ಇಂಧನ ಉಳಿಸೋ ಪರಿಸರಸ್ನೇಹಿ ಟೈರಿಗೆ ಜೈ
ಹಸಿರುಮನೆ ಪರಿಣಾಮ ಮತ್ತು ಜಾಗತಿಕ ತಾಪಮಾನ ಹೆಚ್ಚಳದ ಭೀತಿ ಎಲ್ಲೆಲ್ಲೂ ಕಾಡುತ್ತಿದೆ. ಪರಿಸರ ಮಾಲಿನ್ಯ ಹೆಚ್ಚಿಸುವಲ್ಲಿ ರಸ್ತೆ ಸಾರಿಗೆಯ ಕೊಡುಗೆ ಅಪಾರ. ಹೀಗಾಗಿ ಟ್ರಕ್ ಮತ್ತು ಕಾರುಗಳ ಟೈರುಗಳು ಉಂಟುಮಾಡುವ ಸಿಒ2 ಅಥವಾ ಕಾರ್ಬನ್ ಡೈಯಾಕ್ಷೈಡ್ ಕಡಿಮೆ ಮಾಡುವ ಪ್ರಯತ್ನದಲ್ಲಿ ಕಂಪನಿಗಳಿವೆ ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ.
ಯುರೋಪಿನ ಮೂರನೇ ಒಂದು ಭಾಗದಷ್ಟು ಮಾಲಿನ್ಯವು ರಸ್ತೆ ಸಾರಿಗೆಯಿಂದ ಬರುತ್ತದೆ ಎಂದು ಯುರೋಪ್ ಎನ್ ವೈರ್ನ್ ಮೆಂಟ್ ಏಜೆನ್ಸಿ ತಿಳಿಸಿದೆ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಐರೋಪ್ಯ ಒಕ್ಕೂಟವು ಸಿಒ2 ಮಿತಿ ನಿರ್ಬಂಧ ಹೇರಿತ್ತು. ಪರಿಸರ ಸ್ನೇಹಿ ಮತ್ತು ಇಂಧನ ದಕ್ಷತೆ ಹೆಚ್ಚಿಸುವ ಟೈರುಗಳನ್ನು ಉತ್ಪಾದಿಸುವಂತೆ ಒಕ್ಕೂಟ ಒತ್ತಡ ಹೇರಿತ್ತು.
ಪರಿಸರ ಸ್ನೇಹಿ ಟೈರುಗಳು ರಸ್ತೆ ಮೇಲೆ ಕಡಿಮೆ ಕಾರ್ಬನ್ ಡೈಯಾಕ್ಷೈಡ್ ಉಳಿಸುತ್ತವೆ. ಹಸಿರು ಟೈರುಗಳ ಮೂಲಕ ಸಿಒ2 ಕಡಿಮೆ ಮಾಡೋ ವಿಷ್ಯವನ್ನು 2007ರಲ್ಲಿ ಪ್ರಮುಖ ಟೈರ್ ಕಂಪನಿ ಕಾಂಟಿನೆಂಟಲ್ ವಿರೋಧ ವ್ಯಕ್ತಪಡಿಸಿತ್ತು. ಬ್ರೇಕ್ ದಕ್ಷತೆ ಕಡಿಮೆ ಆಗುತ್ತೆ ಅನ್ನೋದು ಆ ಕಂಪನಿ ದೂರು.
ಆದರೆ ಇದೀಗ ಕಾಂಟಿನೆಂಟಲ್ ಕಂಪನಿಯೇ ಮುಂದಾಗಿ ಸಿಒ2 ಕಡಿಮೆ ಮಾಡುವ ಪರಿಸರ ಸ್ನೇಹಿ ಟೈರ್ ಉತ್ಪಾದಿಸಿದೆ. ಇದು ಸಂಪೂರ್ಣ ಸುರಕ್ಷಿತ ಮತ್ತು ಬ್ರೇಕ್ ದಕ್ಷತೆ ಕಡಿಮೆ ಮಾಡುವುದಿಲ್ಲವೆಂದು ಕಾಂಟಿನೆಂಟಲ್ ಹೇಳಿದೆ.
ನೂತನ ಟೈರು ಹೆಸರು ಕಾಂಟಿನೆಂಟಲ್ ಪ್ರೊಕಾಂಟ್ರಾಕ್ಟ್. ಸೆಡಾನ್, ಮಿನಿವ್ಯಾನ್, ಕೂಪ್ ಮತ್ತು ಕ್ರಾಸೊವರ್ ವೆಹಿಕಲ್ ಗಳಿಗಾಗಿ ಕಂಪನಿ ಅಭಿವೃದ್ಧಿಪಡಿಸಿದೆ. ಮುಖ್ಯವಾಗಿ ಎಲೆಕ್ಟ್ರಿಕ್ ಕಾರುಗಳನ್ನು ಗಮನದಲ್ಲಿಟ್ಟುಕೊಂಡು ನೂತನ ಟೈರ್ ಹೊರತರಲಾಗಿದೆ. (ಏಜೆನ್ಸಿಸ್ )


Click it and Unblock the Notifications









