ಅಗ್ಗವಾಗಲಿದೆ ಎಂಟ್ರಿ ಲೆವೆಲ್ ಲಗ್ಷುರಿ ಕಾರುಗಳ ದರ

ದೇಶದಲ್ಲಿ ಐಷಾರಾಮಿ ಅದ್ದೂರಿ ಕಾರುಗಳಿಗೆ ಬೇಡಿಕೆ ಗಮನಾರ್ಹವಾಗಿ ಏರಿಕೆ ಕಾಣುತ್ತಿದೆ. 25-30 ಲಕ್ಷ ರು. ಆಸುಪಾಸಿನಲ್ಲಿ ಬಿಎಂಡಬ್ಲ್ಯು, ಆಡಿ ಮತ್ತು ಮರ್ಸಿಡಿಸ್ ಬೆಂಝ್ ಕಂಪನಿಗಳು ಎಂಟ್ರಿ ಲೆವೆಲ್ ಅದ್ದೂರಿ ಕಾರುಗಳನ್ನು ಪರಿಚಯಿಸಲು ಯೋಜಿಸುತ್ತಿವೆ.

ಈ ಮೂರು ಲಗ್ಷುರಿ ಕಾರು ಕಂಪನಿಗಳು ಶೀಘ್ರದಲ್ಲಿ ಅಗ್ಗದ ದರದಲ್ಲಿ ಐಷಾರಾಮಿ ಕಾರುಗಳನ್ನು ಪರಿಚಯಿಸಲಿವೆ. ಮರ್ಸಿಡಿಸ್ ಬೆಂಝ್ ಕಂಪನಿಯು ಮಿನಿ ಸ್ಪೋರ್ಟ್ ಟೂರರ್ ಬಿ ಕ್ಲಾಸ್ ಕಾರು ಪರಿಚಯಿಸಲಿದೆ. ಈಗಾಗಲೇ ಕಂಪನಿಯ ಎ-ಕ್ಲಾಸ್ ಕಾರುಗಳಿಗೆ ಸಖತ್ ಬೇಡಿಕೆಯಿದೆ.

ಆಡಿ ಕೂಡ ಎ3 ಎಂಬ ಹ್ಯಾಚ್ ಬ್ಯಾಕ್ ಕಾರೊಂದನ್ನು ಪರಿಚಯಿಸಲು ಯೋಜಿಸಿದೆ. ಬಿಎಂಡಬ್ಲ್ಯು ಕೂಡ ಎಂಟ್ರಿ ಲೆವೆಲ್ ಕಾರೊಂದನ್ನು ಅಭಿವೃದ್ಧಿಪಡಿಸುವಲ್ಲಿ ಬ್ಯುಸಿಯಾಗಿದೆ. ಇದು ಎಕ್ಸ್1ಗಿಂತ ಕಡಿಮೆ ದರದ ಕಾರಾಗಿರಲಿದೆ ಎಂದು ಮೂಲಗಳು ಹೇಳಿವೆ. ಕಂಪನಿಯು 1 ಸೀರಿಸ್ ಕಾರು ಪರಿಚಯಿಸಲು ಕೂಡ ಯೋಜಿಸಿದೆ.

ದೇಶದ ಐಷಾರಾಮಿ ಕಾರು ಮಾರುಕಟ್ಟೆಯಲ್ಲಿನ ಈ ಹೊಸ ಬೆಳವಣಿಗೆಯಿಂದಾಗಿ ದೇಶದ ಗ್ರಾಹಕರಿಗೆ ಕಡಿಮೆ ದರಕ್ಕೆ ಐಷಾರಾಮಿ ಕಾರು ಖರೀದಿಸುವ ಅವಕಾಶ ದೊರಕಲಿದೆ. ಈ ಮೂರು ಕಂಪನಿಗಳ ನಡುವೆ ಪೈಪೋಟಿ ಹೆಚ್ಚಾಗಲಿದೆ. ಪರಿಣಾಮವಾಗಿ ದರ ಸಮರ ಕೂಡ ನಿರೀಕ್ಷಿಸಬಹುದು.

Article Published On: Wednesday, August 8, 2012, 14:57 [IST]
English summary
Luxury cars in India is growing at a steady pace. Manufacturers such as BMW, Audi and Mercedes-Benz, are looking to tap the entry level luxury space with small cars priced at Rs 25 to Rs 30 lakh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+