ಲಗ್ಷುರಿ ಕಾರು ಬಿಡೋಕೆ ದೇಶಿ ಗ್ರಾಹಕರಿಗೆ ಟ್ರೈನಿಂಗ್

"ಚಾಲಕರ ಚಾಲನಾ ಪರಿಣತಿ, ಕೌಶಲ್ಯ ಹೆಚ್ಚಿಸಲು ಬಿಎಂಡಬ್ಲ್ಯು ಡ್ರೈವರ್ ಟ್ರೈನಿಂಗ್ ಕಾರ್ಯಕ್ರಮ ಆರಂಭಿಸಲಾಗಿದೆ. ಬಿಎಂಡಬ್ಲ್ಯು ತಂತ್ರಜ್ಞಾನ ತಿಳಿದುಕೊಂಡು ಡ್ರೈವಿಂಗ್ ಅನುಭವ ಪಡೆಯುವುದು ಇದರಿಂದ ಗ್ರಾಹಕರಿಗೆ ಸಾಧ್ಯವಾಗಲಿದೆ" ಎಂದು ಬಿಎಂಡಬ್ಲ್ಯು ಗ್ರೂಪ್ ಇಂಡಿಯಾ ಅಧ್ಯಕ್ಷರಾದ ಆಂಡ್ರೆಸ್ ಸ್ಕಾಫ್ ಹೇಳಿದ್ದಾರೆ.
ದೇಶದ ಗ್ರಾಹಕರಿಗೆ ಚಾಲನಾ ಕೌಶಲ್ಯ ಕಲಿಸಲು ಕಂಪನಿಯು ವೃತ್ತಿಪರ ಮಾರ್ಗಸೂಚಕರನ್ನು ನೇಮಕಮಾಡಿಕೊಂಡಿದೆ. ಸೀಟಿನಲ್ಲಿ ಕರೆಕ್ಟಾಗಿ ಕುಳಿತುಕೊಳ್ಳುವಲ್ಲಿಂದ, ಸ್ಟಿಯರಿಂಗ್ ನಿರ್ವಹಣೆ, ಎಮರ್ಜೆನ್ಸಿ ಮತ್ತು ಟಾರ್ಗೆಟ್ ಬ್ರೇಕಿಂಗ್ ಮುಂತಾದ ಹತ್ತು ಹಲವು ಅಂಶಗಳನ್ನು ಕಲಿಸಲಾಗುವುದೆಂದು ಕಂಪನಿ ಹೇಳಿದೆ. (ಕನ್ನಡ ಡ್ರೈವ್ ಸ್ಪಾರ್ಕ್ )


Click it and Unblock the Notifications








