ಎರ್ಟಿಗಾ, ಡಸ್ಟರ್, ಎಕ್ಸ್‌ಯುವಿ: ಮುಗಿಯದ ಹವಾ

ರೆನೊ, ಮಹೀಂದ್ರ ಮತ್ತು ಮಾರುತಿ ಸುಜುಕಿ ಕಂಪನಿಗಳ ಯುಟಿಲಿಟಿ ಕಾರುಗಳ ಬೇಡಿಕೆ ಗಮನಾರ್ಹವಾಗಿ ಏರಿಕೆ ಕಾಣುತ್ತಿದೆ. ಗ್ರಾಹಕರ ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡಲು ಈ ಕಂಪನಿಗಳು ಹೆಣಗುತ್ತಿವೆ. ಈಗ ಎರ್ಟಿಗಾ, ಡಸ್ಟರ್, ಎಕ್ಸ್‌ಯುವಿ ಕಾರುಗಳ ಬೇಡಿಕೆ ರಾಕೇಟ್ ವೇಗದಲ್ಲಿದೆ!

ನೀವು ಇತ್ತೀಚೆಗೆ ಮಾರುತಿ ಎರ್ಟಿಗಾ, ರೆನೊ ಡಸ್ಟರ್, ಮಹೀಂದ್ರ ಎಕ್ಸ್ ಯುವಿ ಬುಕ್ಕಿಂಗ್ ಮಾಡಿಕೊಂಡಿದ್ರೆ ಅದರ ವೇಟಿಂಗ್ ಪಿರೆಯಿಡ್ ಹೆಚ್ಚಳವಾಗಿರುವುದು ನಿಮ್ಮ ಗಮನಕ್ಕೆ ಬಂದಿರಬಹುದು.

ಈ ಯುಟಿಲಿಟಿ ವಾಹನಗಳಿಗೆ ಅತ್ಯಧಿಕ ಬೇಡಿಕೆಯಿರುವುದೇ ವೇಟಿಂಗ್ ಪಿರೆಯಿಡ್ ಹೆಚ್ಚಳಕ್ಕೆ ಕಾರಣ. ಈ ಕಂಪನಿಗಳು ಎಲ್ಲಾ ಪಾಳಿಗಳಲ್ಲೂ ಕೆಲಸ ಮಾಡಿ ಈ ಕಾರುಗಳ ಉತ್ಪಾದನೆ ಹೆಚ್ಚಿಸಲು ಪ್ರಯತ್ನಿಸುತ್ತಿವೆ.

ನಮಗೆ ದೊರಕಿದ ತಾಜಾ ಮಾಹಿತಿ ಪ್ರಕಾರ ರೆನೊ ಕಂಪನಿಯಂತೂ ಡಸ್ಟರ್ ಉತ್ಪಾದನೆ ಹೆಚ್ಚಿಸಲು ಶತಾಯಗತಾಯ ಪ್ರಯತ್ನಿಸುತ್ತಿದೆ. ಮುಂದಿನ ದಿನಗಳಲ್ಲಿ ಕಾಂಪ್ಯಾಕ್ಟ್ ಎಸ್ ಯುವಿ ಡಸ್ಟರ್ ಉತ್ಪಾದನೆಯನ್ನು ದ್ವಿಗುಣಗೊಳಿಸುವ ಯೋಜನೆಯನ್ನು ಕಂಪನಿ ಹೊಂದಿದೆ.

ಮಹೀಂದ್ರ ಸಹ XUV 5oo ಉತ್ಪಾದನೆಯನ್ನು ಶೇಕಡ 25ರಷ್ಟು ಹೆಚ್ಚಿಸಲು ಆಲೋಚಿಸುತ್ತಿದೆ. ಮಾರುತಿ ಸುಜುಕಿ ಈಗಾಗಲೇ ಎರ್ಟಿಗಾ ಉತ್ಪಾದನೆಯನ್ನು ಎರಡು ಪಟ್ಟು ಹೆಚ್ಚಿಸಿದೆ. ಆದರೂ ಬೇಡಿಕೆ ಹೆಚ್ಚಿರುವುದರಿಂದ ಉತ್ಪಾದನಾ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಲು ಯೋಜಿಸಿದೆ.

ದೀಪಾವಳಿ ವೇಳೆಗೆ ಈ ಕಾರುಗಳಲ್ಲಿ ಯಾವುದಾದರೂ ನಿಮ್ಮ ಮನೆ ಬಾಗಿಲ ಮುಂದಿರಬೇಕಾದ್ರೆ ಈಗ್ಲೇ ಬುಕ್ಕಿಂಗ್ ಮಾಡುವುದು ಒಳಿತು.

More from DriveSpark

Article Published On: Tuesday, September 4, 2012, 14:08 [IST]
English summary
Utility car manufactures such as Renault, Mahindra and Maruti are towering up their resources, in order to meet the demands for their vehicles. Have you booked a Duster, XUV 5oo or Ertiga recently? If yes, are you on the waiting scale for a long duration?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+