ಬಾಡಿಗೆ ಕಾರಿನಲ್ಲಿ ವೈ-ಫೈ ಜೊತೆ ಕನೆಕ್ಟ್ ಆಗಿರಿ

ದೆಹಲಿ ಮೂಲದ ರೇಡಿಯೊ ಟ್ಯಾಕ್ಸಿ ಸೇವಾ ಸಂಸ್ಥೆ GoCarz ತನ್ನ ಗ್ರಾಹಕರಿಗಾಗಿ ವಿಶೇಷ ಸೇವೆಯೊಂದನ್ನು ನೀಡಿದೆ. ಈ ಟ್ಯಾಕ್ಸಿ ಕಂಪನಿಯು ತನ್ನ ಗ್ರಾಹಕರಿಗಾಗಿ ಕಾರುಗಳಿಗೆ ವೈ-ಫೈ ಅಳವಡಿಸಿಕೊಟ್ಟಿದೆ. ಇದು ಗ್ರಾಹಕರಿಗೆ ಇಷ್ಟವಾಗುವ ನಿರೀಕ್ಷೆಯನ್ನು ಕಂಪನಿ ವ್ಯಕ್ತಪಡಿಸಿದೆ.

ಈ ಇನ್ನೋವೆಟಿವ್ ವೈಫೈ ಸೇವೆ ಮಾತ್ರವಲ್ಲದೇ ಕಂಪನಿಯು ತನ್ನ ಕಾರುಗಳಲ್ಲಿ ನೀರಿನ ಬಾಟಲು, ಸುದ್ದಿಪತ್ರಿಕೆಗಳನ್ನೂ ಒದಗಿಸುತ್ತದೆ. ಗ್ರಾಹಕರನ್ನು ಸೆಳೆಯಲು ಮತ್ತು ಮಾರುಕಟ್ಟೆಯಲ್ಲಿ ಪ್ರಗತಿ ಕಾಣಲು ಈ ಸೇವೆಗಳು ನೆರವಾಗುವ ನಿರೀಕ್ಷೆಯನ್ನು ಗೊಕಾರ್ಜ್ ಹೊಂದಿದೆ.

"ನಮ್ಮ ನೂತನ ಸೇವೆಗೆ ಗ್ರಾಹಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರಸಕ್ತ ಆಧುನಿಕ ಯುಗದಲ್ಲಿ ಪ್ರತಿಯೊಬ್ಬರು ವೈ-ಫೈ ಬಯಸುತ್ತಾರೆ. ನಮ್ಮ ಕಾರುಗಳಲ್ಲಿ ಪ್ರಯಾಣಿಸುವ ಗ್ರಾಹಕರು ಇನ್ಮುಂದೆ ವೆಬ್ ಲಾಗಿನ್ ಆಗಬಹುದು" ಎಂದು ಗೊ ಕಾರ್ಜ್ ಸೇವಾ ನಿರ್ದೇಶಕರಾದ ಅಭಿನವ್ ಗೊಗಿಯಾ ಹೇಳಿದ್ದಾರೆ.

ಸದ್ಯ ಕಂಪನಿಯು ಸುಮಾರು 50 ಕಾರುಗಳಲ್ಲಿ ಬಾಡಿಗೆ ಸೇವೆ ನೀಡುತ್ತಿದೆ. ಕಂಪನಿಯಲ್ಲಿ ಹ್ಯುಂಡೈ ಅಸೆಂಟ್, ಮಾರುತಿ ಇಕೊ ಮತ್ತು ವ್ಯಾಗನಾರ್ ಕಾರುಗಳಿವೆ. ಕಂಪನಿಯು ಸದ್ಯ ದೆಹಲಿಯಲ್ಲಿ ಮಾತ್ರ ಸೇವೆ ನೀಡುತ್ತಿದೆ. ಬೆಂಗಳೂರು ಸೇರಿದಂತೆ ಇತರ ನಗರಗಳಿಗೂ ಸೇವೆ ವಿಸ್ತರಿಸುವ ಯೋಜನೆ ಕಂಪನಿ ಮುಂದಿದೆಯಂತೆ.

More from DriveSpark

Article Published On: Friday, April 27, 2012, 16:07 [IST]
English summary
Delhi based Radio Taxi Service - GoCarz has come up with an intelligent feature for its customers. The famous taxi service operators are providing its customers base with WI-Fi connectivity in its cars.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+