ಹಬ್ಬದ ಸೀಸನ್‌ಗೆ ಬಂದಿವೆ ಸಾಲು ಸಾಲು ಕಾರುಗಳು

ಹಬ್ಬದ ಕಾಲಘಟ್ಟ ಬಂತೆಂದರೆ ವಾಹನ ತಯಾಕರ ಕಂಪನಿಗಳಿಗೂ ಸಹ ತಮ್ಮ ವಹಿವಾಟು ಕುದುರಿಸಿಕೊಳ್ಳುವ ಕಾಲ. ಇದರಂತೆ ದೇಶಿಯ ಮಾರುಕಟ್ಟೆಯಲ್ಲಿ ನವನವೀನ ಆವೃತ್ತಿಗಳೊಂದಿಗೆ ಆಗಮಿಸುತ್ತಿರುವ ಕಾರು ತಯಾರಕರು ಗ್ರಾಹಕರಿಗಾಗಿ ಭಾರಿ ಕೊಡುಗೆಗಳನ್ನೇ ಮುಂದಿರಿಸಿವೆ.

ಅಂದ ಹಾಗೆ ಪ್ರಸಕ್ತ ತಿಂಗಳಲ್ಲೇ ಏಳು ನೂತನ ಕಾರುಗಳು ಬಿಡುಗಡೆಯಾಗಲಿದೆ. ಗ್ರಾಹಕರಿಗೆ ಇದಕ್ಕಿಂತ ಮಿಗಿಲಾದ ಸಿಹಿ ಸುದ್ದಿ ಇನ್ನೇನು ಬೇಕು..?

ಬಿಡುಗಡೆಯಾಗಲಿರುವ ನೂತನ ಕಾರುಗಳ ಲಿಸ್ಟ್:

  • ಮಾರುತಿ ಸುಜುತಿ ಆಲ್ಟೊ 800
  • ಟಾಟಾ ಇಂಡಿಗೊ ಮಾಂಝಾ ಕ್ಲಬ್ ಕ್ಲಾಸ್
  • ಟಾಟಾ ಸಫಾರಿ ಸ್ಟ್ರೋಮ್
  • ಸ್ಯಾಂಗ್ಯೊಂಗ್ ರೆಕ್ಸ್ಟಾನ್
  • ಹೊಂಡಾ ಬ್ರಿಯೊ ಆಟೊಮೆಟಿಕ್
  • ನ್ಯೂ ಚೆವ್ರೊಲೆಟ್ ಸ್ಪಾರ್ಕ್
  • ನ್ಯೂ ಫೋರ್ಡ್ ಫಿಗೊ

ಹೊಂಡಾ ಕಾರ್ ಇಂಡಿಯಾ ಕೂಡಾ ಅಕ್ಟೋಬರ್ 18ರ ವೇಳೆಗೆ ಕಾಂಪಾಕ್ಟ್ ಕಾರ್ ಬ್ರಿಯೊದ ಆಟೊಮೆಟಿಕ್ ಟ್ರಾನ್ಸ್‌ಮಿಷನ್ ಆವೃತ್ತಿಯನ್ನು ಬಿಡುಗಡೆ ಮಾಡುತ್ತಿದೆ. ಇದರ ಬೆನ್ನಲ್ಲೇ ಸೆಡಾನ್ ಸಿಟಿಯ ಸಿಎನ್‌ಜಿ ಆವೃತ್ತಿಯು ಸಹ ಹೊರಬರಲಿದೆ. ಪ್ರಸಕ್ತ ತಿಂಗಳಲ್ಲೇ ಸಣ್ಣ ಕಾರು ಸ್ಪಾರ್ಕ್‌ನ ಮರುನವೀಕರಣದ ಬ್ರಾಂಡ್ ಕೂಡಾ ಬಿಡುಗಡೆಯಾಗಲಿದೆ. ನೂತನ ಹ್ಯಾಚ್‌ಬ್ಯಾಕ್ ಸೈಲ್ ಯು-ವಿಇ ಬ್ರಾಂಡ್ ನವೆಂಬರ್ ತಿಂಗಳಲ್ಲಿ ಆಗಮಿಸುವ ನಿರೀಕ್ಷೆಯಿದೆ.

ಸಾಮಾನ್ಯವಾಗಿ ಹಬ್ಬದ ಸೀಸನ್‌ನಲ್ಲಿ ಮಾರಾಟ ಪ್ರಕ್ರಿಯೆ ತುಂಬಾನೇ ಹೆಚ್ಚಾಗಿರುತ್ತದೆ. ಈ ಬಾರಿಯೂ ಇದೇ ಪ್ರವೃತ್ತಿ ಮುಂದುವರಿಯಲಿದೆ ಎಂದು ಮಾರುತಿ ಸುಜುಕಿ ಇಂಡಿಯಾದ (ಎಂಎಸ್‌ಐ) ಮುಖ್ಯ ಕಾರ್ಯನಿರ್ವಣಾಧಿಕಾರಿ (ಮಾರ್ಕೆಟಿಂಗ್ ಆಂಡ್ ಸೇಲ್ಸ್) ಮಾಯಾಂಕ್ ಪರೀಕ್ ನಂಬಿಕೆ ವ್ಯಕ್ತಪಡಿಸಿದ್ದಾರೆ. ಕಳೆದ ವಾರದಲ್ಲಿ ನೂತನ ಆಲ್ಟೊ 800 ಕಾರು 6500 ಬುಕ್ಕಿಂಗ್‌ಗಳನ್ನು ಗಿಟ್ಟಿಸಿಕೊಂಡಿತ್ತು. ಅಲ್ಲದೆ ಇದು ಅಕ್ಟೋಬರ್ 16ರ ವೇಳೆಗೆ ಹತ್ತು ಸಾವಿರ ದಾಟುವ ವಿಶ್ವಾಸವನ್ನು ಕಂಪನಿ ಹೊಂದಿದೆ.

ಜನರಲ್ ಮೋಟಾರ್ಸ್ ಇಂಡಿಯಾ ಉಪಾಧ್ಯಕ್ಷ ಪಿ ಬಾಲೇಂದ್ರನ್ ಸಹ ಇದನ್ನೇ ಪ್ರತಿಪಾದಿಸಿದ್ದು, ಕಳೆದ ತಿಂಗಳಿಗೆ ಹೋಲಿಸಿದರೆ ಮಾರಾಟದಲ್ಲಿ ಶೇಕಡಾ 10ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದಿದ್ದಾರೆ. ಹೊಸ ಕಾರುಗಳನ್ನು ಲಾಂಚ್ ಮಾಡಿರುವುದೇ ಇದರ ಹಿಂದಿನ ಪ್ರಮುಖ ಕಾರಣವಾಗಿದೆ. ಹಾಗಿದ್ದರೂ ಹಬ್ಬದ ಸೀಸನ್‌ನಲ್ಲಿ ಸಾಮಾನ್ಯವಾಗಿ ಮಾರಾಟ ಶೇಕಡಾ 20-25 ರಷ್ಟು ಬೆಳೆಯುತ್ತಿರುವುದಕ್ಕೆ ಹೋಲಿಸಿದರೆ ಈ ಬಾರಿ ತುಂಬಾನೇ ಕಠಿಣ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂಬ ಆತಂಕ ಕೂಡಾ ಕಾಡುತ್ತಿದೆ.

ಇಂಧನ ಬೆಲೆಯಲ್ಲಿ ಕಂಡುಬಂದಿರುವ ಗಣನೀಯ ಹೆಚ್ಚಳ, ಬಡ್ಡಿದರ ಏರಿಕೆ ಹಾಗೂ ಎಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ ಮಾರಾಟ ಶೇಕಡಾ 0.27ರಷ್ಟು ಕುಸಿತ ಅನುಭವಿಸಿರುವುದು ಹಿನ್ನಡೆಗೆ ಕಾರಣವಾಗಿದೆ. ಕಳೆದ ಬಾರಿಗೆ ಹೋಲಿಸಿದರೆ ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಈ ವರೆಗೆ 9,09,972 ಯುನಿಟ್‌ಗಳನ್ನು ಮಾತ್ರ ಸೇಲ್ ಮಾಡಲಾಗಿದೆ. ಕಳೆದ ಬಾರಿ ಇದು 9,12,455 ರಷ್ಟಾಗಿತ್ತು. ಈ ಎಲ್ಲ ಬಿಕ್ಕಟ್ಟನ್ನು ನಿವಾರಿಸಿಕೊಳ್ಳಲು ವಾಹನ ಮೇಳದಲ್ಲಿ ಭಾರಿ ಆಫರ್‌ಗಳೊಂದಿಗೆ ವಾಹನ ತಯಾರಕರ ಆಗಮನವಾಗಿದೆ.

ಮಾರುತಿ ನ್ಯೂ ಆಲ್ಟೊ 800

ಮಾರುತಿ ನ್ಯೂ ಆಲ್ಟೊ 800

ಬಿಡುಗಡೆ ದಿನಾಂಕ- ಅಕ್ಟೋಬರ್ 16

ಟಾಟಾ ಇಂಡಿಗೊ ಮಾಂಝಾ ಕ್ಲಬ್ ಕ್ಲಾಸ್

ಟಾಟಾ ಇಂಡಿಗೊ ಮಾಂಝಾ ಕ್ಲಬ್ ಕ್ಲಾಸ್

ಬಿಡುಗಡೆ ದಿನಾಂಕ- ಅಕ್ಟೋಬರ್ 16

ಟಾಟಾ ಸಫಾರಿ ಸ್ಟ್ರೋಮ್

ಟಾಟಾ ಸಫಾರಿ ಸ್ಟ್ರೋಮ್

ಬಿಡುಗಡೆ ದಿನಾಂಕ- ಅಕ್ಟೋಬರ್ 17

ಸ್ಯಾಂಗ್ಯೊಂಗ್ ರೆಕ್ಸ್ಟಾನ್

ಸ್ಯಾಂಗ್ಯೊಂಗ್ ರೆಕ್ಸ್ಟಾನ್

ಬಿಡುಗಡೆ ದಿನಾಂಕ- ಅಕ್ಟೋಬರ್ 17

ಹೊಂಡಾ ಬ್ರಿಯೊ ಆಟೊಮೆಟಿಕ್

ಹೊಂಡಾ ಬ್ರಿಯೊ ಆಟೊಮೆಟಿಕ್

ಬಿಡುಗಡೆ ದಿನಾಂಕ- ಅಕ್ಟೋಬರ್ 18

ನ್ಯೂ ಚೆವ್ರೊಲೆಟ್ ಸ್ಪಾರ್ಕ್

ನ್ಯೂ ಚೆವ್ರೊಲೆಟ್ ಸ್ಪಾರ್ಕ್

ಬಿಡುಗಡೆ ದಿನಾಂಕ- ಇದೇ ತಿಂಗಳಲ್ಲಿ

ನ್ಯೂ ಫೋರ್ಡ್ ಫಿಗೊ

ನ್ಯೂ ಫೋರ್ಡ್ ಫಿಗೊ

ಬಿಡುಗಡೆ ದಿನಾಂಕ- ಅಕ್ಟೋಬರ್ 15

More from DriveSpark

Article Published On: Monday, October 15, 2012, 12:03 [IST]
English summary
Festive season, the domestic automobile market will see as many as six new vehicles that include Marutis new Alto, Tata Motors' Indigo Manza Club Class and Safari storme, Rexton from the stable of Mahindra & Mahindra's Korean arm Ssangyong and the new Ford Figo.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+