2013ರಲ್ಲಿ ಡೀಸೆಲ್ ದರ 10 ರು. ಹೆಚ್ಚಳ ಸಾಧ್ಯತೆ
ವರದಿಗಳ ಪ್ರಕಾರ ಡೀಸೆಲ್ ದರದಲ್ಲಿ ಪ್ರತಿ ತಿಂಗಳಿಗೊಮ್ಮೆ ಒಂದು ರುಪಾಯಿ ಹೆಚ್ಚಳ ಕಂಡುಬರಲಿದೆ. ಈ ಮೂಲಕ ತೈಲ ಕಂಪನಿಗಳಿಗೆ ಉಂಟಾಗುವ ನಷ್ಟವನ್ನು ಸರಿದೂಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಡೀಸೆಲ್ ಸೇರಿದಂತೆ ಅಡುಗೆ ಅನಿಲ ಹಾಗೂ ಸೀಮೆಎಣ್ಣೆ ದರದಲ್ಲೂ ಅಷ್ಟೇ ಪ್ರಮಾಣದ ದರ ಏರಿಕೆ ಕಂಡುಬರಲಿದೆ. ಸರಕಾರದ ಈ ಕ್ರಮ ಜನ ಸಾಮಾನ್ಯರಿಗೆ ಮುಂದಿನ ದಿಗಗಳಲ್ಲಿ ಭಾರಿ ಹೊರೆಯಾಗಲಿದೆ.
2012 ಸೆಪ್ಟೆಂಬರ್ ತಿಂಗಳಲ್ಲಿ ಡೀಸೆಲ್ ದರದಲ್ಲಿ 5 ರುಪಾಯಿಗಳಷ್ಟು ಏರಿಕೆಗೊಳಿಸಲಾಗಿತ್ತು. ಇದೀಗ ನೂತನ ದರ ಜಾರಿಗೆ ಬಂದ್ದಲ್ಲಿ ಆಟೋಮೊಬೈಲ್ ಜಗತ್ತಿಗೆ ಭಾರಿ ಹೊಡೆತ ನೀಡಲಿದೆ. ಇದರಿಂದ ಕಾರು ಹಾಗೂ ಬೈಕ್ ದರಗಳಲ್ಲೂ ಗಣನೀಯ ವರ್ಧನೆ ಕಂಡುಬರುವ ಸಾಧ್ಯತೆಯಿದೆ.
ಪೆಟ್ರೋಲ್‌ಗೆ ಹೋಲಿಸಿದರೆ ಡೀಸೆಲ್ ದರ ಅಗ್ಗವಾಗಿರುವುದರಿಂದ ಎಲ್ಲ ವಾಹನ ತಯಾರಕ ಕಂಪನಿಗಳು ಡೀಸೆಲ್ ಕಾರುಗಳತ್ತ ಹೆಚ್ಚಿನ ಗಮನ ಕೇಂದ್ರಕರಿಸಿದ್ದವು. ಆದರೆ ಕೇಂದ್ರ ಸರಕಾರದ ಈ ನಿರ್ಧಾರದಿಂದ ಬೇಡಿಕೆ ಮತ್ತೆ ಕುಸಿಯುವ ಸಾಧ್ಯತೆಯಿದೆ.
ಪ್ರಸ್ತುತ ನವದೆಹಲಿಯಲ್ಲಿ ಡೀಸೆಲ್ ದರ 47.15 ರು.ಗಳಾಗಿವೆ. ಸರಕಾರಿ ಸ್ವಾಮ್ಯದ ತೈಲ ಕಂಪನಿಗಳು ಈಗ ಲೀಟರ್‌ಗೆ 9.28 ರು. ನಷ್ಟದೊಂದಿಗೆ ಡೀಸೆಲ್ ಮಾರಾಟ ಮಾಡುತ್ತಿವೆ. ಒಟ್ಟಿನಲ್ಲಿ ಸರಕಾರದ ಈ ನಿರ್ಧಾರವು ಭಾರಿ ಹೊಡೆತ ನೀಡುವ ಸಾಧ್ಯತೆಯಿದೆ.


Click it and Unblock the Notifications









