ಡೀಸೆಲ್ ತುಟ್ಟಿ: ಡೀಸೆಲ್ ಕಾರಾ? ಪೆಟ್ರೋಲ್ ಕಾರಾ?

ಸೆಪ್ಟೆಂಬರ್ ಹದಿಮೂರರ ಮಧ್ಯರಾತ್ರಿ ಹನ್ನೆರಡು ಗಂಟೆಯಿಂದ ಅನ್ವಯವಾಗುವಂತೆ ದೇಶದಲ್ಲಿ ಡೀಸೆಲ್ ದರ ಐದು ರುಪಾಯಿ ದುಬಾರಿಯಾಗಿದೆ. ಕಳೆದ ಹದಿನೈದು ತಿಂಗಳಲ್ಲಿ ಮೊದಲ ಸಲ ಸರಕಾರವು ಡೀಸೆಲ್ ದರಕ್ಕೆ ಕೈ ಹಾಕಿದೆ. ಡೀಸೆಲ್ ಕಾರು ಮಾಲಿಕರ ಮುಖದಲ್ಲಿ ತೆಳುವಾದ ಕಾರ್ಮೋಡವೊಂದು ಕಾಣಿಸಿಕೊಂಡಿದೆ.

ಕಳೆದ ಕೆಲವು ತಿಂಗಳಿನಿಂದ ಡೀಸೆಲ್ ಕಾರುಗಳ ಮಾರಾಟ ಗಮನಾರ್ಹವಾಗಿ ಹೆಚ್ಚಳವಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಇಂಧನ ದರದ ನಡುವೆ ಇರುವ ಭಾರೀ ಅಂತರ ಇದಕ್ಕೆ ಕಾರಣ. ಡೀಸೆಲ್ ದರ ಹೆಚ್ಚಳವಾಗಿರುವುದು, ಡೀಸೆಲ್ ಕಾರುಗಳ ಮಾರಾಟದ ಮೇಲೆ ಅಂಕುಶ ಹಾಕುವುದು ನಿಶ್ಚಿತ.

ಕ್ಯಾಬಿನೆಟ್ ಕಮಿಟಿ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು 5.5 ರುಪಾಯಿ ಕಡಿಮೆ ಮಾಡಿದೆ. ಕಮಿಟಿಯು ಪೆಟ್ರೋಲ್ ದರವನ್ನು 6 ರುಪಾಯಿ ಹೆಚ್ಚಿಸುವ ಯೋಜನೆ ಹೊಂದಿದೆ. ಅಬಕಾರಿ ಸುಂಕ ಕಡಿತದ ಲಾಭ ಇದಕ್ಕೆ ಸರಿಯಾಗಲಿದೆ.

ಡೀಸೆಲ್ ದರ ಈಗ ದೇಶದಲ್ಲಿ 45 ರುಪಾಯಿಯಿಂದ 52 ರುಪಾಯಿ ನಡುವೆ ಇದೆ. ಇನ್ಮುಂದೆ ಬೆಂಗಳೂರಿನಲ್ಲಿ ಡೀಸೆಲ್ ದರ 52.17 ರು ಇರಲಿದೆ ಚೆನ್ನೈನಲ್ಲಿ ರು 48.95. ಕೋಲ್ಕತ್ತಾ ರು 48.74, ಮುಂಬೈ ರು.50.99 ಇರಲಿದೆ.

ಓದುಗರೇ, ಈ ಹಬ್ಬದ ಸೀಸನಿನಲ್ಲಿ ಕಾರೊಂದು ಖರೀದಿಸುವ ಯೋಚನೆ ನಿಮಗಿರಬಹುದು. ನೀವು ಡೀಸೆಲ್ ಕಾರು ಖರೀದಿಸುವಿರಾ? ಪೆಟ್ರೋಲ್ ಕಾರು ಖರೀದಿಸುವಿರಾ? ನಿಮ್ಮ ಆಯ್ಕೆ ಯಾವುದು? ನಮ್ಮೊಂದಿಗೆ ಹಂಚಿಕೊಳ್ಳಿ.

More from DriveSpark

Article Published On: Friday, September 14, 2012, 9:44 [IST]
English summary
Diesel prices in India has been increased by Rs.5 across India effective from midnight of 13th September. Diesel car sales in India had increased significantly in the recent months primarily due to the price difference between petrol and diesel.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+