ಯಾನ್ಸರ್ ಸಂಶೋಧನಾ ಕೇಂದ್ರವು ಹೇಳಿತ್ತು. ಇದೀಗ ವಿಶ್ವ ಆರೋಗ್ಯ ಸಂಘಟನೆಯ ಅಧ್ಯಯನ ಇದಕ್ಕೆ ಪೂರಕವಾಗಿದೆ.
ಪೆಟ್ರೋಲ್ ದರ ಹೆಚ್ಚಳದಿಂದ ದೇಶದಲ್ಲಿ ಹೆಚ್ಚಿನ ಜನರು ಡೀಸೆಲ್ ಕಾರು ಖರೀದಿಸುತ್ತಿದ್ದಾರೆ. ಅತ್ಯಧಿಕ ಮೈಲೇಜ್, ರನ್ನಿಂಗ್ ವೆಚ್ಚ ಕಡಿಮೆ ಇತ್ಯಾದಿ ಕಾರಣಗಳಿಂದ ಡೀಸೆಲ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿವೆ. ವಾಹನ ಮಾಲಿನ್ಯದಿಂದ ಉಂಟಾಗುವ ಅಪಾಯಗಳನ್ನು ತಪ್ಪಿಸಲು ಪರಿಸರ ಸ್ನೇಹಿ ವಾಹನಗಳ ಬಳಕೆ ಹೆಚ್ಚಿಸುವುದು ಇಂದಿನ ಅಗತ್ಯ. ಗೋ ಗ್ರೀನ್.


Click it and Unblock the Notifications









