ಯುರೋಪ್ ಐಷಾರಾಮಿ ಕಾರುಗಳಿಗೆ ಕಡಿಮೆ ಅಬಕಾರಿ ಸುಂಕ

ಈಗ 1,500 ಸಿಸಿಗಿಂತ ಅತ್ಯಧಿಕ ಸಾಮರ್ಥ್ಯದ ಐಷಾರಾಮಿ ವಾಹನಗಳಿಗೆ ಶೇಕಡ 100ಕ್ಕಿಂತ ಹೆಚ್ಚು ಸುಂಕ ವಿಧಿಸಲಾಗುತ್ತಿದೆ. ಇದರಲ್ಲಿ ಶೇಕಡ 60ರಷ್ಟು ಆಮದು ಸುಂಕವಿರುತ್ತದೆ. ಉಳಿದಂತೆ ಅಬಕಾರಿ ಸುಂಕ ಇತ್ಯಾದಿಗಳು ಸೇರಿ ಒಟ್ಟಾರೆ ಶೇಕಡ 100ಕ್ಕಿಂತ ಹೆಚ್ಚು ಸುಂಕ ವಿಧಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಾಮಾನ್ಯ ಸುಂಕವನ್ನು ಶೇಕಡ 30ರಷ್ಟು ಕಡಿತ ಮಾಡುವ ಯೋಜನೆಯಲ್ಲಿ ಸರಕಾರವಿದೆ.
"ಯುರೋಪಿನಲ್ಲಿರುವ ದೇಶದ ಕಾರು ಕಂಪನಿಗಳ ಹಿತಾಶಕ್ತಿ ರಕ್ಷಿಸಲು ಸುಂಕ ಕಡಿತ ಮಾಡಲಾಗುವುದು" ಎಂದು ಹಿರಿಯ ಸರಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ. "ಹ್ಯುಂಡೈ, ರೆನಾಲ್ಟ್ ಮತ್ತು ಮಾರುತಿ ಸುಜುಕಿ ಮುಂತಾದ ಕಂಪನಿಗಳು ಯುರೋಪಿಗೆ ವರ್ಷಕ್ಕೆ ಸುಮಾರು 2.5 ಲಕ್ಷದಷ್ಟು ವಾಹನ ರಫ್ತು ಮಾಡುತ್ತಿವೆ. "ನಾವು ಆಮದು ಕಾರುಗಳಿಗೆ ಸುಂಕ ಕಡಿಮೆ ಮಾಡದಿದ್ದರೆ, ನಮ್ಮ ಕಾರುಗಳು ಕೂಡ ಹಲವು ಟಾರೀಫ್ ಶುಲ್ಕಗಳನ್ನು ಎದುರಿಸಬೇಕಾಗುತ್ತದೆ" ಎಂದು ಅವರು ಹೇಳಿದ್ದಾರೆ.


Click it and Unblock the Notifications








