ಉದ್ಯಾನನಗರಿಯಲ್ಲಿ ಗರಿಗೆದರಿದ ಫ್ಯಾನ್ಸಿ ನಂಬರ್ ಶೋಕಿ

ಕೆಲವರಿಗೆ ವಿಶಿಷ್ಠ ಸಂಖ್ಯೆಗಳೆಂದರೆ ಇಷ್ಟ. ಮೊಬೈಲ್ ಸಂಖ್ಯೆ, ಕಾರು ನಂಬರ್ ಪ್ಲೇಟಿಗೆ ತಮಗಿಷ್ಟವಾದ ಸಂಖ್ಯೆ ಪಡೆಯಲು ಎಷ್ಟು ಬೆಲೆ ತೆತ್ತಾದರೂ ಖರೀದಿ ಮಾಡುತ್ತಾರೆ. ವಿಶೇಷವೆಂದರೆ ಕೆಲವು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಇಂತಹ ಫ್ಯಾನ್ಸಿ ಕಾರು ನಂಬರ್ ಶೋಕಿ ಕಡಿಮೆಯಾಗಿತ್ತು. ಆದರೆ ಈಗ ಮತ್ತೆ ಗರಿಗೆದರಿದೆ.

ವಿಶೇಷವೆಂದರೆ ವಾಹನಗಳ ರಿಜಿಸ್ಟ್ರೇಷನ್ ಸಂಖ್ಯೆಯಲ್ಲಿ ಫ್ಯಾನ್ಸಿ ಅಂಕೆಗಳಿಗೆ ದರ ದುಬಾರಿಯಾಗಿದೆ. ಆದರೂ ಜನರು ಆಸಕ್ತಿಯಿಂದ ಇಂತಹ ಸಂಖ್ಯೆಗಳನ್ನು ಖರೀದಿಸುತ್ತಾರೆ. ಒಂದರಿಂದ ಒಂಬತ್ತರವರೆಗಿನ 1111,2222, 1122 ಇತ್ಯಾದಿ ಸಂಖ್ಯೆಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ ಎಂದು ಆರ್ ಟಿಒ ಮೂಲಗಳು ತಿಳಿಸಿವೆ.

ಎರಡು ವರ್ಷದ ಹಿಂದೆ ಫ್ಯಾನ್ಸಿ ಸಂಖ್ಯೆ ದರವನ್ನು ಆರ್‌ಟಿಒ ಪರಿಷ್ಕರಿಸಿತ್ತು. ಫ್ಯಾನ್ಸಿ ಸಂಖ್ಯೆ ದುಬಾರಿಯಾಗುವ ಮುನ್ನ ಸುಮಾರು 25 ಸಾವಿರ ರುಪಾಯಿಗೆ ಫ್ಯಾನ್ಸಿ ರಿಜಿಸ್ಟ್ರೇಷನ್ ನಂಬರ್ ದೊರಕುತ್ತಿತ್ತು. ಆದರೆ ಅದೀಗ ಸುಮಾರು ಮೂರು ಪಟ್ಟು ಹೆಚ್ಚಾಗಿದೆ.

ಒಂದು ರನ್ನಿಂಗ್ ಸರಣಿ ಸಂಖ್ಯೆಗಳಲ್ಲಿ ಆರ್ ಟಿಒಗೆ ಕೇವಲ 1 ಸಾವಿರ ಅರ್ಜಿಗಳಿಗೆ ಮಾತ್ರ ಅವಕಾಶ ನೀಡುವ ಅವಕಾಶವಿದೆ. ಅದಕ್ಕಿಂತ ಹೆಚ್ಚು ಬೇಡಿಕೆ ಬಂದರೆ ಆಯುಕ್ತರು ಅನುಮತಿ ನೀಡಬೇಕು. ಇದೀಗ ಆಯುಕ್ತರಿಗೆ ಸಾವಿರಕ್ಕಿಂತ ಹೆಚ್ಚು ಅರ್ಜಿ ಬರುತ್ತಿದೆ ಎಂದು ವರದಿಗಳು ಹೇಳಿವೆ.

ಈಗ ರಾಜ್ಯದಲ್ಲಿ ರನ್ನಿಂಗ್ ಸೀರಿಸ್ ರಿಜಿಸ್ಟ್ರೇಷನ್ ನಂಬರ್ ದರ ಈ ರೀತಿ ಇದೆ. ರನ್ನಿಂಗ್ ಸೀರಿಸ್ ಅಂದ್ರೆ ಪಾಲಿಗೆ ಬಂದದ್ದು ಪಂಚಾಮೃತ ಅನ್ನೋ ರೀತಿಯಿಲ್ಲಿ ಪಡೆಯುವ ರಿಜಿಸ್ಟ್ರೇಷನ್ ನಂಬರುಗಳಾಗಿವೆ. ರನ್ನಿಂಗ್ ಸೀರಿಸ್ ದರ: ದ್ವಿಚಕ್ರ ವಾಹನ- 6 ಸಾವಿರ ರುಪಾಯಿ. ಎಲ್ಎಂವಿ- 20 ಸಾವಿರ ರುಪಾಯಿ. ಇತರ ವಾಹನಗಳು- 30 ಸಾವಿರ ರುಪಾಯಿ.

ತಮಗೆ ಬೇಕಾದ ಸಂಖ್ಯೆಯನ್ನು ಅಡ್ವಾನ್ಸ್ ಆಗಿ ಬುಕ್ ಮಾಡುವ ಅಡ್ವಾನ್ಸ್ ಸೀರಿಸ್ ದುಬಾರಿ. ದ್ವಿಚಕ್ರ ವಾಹನ- 25 ಸಾವಿರ ರು. ಎಲ್ಎಂವಿ- 75 ಸಾವಿರ ರು. ಇತರ ವಾಹನಗಳು- 75 ಸಾವಿರ ರುಪಾಯಿ. ಇಷ್ಟು ದರ ದುಬಾರಿಯಿದ್ರೂ ಜನರೂ ತಮಗೆ ಬೇಕಾದ ಸಂಖ್ಯೆಗಳನ್ನು ಅಡ್ವಾನ್ಸ್ ಆಗಿ ಬುಕ್ ಮಾಡುವುದು ದಿನೇ ದಿನೇ ಹೆಚ್ಚಾಗುತ್ತಿದೆಯಂತೆ!

ಮಂತ್ರಿಗಳು, ರಾಜಕಾರಣಿಗಳು, ಪೋಲಿಸ್ ಅಧಿಕಾರಿಗಳು, ಉದ್ಯಮಿಗಳು ಮತ್ತು ವಿವಿಧ ಕ್ಷೇತ್ರದಲ್ಲಿ ದುಡಿಯುತ್ತಿರುವ ಪ್ರಮುಖ ವ್ಯಕ್ತಿಗಳಿಗೆ ಇಂತಹ ಕಾರು ನಂಬರ್ ಶೋಕಿ ಜಾಸ್ತಿ. ಇವರು ತಮಗೆ ಹಿಡಿಸಿದ ನಂಬರುಗಳು ಎಷ್ಟು ದುಬಾರಿಯಾಗಿದ್ದರೂ ಸರಿ ದೂಸರ ಮಾತನಾಡದೇ ಖರೀದಿಸುತ್ತಾರೆ.

ನಿಮಗೂ ಫ್ಯಾನ್ಸಿ ಸಂಖ್ಯೆ ಬೇಕಾದ್ರೆ ಇಲ್ಲಿಗೆ ಬನ್ನಿ.

More from DriveSpark

Article Published On: Wednesday, May 9, 2012, 17:10 [IST]
English summary
Applications for fancy number registrations in Bangalore RTO are at a high even after the Motor Vehicle Department hiked the fees for such applications. The demand for fancy number plates have been up from the past 2 years.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+